ಧರ್ಮಸ್ಥಳ ಕೇಸ್; ಬುರುಡೆ ಇಟ್ಕೊಂಡು ಸುಪ್ರೀಂಗೆ ಹೋಗಿದ್ದ ಫೋಟೋ ರಿವೀಲ್..!

ಧರ್ಮಸ್ಥಳ ಪ್ರಕರಣದ ದೂರುದಾರ ಜಯಂತ್‌ ಟಿ. ಸುಪ್ರೀಂ ಕೋರ್ಟ್​ಗೆ ತೆರಳಿದ್ದ ಫೋಟೋ ಲಭ್ಯವಾಗಿದೆ. ಬ್ಯಾಗ್​ನಲ್ಲಿ ಬುರುಡೆ ಇಟ್ಕೊಂಡೇ ದೂರುದಾರ ಸುಪ್ರೀಂ ಕದ ತಟ್ಟಿದ್ದ. ಪ್ಲಾನ್ ರೂಪಿಸಿ ವಕೀಲರನ್ನೂ ನಂಬಿಸಿ ರೈಲಲ್ಲಿ ಬುರುಡೆ ಹಿಡಿದುಕೊಂಡು ದೆಹಲಿಗೆ ಪ್ರಯಾಣ ಬೆಳೆಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

author-image
Ganesh Kerekuli
Dharmasthala jayant
Advertisment

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಜಯಂತ್‌ ಟಿ. ಸುಪ್ರೀಂ ಕೋರ್ಟ್​ಗೆ ತೆರಳಿದ್ದ ಫೋಟೋ ಲಭ್ಯವಾಗಿದೆ. ಬ್ಯಾಗ್​ನಲ್ಲಿ ಬುರುಡೆ ಇಟ್ಕೊಂಡೇ ದೂರುದಾರ ಸುಪ್ರೀಂ ಕದ ತಟ್ಟಿದ್ದ. ಪ್ಲಾನ್ ರೂಪಿಸಿ ವಕೀಲರನ್ನೂ ನಂಬಿಸಿ ರೈಲಲ್ಲಿ ಬುರುಡೆ ಹಿಡಿದುಕೊಂಡು ದೆಹಲಿಗೆ ಪ್ರಯಾಣ ಬೆಳೆಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:ಎಚ್ಚರ, ಎಚ್ಚರ! ಈಗ eSIM ಸಿಮ್ ಹಗರಣ ಜೋರು.. ಏನಿದು..?

ಸುಪ್ರೀಂ ಮೂಲಕ ಶವ ಹೂತ ಕೇಸ್​ ತನಿಖೆ ಆದೇಶಕ್ಕೆ ಬುರುಡೆ ಗ್ಯಾಂಗ್​ ಪ್ಲಾನ್ ಮಾಡಿಕೊಂಡಿತ್ತು. ಈ ವೇಳೆ ಸ್ಥಳೀಯ ಠಾಣೆಯಲ್ಲಿ ದೂರು ನೀಡಲು ಸುಪ್ರೀಂ ಕೋರ್ಟ್ ಹೇಳಿತ್ತು. ಅದರಂತೆ  ಬುರುಡೆ ಗ್ಯಾಂಗ್​ ಧರ್ಮಸ್ಥಳ ಠಾಣೆಗೆ ದೂರು ನೀಡಿದೆ ಅನ್ನೋದು ಗೊತ್ತಾಗಿದೆ.

ಮಹಜರ್ ಪ್ರಕ್ರಿಯೆ ಮುಕ್ತಾಯ

ಇತ್ತ ಬುರುಡೆ ಚೆನ್ನಯ್ಯನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಮಹಜರು ಪ್ರಕ್ರಿಯೆ ಮುಕ್ತಾಯಗೊಂಡಿದೆ. ನೆನ್ನೆ ತಡರಾತ್ರಿಯಿಂದ ಇಂದು ಮಧ್ಯಾಹ್ನದವರೆಗೆ ಎಸ್​ಐಟಿ ಅಧಿಕಾರಿಗಳು ಬೆಂಗಳೂರಿನಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ಎಸ್ ಬಿ ಮ್ಯಾನ್ಷನ್ ಹೆಸರಿನ ಸರ್ವೀಸ್ ಅಪಾರ್ಟ್‌ಮೆಂಟ್​​ನಲ್ಲಿ, ಚಿನ್ನಯ್ಯ ಜೊತೆಗೆ ಮಟ್ಟಣ್ಣವರ್ ಸೇರಿದಂತೆ ಹಲವರು ಭೇಟಿಯಾಗಿರುವ ಮಾಹಿತಿ ಲಭ್ಯವಾಗಿತ್ತು. ಹಾಗಾಗಿ ಈ  ಅಪಾರ್ಟ್‌ಮೆಂಟ್​ನಲ್ಲಿ ಎಸ್​ಐಟಿ ಅಧಿಕಾರಿಗಳು ತೀವ್ರ ತನಿಖೆ ನಡೆಸಿದ್ದು, ಆರು ಬ್ಯಾಗ್​ಗಳಲ್ಲಿ ದಾಖಲಾತಿಗಳನ್ನ ಕೊಂಡೊಯ್ದಿದ್ದಾರೆ.

ಇದನ್ನೂ ಓದಿ:ಮೋದಿ, ಜಿನ್​ಪಿಂಗ್ ಭೇಟಿ -ಚೀನಾಗೆ 3 ಪದಗಳಲ್ಲಿ ಸಂದೇಶ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Dharmasthala case BJP JDS on Dharmasthala dharmasthala
Advertisment