/newsfirstlive-kannada/media/media_files/2025/08/26/dharmasthala-chennayya-2025-08-26-15-39-12.jpg)
ಧರ್ಮಸ್ಥಳದ ಬುರುಡೆ ಪ್ರಕರಣದಲ್ಲಿ ಚೆನ್ನಯ್ಯಗೆ 12 ದಿನಗಳ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಇವತ್ತು ಎಸ್ಐಟಿ ಅಧಿಕಾರಿಗಳು ಕೋರ್ಟ್ಗೆ ಹಾಜರುಪಡಿಸಿದ್ದರು. ಕೋರ್ಟ್ ಮತ್ತೆ ಚಿನ್ನಯ್ಯನನ್ನು ಕಸ್ಟಡಿಗೆ ನೀಡಿ ಆದೇಶ ನೀಡಿದೆ.
SIT ಕಸ್ಟಡಿಗೆ ನೀಡಿ ಕೋರ್ಟ್ ಆದೇಶ
ಧರ್ಮಸ್ಥಳದಲ್ಲಿ ನೂರಾರು ಶ*ವಗಳನ್ನು ಹೂತಿದ್ದೇನೆ ಎಂದಿದ್ದ ಮಾಸ್ಕ್ಮ್ಯಾನ್ಗೆ ಮತ್ತೆ ಕೋರ್ಟ್ ಎಸ್ಐಟಿ ಕಸ್ಟಡಿಗೆ ವಹಿಸಿದೆ. ಕಳೆದ ಜುಲೈ 23ರಂದು ಕೋರ್ಟ್ಗೆ ಹಾಜರುಪಡಿಸಿ 12 ದಿನಗಳ ಕಾಲ ಪಡೆದಿದ್ದ ಕಸ್ಟಡಿ ಅವಧಿ ಇವತ್ತು ಅಂತ್ಯವಾದ ಕಾರಣ ಎಸ್ಐಟಿ ಅಧಿಕಾರಿಗಳು ಇಂದು ಚೆನ್ನಯ್ಯನನ್ನು ಕೋರ್ಟ್ಗೆ ಹಾಜರುಪಡಿಸಿದ್ದರು. ವಿಚಾರಣೆ ಮುಂದುವರಿಸಲು ಕಸ್ಟಡಿಗೆ ನೀಡುವಂತೆ ಎಸ್ಐಟಿ ಮನವಿ ಪುರಸ್ಕರಿಸಿದ ನ್ಯಾಯಾಲಯ ಮತ್ತೆ ಕಸ್ಟಡಿಗೆ ನೀಡಿ ಆದೇಶ ನೀಡಿದೆ.
ಇದನ್ನೂ ಓದಿ:ರಾಧಿಕಾ ಕುಮಾರಸ್ವಾಮಿ ವಿಚಾರಣೆ ಹಿಂದಿನ ಸಿಕ್ರೇಟ್ ಹೇಳಿದ ಜಮೀರ್..!
SIT ಕಚೇರಿಗೆ ಪ್ರಣವ್ ಮೊಹಾಂತಿ ಭೇಟಿ
ಬುರುಡೆ ಕೇಸ್ ತನಿಖೆ ಪ್ರಗತಿ ಬಗ್ಗೆ ತಿಳಿಯಲು ಇವತ್ತು ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಎಸ್ಐಟಿ ಕಚೇರಿಗೆ ಭೇಟಿ ನೀಡಿದ್ದರು. ಅಧಿಕಾರಿಗಳ ಜೊತೆ ಸಭೆ ನಡೆಸಿ ತನಿಖೆಯಲ್ಲಿ ಪತ್ತೆಯಾದ ಅಂಶಗಳ ಕುರಿತು ಮಾಹಿತಿ ಪಡೆದ್ರು. ಚೆನ್ನಯ್ಯನ ಹೇಳಿಕೆ ಆದಾರದಲ್ಲಿ ಸ್ಥಳ ಪರಿಶೋಧನೆ ನಡೆಸಿದ್ದು, ಬುರುಡೆ ಚೆನ್ನಯ್ಯ ಬಹಿರಂಗ ಪಡಿಸಿರುವ ಕೆಲವರಿಗೆ ಸಂಕಷ್ಟ ಎದುರಾಗಿದೆ. ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣಬರ್ ಹಾಗೂ ಜಯಂತ್ಗೆ ಸಂಕಷ್ಟ ಎದುರಾಗಿದೆ. ಜಯಂತ್ ಟಿ ಹಾಗೂ ಗಿರೀಶ್ ಮಟ್ಟಣ್ಣವರ್ಗೆ ನೋಟಿಸ್ ನೀಡಲು ಎಸ್ಐಟಿ ಮುಂದಾಗಿದೆ.
ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸ್ತಿರೋ ಎಸ್ಐಟಿ ಅಧಿಕಾರಿಗಳು ಪ್ರಕರಣದ ಜೊತೆ ನಂಟು ಹೊಂದಿರುವ ಎಲ್ಲರನ್ನೂ ವಿಚಾರಣೆ ನಡೆಸ್ತಿದ್ದು ಬುರುಡೆ ಪ್ರಕರಣದ ಷಡ್ಯಂತ್ರಗಳು ಯಾರು ಅನ್ನೋದು ಬಯಲಾಗಬೇಕಿದೆ.
ಇದನ್ನೂ ಓದಿ:‘ನಾವು ರವಿ ಬೆಳಗೆರೆ ಕಡೆಯವರು ಸ್ವಾಮಿ..’ ದರ್ಶನ್ ಕೇಸ್ ವಿಚಾರಣೆ ವೇಳೆ ಕೋರ್ಟ್ನಲ್ಲಿ ಅನಾಮಿಕ ಟ್ವಿಸ್ಟ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ