/newsfirstlive-kannada/media/media_files/2025/08/26/ganesha-2025-08-26-19-02-17.jpg)
ನಾಳೆ ವಿಘ್ನವಿನಾಶಕ, ಮೂಷಿಕ ವಾಹನ, ಮೋದಕ ಪ್ರಿಯ, ವಿನಾಯಕನ ಹಬ್ಬ. ಗಣೇಶನ ಕೂರಿಸಿ ಸಂಭ್ರಮಿಸುವವರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಖಡಕ್ ನಿಯಮಗಳನ್ನ ಕೂಡ ಜಾರಿ ಮಾಡಿದೆ. ಅದ್ರಲ್ಲೂ ಪರಿಸರ ಸ್ನೇಹಿ ಗಣಪನ ಆಚರಣೆಗೆ ಕರೆ ಕೊಟ್ಟಿರುವ ಬಿಬಿಎಂಪಿ ನೀವು ಕೂರಿಸುವ ಗಣೇಶನನ್ನ ವಿಸರ್ಜನೆ ಮಾಡಿಸೋಕೆ ತಯಾರಾಗಿದೆ. ಹಾಗಿದ್ರೆ, ನೀವು ಕೂರಿಸೋ ಮೂರ್ತಿ ವಿಸರ್ಜನೆಗೆ ಎಲ್ಲೆಲ್ಲಿ ಅವಕಾಶ ಕೊಟ್ಟಿದ್ದಾರೆ ಗೊತ್ತಾ?
41 ಕೆರೆ-ಕಲ್ಯಾಣಿ ಹಾಗೂ 489 ಸಂಚಾರಿ ವಾಹನಗಳ ಸಿದ್ಧತೆ
ಗಣೇಶ ಮೂರ್ತಿ ವಿಸರ್ಜನೆಗಾಗಿ ಈಗಾಗಲೇ ಬಿಬಿಎಂಪಿ ಸಕಲ ತಯಾರಿ ಮಾಡಿಕೊಂಡಿದೆ. ಹೀಗಾಗಿ ಕೆರೆ, ಕಲ್ಯಾಣಿ, ಸಂಚಾರಿ ವಾಹನಗಳ ವ್ಯವಸ್ಥೆಯನ್ನ ಮಾಡಿಕೊಳ್ಳುತ್ತಿದೆ. ಯಡಿಯೂರು ಕೆರೆ ಅಂತೂ ಮದುವಣಗಿತ್ತಿ ಹಾಗೇ ಜಗಮಗಿಸುವ ಲೈಟ್ಸ್ಗಳಿಂದ ಅಲಂಕೃತಗೊಂಡಿದೆ. ಇನ್ನ ಸ್ಯಾಂಕಿ ಟ್ಯಾಂಕ್, ಹಲಸೂರು ಕೆರೆ ಸೇರಿದಂತೆ ಒಟ್ಟು 41 ಕೆರೆಗಳು ಹಾಗೂ ತಾತ್ಕಾಲಿಕ ಕಲ್ಯಾಣಿಗಳನ್ನ ಗಣೇಶನ ವಿಸರ್ಜನೆಗೆ ವ್ಯವಸ್ಥೆಯನ್ನ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ಅಧಿಕೃತವಾಗಿ ರಚನೆಗೊಂಡ ಗ್ರೇಟರ್ ಬೆಂಗಳೂರು ಪ್ರಾಧಿಕಾರ
ಸುಮುಖನ ವಿಸರ್ಜನೆಗೆ ತಯಾರಿ
- ಒಟ್ಟು 489 ಸಂಚಾರಿ ವಾಹನ ಅಂದ್ರೆ ಮೊಬೈಲ್ ಟ್ಯಾಂಕ್‌ಗಳ ವ್ಯವಸ್ಥೆ
- ಪ್ರತಿಷ್ಠಾಪನೆಗೆ ಅನುಮತಿ ಪಡೆಯಲು 75 ಏಕಗವಾಕ್ಷಿ ಕೇಂದ್ರಗಳ ವ್ಯವಸ್ಥೆ
- ಹೇರೋಹಳ್ಳಿ ಕೆರೆಯ ಕಲ್ಯಾಣಿಯಲ್ಲಿಲ್ಲ ವಿನಾಯಕನ ವಿಸರ್ಜನೆಗೆ ಅವಕಾಶ
- ಮೇಲ್ವಿಚಾರಣೆಗಾಗಿ ಬಿಬಿಎಂಪಿಯಿಂದ ನೋಡಲ್ ಅಧಿಕಾರಿಗಳ ನೇಮಕ
- ನಾಗರಿಕರ ಮಾಹಿತಿಗಾಗಿ ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಹೆಚ್ಚಿನ ವಿವರ ಲಭ್ಯ
- ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕವೂ ಮಾಹಿತಿ ಪಡೆಯಲು ಅವಕಾಶ
2025ರ ಆಗಸ್ಟ್ 27 ಅಂದ್ರೆ ನಾಳೆಯಿಂದ ಸೆಪ್ಟೆಂಬರ್ 17ರವರೆಗೆ, ಸಾರ್ವಜನಿಕರು ಪರಿಸರ ಸ್ನೇಹಿ ಹಾಗೂ ಮಣ್ಣಿನಿಂದ ತಯಾರಿಸಲಾದ ಗಣೇಶ ಮೂರ್ತಿಗಳನ್ನು ಇಲ್ಲಿ ವಿಸರ್ಜನೆ ಮಾಡಿಕೊಳ್ಳಬಹುದು. ಒಟ್ನಲ್ಲಿ ಗಣೇಶ ಹಬ್ಬಕ್ಕೆ ಬೇಕಾದ ಎಲ್ಲಾ ತಯಾರಿಗಳು ಬಿರುಸಿನಿಂದ ಸಾಗುತಿದ್ದು. ಇನ್ನೇನೇ ಇದ್ರೂ ಗಣೇಶನನ್ನ ಕೂರಿಸಿ ಹಬ್ಬ ಆಚರಿಸೋದೊಂದೇ ಬಾಕಿ.
ಇದನ್ನೂ ಓದಿ: ವೃದ್ಧ ದಂಪತಿಯನ್ನ ಹೊರಗೆ ಹಾಕಿ ಮನೆಗೆ ಬೀಗ ಹಾಕಿದ ಬ್ಯಾಂಕ್! ಕರುಣಾಜನಕ ಕತೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ