ಧರ್ಮಸ್ಥಳ ಬುರುಡೆ ಕೇಸ್​ಗೆ ಮತ್ತೆ ಟ್ವಿಸ್ಟ್​.. ಅನಾಮಿಕನ ಸ್ನೇಹಿತ ಬಿಚ್ಚಿಟ್ಟ ಸ್ಪೋಟಕ ಮಾಹಿತಿ..!

ಧರ್ಮಸ್ಥಳದಲ್ಲಿ ಎಸ್‌ಐಟಿ ನಡೆಸುತ್ತಿರುವ ಶೋಧ ಕಾರ್ಯಕ್ಕೆ ಸಂಬಂಧಿಸಿದಂತೆ ಅನಾಮಿಕನ ಜೊತೆ ಕೆಲಸ ಮಾಡ್ತಿದ್ದ ವ್ಯಕ್ತಿಯೊಬ್ರು ಸ್ಫೋಟಕ ಮಾಹಿತಿ ಬಯಲು ಮಾಡಿದ್ದಾರೆ. ಮಾಸ್ಕ್‌ ಮ್ಯಾನ್‌ ಕತೆಯ ಬಗ್ಗೆ ತನ್ನದೇ ವ್ಯಾಖ್ಯಾನ ಮಾಡಿದ್ದು, ಆತ ಬುರುಡೆ ಬಿಟ್ನಾ ಅನ್ನೋ ಅನುಮಾನ ಕಾಡುವಂತೆ ಮಾಡಿದೆ.

author-image
Veenashree Gangani
dharmasthala case(6)
Advertisment

ಮಂಗಳೂರು: ಅನಾಮಿಕ ದೂರುದಾರ, ಮಾಸ್ಕ್​ಮ್ಯಾನ್ ಮಾತು ಕೇಳಿ ಎಸ್​ಐಟಿ ಅಧಿಕಾರಿಗಳು ಅದು ಎಷ್ಟೇ ಅಗೆದರೂ ಕಳೆಬರಹಗಳು ಮಾತ್ರ ಗೋಚರಿಸ್ತಿಲ್ಲ. ಸ್ಪಾಟ್ ನಂಬರ್ 1ರಿಂದ 18ರವರೆಗೆ ಹುಡುಕಿ ಸುಸ್ತಾದ ಅಧಿಕಾರಿಗಳು ಸದ್ಯ ಆಪರೇಷನ್​ಗೆ ವಿರಾಮ ಘೋಷಿಸಿದ್ದಾರೆ.

ಈ ಮಧ್ಯೆ ಎಸ್​ಐಟಿ ವಿಚಾರಣೆಗೆ ಒಳಪಟ್ಟಿದ್ದ ಮತ್ತೋರ್ವ ವ್ಯಕ್ತಿ ಹೊಸ ಬಾಂಬ್ ಸಿಡಿಸಿದ್ದು, ಶ*ವ ಹೂತ್ತಿಟ್ಟ ಪ್ರಕರಣವನ್ನೇ ಉಲ್ಟಾಪಲ್ಟಾ ಮಾಡಿದ್ದಾನೆ.

dharmasthala case

ಧರ್ಮಸ್ಥಳದಲ್ಲಿ ಮಾಸ್ಕ್​ಮ್ಯಾನ್‌ ಜೊತೆ ಕೆಲಸ ಮಾಡಿದ್ದ ಹಾಗೂ ಎಸ್​ಐಟಿ ವಿಚಾರಣೆಯನ್ನೂ ಎದುರಿಸಿರುವ ಮಂಡ್ಯ ಮೂಲದ ರಾಜು ಬುರುಡೆ ಸೀಕ್ರೆಟ್ ಬಯಲು ಮಾಡಿದ್ದಾನೆ. ಅಂದಹಾಗೆ ರಾಜು ಧರ್ಮಸ್ಥಳದಲ್ಲಿ ನಾಲ್ಕೈದು ವರ್ಷ ಕೆಲಸ ಮಾಡಿದ್ದಾರಂತೆ. ಕಳೆದ 10 ವರ್ಷಗಳ ಹಿಂದೆಯೇ ಕೆಲಸ ಬಿಟ್ಟು ಊರಿಗೆ ಬಂದಿದ್ರಂತೆ. ಧರ್ಮಸ್ಥಳದಲ್ಲಿ ನೂರಾರು ಶ*ವ ಹೂತಿರೋದು ಸುಳ್ಳು, ಹಣಕ್ಕಾಗಿ ಮಾಸ್ಕ್​ಮ್ಯಾನ್ ಸುಳ್ಳು ಹೇಳ್ತಿದ್ದಾನೆ, ಧಣಿಗಳಿಗೆ ಕೆಟ್ಟ ಹೆಸರು ತರ್ತಿದ್ದಾನೆ ಅಂತ ಕಿಡಿಕಾರಿದ್ದಾನೆ.

ಇದನ್ನೂ ಓದಿ:ದರ್ಶನ್ ಸೆಲೆಬ್ರಿಟಿಗಳಿಗೆ ಗುಡ್​ನ್ಯೂಸ್​.. ಡೆವಿಲ್ ಸಿನಿಮಾ ಫಸ್ಟ್ ಸಾಂಗ್​ ರಿಲೀಸ್​ಗೆ ಮುಹೂರ್ತ ಫಿಕ್ಸ್​

dharmasthala case(7)

‘‘ಧರ್ಮಸ್ಥಳದಲ್ಲಿ ನೂರಾರು ಶ*ವ ಹೂತಿರೋದು ಸುಳ್ಳು. ಮಾಸ್ಕ್​​ ಹಾಕಿಕೊಂಡಿರೋನು ಸುಳ್ಳು ಹೇಳುತ್ತಿದ್ದಾನೆ. ದುಡ್ಡಿನ ಆಸೆಗೆ ಮಾಸ್ಕ್​​ ಮ್ಯಾನ್​ ಸುಳ್ಳು ಹೇಳ್ತಿದಾನೇನೋ? 4 ವರ್ಷಗಳ ಕಾಲ ಧರ್ಮಸ್ಥಳದಲ್ಲಿ‌ ಕೆಲಸ ಮಾಡಿದ್ದೇನೆ. ಮಾಸ್ಕ್ ಹಾಕಿರೋ ವ್ಯಕ್ತಿ, ನಾನು ಅಕ್ಕಪಕ್ಕದ ಮನೆಯವ್ರು. ನಾನಿದ್ದಾಗ ನೋಡಿದ್ದು ಕೇವಲ ಎರಡು ಶ*ವಗಳು ಅಷ್ಟೇ. ಅದರಲ್ಲಿ ಗಂಡು, ಹೆಣ್ಣಿನ ಶ*ವ ಕೊಳೆತ ಸ್ಥಿತಿಯಲ್ಲಿದ್ದವು. ಈ ವೇಳೆ ಮಾಸ್ಕ್ ಮ್ಯಾನ್ ಅಣ್ಣ, ಎಲ್ಲಾ ಜೊತೆಗಿದ್ದರು. ಶ*ವ ಹೂತಿದ್ರೆ ಮೂಳೆ ಸಿಗಬೇಕಿತ್ತಲ್ವಾ?’’

ರಾಜು, ಮಂಡ್ಯ

dharmasthala case(3)

ಮುಸುಕುಧಾರಿ ಹಾಗೂ ಆತನ ಕುಟುಂಬಸ್ಥರು ಕೊಳ್ಳೇಗಾಲದವರು ಅಂತ ರಾಜು ಹೇಳಿದ್ದಾರೆ. ಇನ್ನು, ಅವರ ಮಾವನ ಹೆಂಡತಿ ತಮಿಳುನಾಡಿನವರು, ಆದ್ರೆ, ಅನಾಮಿಕ ಕೆಲಸ ಬಿಟ್ಟ ಮೇಲೆ ತಮಿಳುನಾಡಿಗೆ ಹೋಗಿರಬಹುದು ಅಂತ ರಾಜು ಅನುಮಾನ ವ್ಯಕ್ತಪಡಿಸಿದ್ದಾರೆ. ಕೆಲಸ ಕೊಟ್ಟು, ಉಳಿದುಕೊಳ್ಳೋಕೆ ಮನೆ ಕೊಟ್ಟು, ಅನ್ನ ಕೊಟ್ಟ ಧಣಿಗಳು ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಮೇಲೆ ಅಪವಾದ ಹೊರಿಸ್ತಿರೋದು ತಪ್ಪು ಅಂತ ರಾಜು ಬೇಸರ ವ್ಯಕ್ತಪಡಿಸಿದ್ದಾರೆ. ಮಾಸ್ಕ್​ಮ್ಯಾನ್ ಏತಕ್ಕಾಗಿ ಸುಳ್ಳು ಹೇಳ್ತಿದ್ದಾನೆ ಅನ್ನೋದು ರಾಜು ಅವರಿಗೂ ಕಾಡ್ತಿರುವ ಅನುಮಾನ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Dharmasthala case
Advertisment