Advertisment

ಸಮೀರ್ ವಿಚಾರಣೆ ಅಂತ್ಯ.. ಒಟ್ಟು ಮೂರು ಕೇಸ್​​ ಬಗ್ಗೆ ಪ್ರಶ್ನೆ

ಬೆಳ್ತಂಗಡಿ ಠಾಣೆಗೆ ಬಂದಿದ್ದ. ಠಾಣೆಗೆ ಬಂದ ಸಮೀರ್​ನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅಲ್ಲದೇ ಸಮೀರ್ ವಾಯ್ಸ್ ಸ್ಯಾಂಪಲ್ ಪಡೆದುಕೊಂಡಿದ್ದಾರೆ. ಆತನ ವಿಡಿಯೋದ ಸ್ಕ್ರಿಪ್ಟ್ ಅನ್ನು ಕೊಟ್ಟು ಮತ್ತೆ ವಾಯ್ಸ್ ಓವರ್ ಕೊಡಲು ಪೊಲೀಸರು ಹೇಳಿದ್ದಾರಂತೆ.

author-image
NewsFirst Digital
sameer md(6)
Advertisment

ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿದ್ದ ಆರೋಪದ ಮೇಲೆ ಪೊಲೀಸರು ಜುಲೈ 12ರಂದು ಸಮೀರ್​ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದರು. ಇದೇ ಪ್ರಕರಣದಲ್ಲಿ ಯೂಟ್ಯೂಬರ್ ಸಮೀರ್​ನನ್ನು ಬಂಧಿಸಲು ಧರ್ಮಸ್ಥಳ ಪೊಲೀಸರು ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದರು. 

Advertisment

ಇದನ್ನೂ ಓದಿ:ಫುಲ್​​ ಗ್ಲಾಮರ್​ ಲುಕ್​ನಲ್ಲಿ ದರ್ಶನ್.. ‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಸಾಂಗ್ ರಿಲೀಸ್

sammer(1)

ಇದಕ್ಕೂ ಮೊದಲೇ ಆಗಸ್ಟ್ 19ರಂದೇ ಸಮೀರ್​ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಜಿಲ್ಲಾ ನ್ಯಾಯಾಲಯವು ಯೂಟ್ಯೂಬರ್ ಸಮೀರ್​ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಅಲ್ಲದೇ ಸಮೀರ್​ ವಿಚಾರಣೆಗೆ ಸಹಕಾರ ನೀಡಬೇಕಾಗುತ್ತದೆ ಎಂದು ಕೋರ್ಟ್​ ಕಂಡೀಷನ್ಸ್ ಹಾಕಿತ್ತು. 

sameer md(1)

ಹೀಗಾಗಿ ಇಂದು ಮಧ್ಯಾಹ್ನ ಯೂಟ್ಯೂಬರ್​ ಸಮೀರ್ ದಾಖಲೆಗಳು, ಮೂವರು ವಕೀಲರೊಂದಿಗೆ ಬೆಳ್ತಂಗಡಿ ಠಾಣೆಗೆ ಬಂದಿದ್ದ. ಠಾಣೆಗೆ ಬಂದ ಸಮೀರ್​ನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅಲ್ಲದೇ ಸಮೀರ್ ವಾಯ್ಸ್ ಸ್ಯಾಂಪಲ್ ಪಡೆದುಕೊಂಡಿದ್ದಾರೆ. ಆತನ ವಿಡಿಯೋದ ಸ್ಕ್ರಿಪ್ಟ್ ಅನ್ನು ಕೊಟ್ಟು ಮತ್ತೆ ವಾಯ್ಸ್ ಓವರ್ ಕೊಡಲು ಪೊಲೀಸರು ಹೇಳಿದ್ದಾರಂತೆ. ಅದನ್ನು ಓದಿಸಿ ವಾಯ್ಸ್ ರೆಕಾರ್ಡ್ ಮಾಡಿಕೊಂಡಿದ್ದಾರಂತೆ. ಸಮೀರ್ ವಾಯ್ಸ್​ ಅನ್ನು ಪೊಲೀಸರು ಎಫ್ಎಸ್ಎಲ್​ಗೆ ಕಳುಹಿಸಿದ್ದಾರೆ. ಈಗಾಗಲೇ ಪೊಲೀಸರು ಸತತ ಐದು ಗಂಟೆಗಳ ಕಾಲ ಒಟ್ಟು ಮೂರು ಪ್ರಕರಣದಲ್ಲಿ ವಿಚಾರಣೆ ನಡೆಸಿದ್ದಾರೆ. ಒಂದು, AI ವಿಡಿಯೋ ಪ್ರಕರಣ, ಖಾಸಗಿ ಚಾನೆಲ್ ಮೇಲೆ ಹಲ್ಲೆ ಪ್ರಕರಣ, ಉಜಿರೆ ಖಾಸಗಿ ಆಸ್ಪತ್ರೆ ಬಳಿ ಗಲಾಟೆ ಸಂಬಂಧ ಸುಮೊಟೊ ಪ್ರಕರಣ. 

Advertisment

ಸದ್ಯ ಸಮೀರ್ ವಿಚಾರಣೆ ಅಂತ್ಯಗೊಂಡಿದ್ದು, ನಾಳೆ ಮತ್ತೆ ವಿಚಾರಣೆಗೆ ಬರಲು ಸೂಚನೆ ಕೊಟ್ಟಿದ್ದಾರೆ. ಇಂದು ದಾಖಲೆಗಳ ಮೂಲಕ ಮಾತ್ರ ವಿಚಾರಣೆ ಮಾಡಲಾಗಿದೆ. ವಿಡಿಯೋ ಎಡಿಟಿಂಗ್ ಬಳಸಿದ ಕಂಪ್ಯೂಟರ್ ಹಾಗೂ ಮೊಬೈಲ್ ವಶಕ್ಕೆ ನೀಡುವಂತೆ ಸೂಚನೆ ಕೊಟ್ಟಿದ್ದಾರಂತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

dharmasthala case, sameer md
Advertisment
Advertisment
Advertisment