/newsfirstlive-kannada/media/media_files/2025/08/21/mahesh-timarodi-2025-08-21-15-16-01.jpg)
ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬುರುಡೆ ಷಡ್ಯಂತ್ರದಲ್ಲಿ ಮುಖ್ಯ ಪಾತ್ರದಾರಿಗಳು ಎನ್ನಲಾಗಿರುವ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ. ಹಾಗೂ ವಿಠಲ ಗೌಡಗೆ ಎಸ್​ಐಟಿ ತನಿಖಾಧಿಕಾರಿ ಜಿತೇಂದ್ರ ದಯಾಮಾ ನೋಟಿಸ್ ನೀಡಿದ್ದಾರೆ. ಒಂದು ವೇಳೆ ವಿಚಾರಣೆಗೆ ಹಾಜರಾಗದಿದ್ದಲ್ಲಿ ಬಂಧನ ಮಾಡುವ ಎಚ್ಚರಿಕೆಯನ್ನೂ ಸಹ ನೀಡಿದ್ದಾರೆ.
ಬಿಎನ್​ಎಸ್​ಎಸ್ 35(3) ರ ಅಡಿಯಲ್ಲಿ ಅಧಿಕಾರ ಬಳಸಿಕೊಂಡು ನೀಡಿರುವ ನೋಟಿಸ್​ನಲ್ಲಿ ಹಲವು ಅಂಶಗಳನ್ನು ಎಸ್​ಐಟಿ ತನಿಖಾಧಿಕಾರಿ ಜಿತೇಂದ್ರ ದಯಾಮ ಉಲ್ಲೇಖಿಸಿದ್ದಾರೆ. ತನಿಖೆಯಲ್ಲಿ ಕಂಡುಕೊಂಡಂತೆ ಪ್ರಕರಣದ ಕುರಿತಂತೆ ಸಂಗತಿಗಳನ್ನು ಹಾಗೂ ಸಂದರ್ಭಗಳನ್ನು ತಮ್ಮಿಂದ ಖಚಿತಪಡಿಸಿಕೊಳ್ಳುವ ಬಗ್ಗೆ ನಿಮ್ಮನ್ನು ವಿಚಾರಿಸುವುದು ಅಗತ್ಯವಾಗಿದೆ ಎಂದು ನೋಟಿಸ್​ನಲ್ಲಿ ಉಲ್ಲೇಖ ಮಾಡಲಾಗಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us