/newsfirstlive-kannada/media/media_files/2025/08/31/veerendra-heggade-2025-08-31-16-22-01.jpg)
ಮಂಗಳೂರು: ಎಸ್ಐಟಿ ತನಿಖೆಯಿಂದ ಅನೇಕ ವಿಷಯಗಳು ಹೊರಗೆ ಬರುತ್ತಿವೆ. ಮಂಜುನಾಥ ಸ್ವಾಮಿಯ ಅನುಗ್ರಹ ಎಲ್ಲರ ಮೇಲೆ ಹೀಗೆಯೇ ಇರಲಿ ಎಂದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ಹುಟ್ಟಿ ಪುಣ್ಯ ಮಾಡಿದ್ದೇವೆ
ಬೆಳ್ತಂಗಡಿ ತಾಲೂಕಿನ ಸಮಸ್ತ ಜೈನ ಬಾಂಧವರ ನೇತೃತ್ವದಲ್ಲಿ ನಡೆದ ‘ಬೃಹತ್ ಧರ್ಮ ಸಂರಕ್ಷಣಾ ಸಮಾವೇಶ’ದಲ್ಲಿ ಮಾತನಾಡಿರುವ ಡಾ.ವೀರೇಂದ್ರ ಹೆಗ್ಗಡೆ, ಎಷ್ಟು ದೂರದವರು ಬಂದರೂ ಹತ್ತಿರದವರು ಯಾಕೆ ಬರ್ತಿಲ್ಲ ಎಂಬ ಮಾತು ಇತ್ತು. ಇವತ್ತು ನಮ್ಮವವರೆಲ್ಲಾ ಇಲ್ಲಿಗೆ ಬಂದಿದ್ದಾರೆ. ನಾವು ಈ ಕುಟುಂಬದಲ್ಲಿ ಹುಟ್ಟಿರೋದೇ ಅದೃಷ್ಟ. ಧರ್ಮಸ್ಥಳದಲ್ಲಿ ಹುಟ್ಟಿ ಪುಣ್ಯ ಮಾಡಿದ್ದೇವೆ.
ನಮ್ಮ ಇಡೀ ಕುಟುಂಬ ಇಲ್ಲಿ ಹುಟ್ಟಿ ಪುಣ್ಯ ಮಾಡಿದೆ. ಈ ಕಾರಣದಿಂದ ನಿಮಗೆ ನಮ್ಮ ಮೇಲೆ ಪ್ರೀತಿ ಅಭಿವ್ಯಕ್ತವಾಯಿತು. ಇಷ್ಟು ದಿನ ಪ್ರೀತಿ ಇದ್ದರೂ ಅಭಿವ್ಯಕ್ತಪಡಿಸಲು ಅವಕಾಶ ಇರಲಿಲ್ಲ. ಎಸ್ಐಟಿಯಲ್ಲಿ ಅನೇಕ ವಿಷಯಗಳು ಹೊರಗೆ ಬರ್ತಿವೆ. ಆ ಎಲ್ಲಾ ತನಿಖೆಯ ವಿಷಯಗಳು ನಮಗೆ ಪೂರಕವಾಗಿರಲಿ. ಮಂಜುನಾಥ ಸ್ವಾಮಿಯ ಅನುಗ್ರಹ ಎಲ್ಲರ ಮೇಲೆ ಹೀಗೆಯೇ ಇರಲಿ ಎಂದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಪತ್ನಿ ಹೇಮಾವತಿ ಹೆಗ್ಗಡೆ ಸೇರಿ ಕುಟುಂಬಸ್ಥರು ಭಾಗಿ ಸಮಾವೇಶದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ಧರ್ಮಸ್ಥಳ ಕೇಸ್; ಬುರುಡೆ ಇಟ್ಕೊಂಡು ಸುಪ್ರೀಂಗೆ ಹೋಗಿದ್ದ ಫೋಟೋ ರಿವೀಲ್..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ