/newsfirstlive-kannada/media/media_files/2025/08/26/haveri-idfs-first-bank-3-2025-08-26-18-24-18.jpg)
ವಯಸ್ಸಾದ ದಂಪತಿ, ಮಾನಸಿಕ ಅಸ್ವಸ್ಥ ಮಗ. ಸೂರು ಮತ್ತು ಮಗಳ ಮದುವೆಗಾಗಿ ಸಾಲ ಮಾಡಿಕೊಂಡಿದ್ದಾರೆ. ಕಳೆದ ಆರೇಳು ತಿಂಗಳಿನಿಂದ ಗೃಹಸಾಲ ಕಟ್ಟಿಲ್ಲ. ಬ್ಯಾಂಕ್ ಯಾವುದೇ ನೋಟಿಸ್ ನೀಡದೇ ಮನೆಯ ವಯೋವೃದ್ಧ ದಂಪತಿ ಹಾಗೂ ಮಾನಸಿಕ ಅಸ್ವಸ್ಥತ ಮಗನನ್ನ ಹೊರಗೆ ಹಾಕಿ ಮನೆ ಸೀಜ್ ಮಾಡಿದೆ. ಈಗ ಕುಟುಂಬ ಬೀದಿಪಾಲಾಗಿದೆ.
ಇದನ್ನೂ ಓದಿ:NSG ಕಮ್ಯಾಂಡೋ ಆಗಲು ಏನೇನು ಅರ್ಹತೆ ಇರಬೇಕು? ಇಲ್ಲಿದೆ ಫುಲ್ ಡೀಟೈಲ್ಸ್
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮೆಳಾಗಟ್ಟಿ ಗ್ರಾಮದ ಮನೆಯೊಂದನ್ನ ಬ್ಯಾಂಕ್ ಸೀಜ್ ಮಾಡಿದೆ. ಗ್ರಾಮದ ಸಹಾದೇವಪ್ಪ ಕೊಳೂರು (60) ಅನ್ನೋರು ಐಡಿಎಫ್ಸಿ ಬ್ಯಾಂಕ್ನಲ್ಲಿ ಕಳೆದ ಎರಡೂವರೆ ವರ್ಷಗಳ ಹಿಂದೆ ಗೃಹಸಾಲ ಮಾಡಿದ್ದರು. ಒಂದೂವರೆ ವರ್ಷ ಸಾಲದ ಕಂತು ದುಡಿದು ಕಟ್ಟಿಸಿದ್ದಾರೆ. ಆದರೆ ಅನಾರೋಗ್ಯದ ಸಮಸ್ಯೆಯಿಂದ ಸಹದೇವಪ್ಪ ಕಟ್ಟಿಲ್ಲ. ಯಾವುದೇ ಕಟ್ಟಡ ಕೆಲಸಕ್ಕೆ ಹೋದಾಗ ಮನೆಯ ಮೇಲಿನಿಂದ ಬಿದ್ದು ಕಾಲು ಮುರಿದುಕೊಂಡಿದ್ದಾರೆ.
ಮಾನಸಿಕ ಅಸ್ವಸ್ಥತ ಮಗ, ವಯಸ್ಸಾದ ಹೆಂಡತಿ ಹೀಗೆ ಸಾಲವನ್ನ ಕಟ್ಟದೇ ಬಿಟ್ಟಿದ್ದಾರೆ. ಈಗ ಕಳೆದ ಮೂರು ತಿಂಗಳ ಹಿಂದೆ ಯಾವುದೇ ನೋಟಿಸ್ ನೀಡದೇ ನೀವು ಸಾಲ ಕಟ್ಟಬೇಕು. ಇಲ್ಲಾವಾದರೆ ಮನೆ ಸೀಜ್ ಮಾಡುತ್ತೇವೆ ಅಂತಾ ಬ್ಯಾಂಕ್ ಸಿಬ್ಬಂದಿ ಹೇಳಿ ಹೋಗಿದ್ದರು. ಈಗ ಏಕಾಏಕಿ ಬಂದು ಮನೆಗೆ ಐಡಿಎಫ್ಸಿ ಫಸ್ಟ್ ಬ್ಯಾಂಕ್ ಮನೆಗೆ ನೋಟಿಸ್ ಅಂಟಿಸಿ ಕುಟುಂಬದ ಸದಸ್ಯರನ್ನ ಹೊರಗೆ ಹಾಕಿ ಸೀಜ್ ಮಾಡಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಸುರಂಗ ರಸ್ತೆ ನಿರ್ಮಾಣಕ್ಕೆ ಟೆಂಡರ್ ಕರೆದ ಸರ್ಕಾರ
ಏನೋ ಮಾಡೋದು ಈಗ. ದುಡಿಯುವ ಶಕ್ತಿ ಇದ್ದಾಗ ಕಟ್ಟಿದ್ದೇವೆ. ಈಗ ಗಂಡ ಕಾಲು ಮುರಿದುಕೊಂಡು ಮನೆಯಲ್ಲಿ ಇದ್ದಾನೆ. ಮಗ ಮಾನಸಿಕ ಅಸ್ವಸ್ಥ. ನಾನೇ ದುಡಿದು ಮನೆ ನಡೆಸುತ್ತಿದ್ದೇನೆ. ಹಂಗೆ ಸಾಲ ಕಟ್ಟಬೇಕು ಎಂದು ವಯೋವೃದ್ಧೆ ಗಿರೀಜವ್ವ ಕಣ್ಣೀರು ಇಟ್ಟಿದ್ದಾರೆ.
ಮೂರು ವರ್ಷಗಳ ಹಿಂದೆ ಮಗಳ ಮದುವೆ ಹಾಗೂ ಮಗನಿಗೆ ಅನಾರೋಗ್ಯದ ಹಿನ್ನೆಲೆ ಕುಟುಂಬ ಬಹಳಷ್ಟು ಕಂಗಾಲ್ ಆಗಿದೆ. ಸಹದೇವಪ್ಪ ಕೂಲಿ ನಾಲಿ ಮಾಡಿ ಒಂದೂವರೆ ವರ್ಷಗಳ ಕಾಲ ಸಾಲ ಕಟ್ಟಿದ್ದಾನೆ. ಈಗ ಸಹದೇವಪ್ಪಗೂ ಕಾಲು ಮುರಿತವಾಗಿದೆ. ಅವರು ದುಡಿಯುವ ಶಕ್ತಿ ಕಳೆದುಕೊಂಡಿದ್ದಾನೆ. ಗೃಹ ಸಾಲ ಕಟ್ಟಲಾಗದೆ ಕುಟುಂಬ ಕಂಗಲಾಗಿದೆ.
ಬ್ಯಾಂಕ್ ಸಿಬ್ಬಂದಿ ಯಾವುದೇ ನೋಟೀಸ್ ನೀಡಿದೆ ಸೀಜ್ ಮಾಡಿದ್ದಾರೆ. ಆ ಕುಟುಂಬಕ್ಕೆ ಯಾವುದೇ ಹೇಳದೆ ಕೇಳದೆ ಮನೆಯಿಂದ ಹೊರಗೆ ಹಾಕಿ ಸೀಜ್ ಮಾಡಿದ್ದಾರೆ. ಜಿಲ್ಲಾಡಳಿತ ಅವರಿಗೆ ಸೂಕ್ತವಾದ ವ್ಯವಸ್ಥೆ ಮಾಡಬೇಕು. ಮೂರು ಜನ ಏನಾದರೂ ಮಾಡಿಕೊಂಡರೆ ಯಾರು ಜವಾಬ್ದಾರಿ? ಗ್ರಾಮದ ಜನರು ಊಟ ಕೊಡುತ್ತಿದ್ದಾರೆ. ನೊಂದ ಕುಟುಂಬಕ್ಕೆ ಜಿಲ್ಲಾಡಳಿತ ನ್ಯಾಯ ಕೊಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಶಿವಪ್ಪ, ಗ್ರಾಮಸ್ಥ
ಇದನ್ನೂ ಓದಿ:ಆರ್‌ಎಸ್‌ಎಸ್ ಗೀತೆ ಹಾಡಿದ್ದಕ್ಕೆ ಕ್ಷಮೆ ಕೇಳಿದ ಡಿಸಿಎಂ ಡಿ.ಕೆ.ಶಿವಕುಮಾರ್
ಒಟ್ಟಿನಲ್ಲಿ ಮಗಳ ಮದುವೆ ಮತ್ತು ಇರೋದಕ್ಕೆ ಸೂರು ಮಾಡಿಕೊಂಡು ಸಾಲ ಮಾಡಿಕೊಂಡಿದ್ದಾರೆ. ಆದರೆ ಬ್ಯಾಂಕ್ ಸಿಬ್ಬಂದಿ ಯಾವುದೇ ನೋಟಿಸ್ ನೀಡದೇ ಮನೆಯನ್ನ ಸೀಜ್ ಮಾಡಿದ್ದು ಸ್ಥಳೀಯರ ಅಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಜಿಲ್ಲಾಡಳಿತ ಹಾಗೂ ಅಧಿಕಾರಿಗಳು ಮಾನವೀಯತೆ ದೃಷ್ಟಿಯಿಂದ ಸೂರು ಕಲ್ಪಿಸುವ ವ್ಯವಸ್ಥೆ ಮಾಡಬೇಕಿದೆ.
ಇದನ್ನೂ ಓದಿ: ಯೂಟ್ಯೂಬರ್ ಸಮೀರ್‌ಗೆ ಪೊಲೀಸ್ ವಿಚಾರಣೆ ಬಿಸಿ ಹೇಗಿತ್ತು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ