/newsfirstlive-kannada/media/media_files/2025/09/01/pralhad-joshi-by-vijayendra-2025-09-01-16-42-29.jpg)
ಧರ್ಮಸ್ಥಳ (Dharmasthala) ವಿರುದ್ಧದ ಅಪಪ್ರಚಾರ ಖಂಡಿಸಿ ಬಿಜೆಪಿ ಧರ್ಮದ ರಕ್ಷಣಾ ಸಮಾವೇಶ ನಡೆಸಿದೆ. ಧರ್ಮ ಕ್ಷೇತ್ರದಲ್ಲಿ ಇಂದು ನಡೆದ ಬೃಹತ್ ಸಮಾವೇಶದಲ್ಲಿ ಬಿಜೆಪಿ ನಾಯಕರು ಷಡ್ಯಂತ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಎನ್​ಐಎ ತನಿಖೆಗೆ ಒತ್ತಾಯಿಸಿದರು.
ಪಹ್ಲಾದ್ ಜೋಶಿ ಹೇಳಿದ್ದೇನು?
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭಾಷಣ ಆರಂಭಿಸುತ್ತಿದ್ದಂತೆಯೇ ಬುರುಡೆ ಸರ್ಕಾರಕ್ಕೆ ಧಿಕ್ಕಾರ ಎಂಬ ಘೋಷಣೆ ಕೂಗಿದರು. ಧರ್ಮಸ್ಥಳದ ಮೇಲೆ ಅಪಪ್ರಚಾರ ಮಾಡಿದವರ ವಿರುದ್ಧ ಕ್ರಮ ಆಗಬೇಕು. ಶನಿ ಸಿಂಗಾಪುರ್, ಶಬರಿಮಲೆ, ಈಗ ಧರ್ಮಸ್ಥಳ. SIT ಮಾಡಿದರು, ಆದರೆ ಬುರುಡೆ ತಂದವನ ವಿರುದ್ಧ ಕ್ರಮ ಆಗಿಲ್ಲ. ಬಾಹುಬಲಿ ಬೆಟ್ಟಬಿಟ್ಟು ಎಲ್ಲಾ ಕಡೆ ಅಗೆದರು. ಬೇರೆ ಕಡೆ ಅಗೆಯಿರಿ ನೋಡೋಣ? ದರ್ಗಾದಲ್ಲಿ ಇದೆ ಅಂತ ಆರೋಪ ಮಾಡ್ತೇನೆ, ಅಗೀರಿ ನೋಡೋಣ. ನಮ್ಮ ಧಾರ್ಮಿಕ ಮುಖಂಡರ ಮೇಲೆ ಆರೋಪ ಮಾಡಿದ್ರೆ ಅಲುಗಾಡುತ್ತೆ ಎಂದು ಯೋಚನೆ ಮಾಡಿದ್ದಾರೆ. ಕಾಂಗ್ರೆಸ್​ನವರು ಒಂದು ವರ್ಗದ ಪರವಾಗಿ ನಿಂತಿದ್ದಾರೆ ಎಂದು ಗುಡುಗಿದರು.
ಇದನ್ನೂ ಓದಿ:ಸಚಿವ ಜಮೀರ್​ಗೆ 2 ಕೋಟಿ ಹಣ.. ಲೋಕಾಯುಕ್ತ ವಿಚಾರಣೆಯಲ್ಲಿ ನಟಿ ರಾಧಿಕಾ ಹೇಳಿದ್ದೇನು?
ಮಂಜುನಾಥ್ ಸಿದ್ದರಾಮಯ್ಯಗೆ ಬುದ್ಧಿ ಕೊಡು
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭಾಷಣ ಮಾಡಿ.. ಮಂಜುನಾಥನಿಗೆ ಅಪಮಾನ ಮಾಡುವ ಕಾಂಗ್ರೆಸ್​​​ಗೆ ಪಾಠ ಕಲಿಸಬೇಕು. ಬುರುಡೆ ಪ್ರಕರಣದಲ್ಲಿ SIT ರಚನೆಯನ್ನ ಸ್ವಾಗತಿಸಿದ್ವಿ. ಆದರೆ ಅಪಪ್ರಚಾರ ತಡೆಯುವ ಕೆಲಸವನ್ನು ಸರ್ಕಾರ ಮಾಡಿಲ್ಲ. ಹಿಂದೂ ಕಾರ್ಯಕರ್ತರನ್ನ ತಕ್ಷಣ ಅರೆಸ್ಟ್ ಮಾಡ್ತಾರೆ. ಬುರುಡೆ ಪ್ರಕರಣದಲ್ಲಿ ಬೀದಿಯಲ್ಲಿ ಹೋಗುವ ಅಯೋಗ್ಯನ ದೂರಿನ ಪ್ರಾಥಮಿಕ ತನಿಖೆಯನ್ನೂ ಮಾಡಲ್ಲ.
ಇದನ್ನೂ ಓದಿ:ಸೋಷಿಯಲ್ ಮೀಡಿಯಾ ಬಳಸುವವರಿಗೆ ಪೊಲೀಸ್ ಇಲಾಖೆಯ ವಾರ್ನಿಂಗ್, ಕೇಸ್ ಬೀಳುತ್ತೆ ಹುಷಾರ್!
ಸೌಜನ್ಯ ಪ್ರಕರಣ ಮರು ತನಿಖೆಯಾಗಲಿ. ಬಿಜೆಪಿ ಸಂಪೂರ್ಣ ಬೆಂಬಲ ನೀಡುತ್ತದೆ. ಕಾಂಗ್ರೆಸ್ ಸರ್ಕಾರ ಕಿತ್ತೊಗೆಯುವವರೆಗೆ ಹಿಂದೂ ಕಾರ್ಯಕರ್ತರಿಗೆ ನೆಮ್ಮದಿಯಿಲ್ಲ. ಮಂಜುನಾಥನ ಭಕ್ತರ ಸಹನೆಯ ಕಟ್ಟೆ ಒಡೆದಿದೆ. SIT ತನಿಖೆ ಒಂದೆಡೆ ನಡೆಯಲಿ, ಧರ್ಮ ಒಡೆಯುವ ಕೆಲಸಕ್ಕೆ ವಿದೇಶದಿಂದ ಹಣ ಬರ್ತಿದೆ. ಅವರನ್ನ ಹತ್ತಿಕ್ಕಲು ಅಯೋಗ್ಯ ಕಾಂಗ್ರೆಸ್ ಸರ್ಕಾರದಿಂದ ಆಗಲ್ಲ. NIA ಅಥವಾ CBI ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಸೌಜನ್ಯ ಪ್ರಕರಣದಲ್ಲಿ ತನಿಖೆ ನಡೆಸಿ ಅವರ ಕುಟುಂಬಕ್ಕೆ ನ್ಯಾಯ ಕೊಡುವ ಕೆಲಸ ಮಾಡಲಿ. ಈ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ. ಸಿದ್ದರಾಮಯ್ಯ ಅವರೇ ನಿಮ್ಮ ಅಧಿಕಾರದಲ್ಲಿ ಧರ್ಮಸ್ಥಳ ಮೇಲೆ ಅಪಪ್ರಚಾರ ತಡೆಯಲು ಸಾಧ್ಯವಾಗಿಲ್ಲ. ಸಿದ್ದರಾಮಯ್ಯ ಅವರೇ ನಮ್ಮ ಧರ್ಮಸ್ಥಳ ಚಲೋ ಹಗುರವಾಗಿ ತೆಗೆದುಕೊಳ್ಳಬೇಡಿ. ಮಂಜುನಾಥಸ್ವಾಮಿ ನಿಮಗೂ ಬುದ್ಧಿ ಕೊಡಲಿ. ನೀವೂ ಧರ್ಮಸ್ಥಳಕ್ಕೆ ಬಂದು, ಮಂಜುನಾಥನ ದರ್ಶನ ಪಡೆಯಿರಿ. ಒಂದು ಕ್ಷಣವೂ ಆಲೋಚನೆ ಮಾಡದೆ NIAಗೆ ನೀಡಿ ಎಂದು ಆಗ್ರಹಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ