/newsfirstlive-kannada/media/media_files/2025/10/25/actor-death-2025-10-25-12-25-17.jpg)
ಕೊಪ್ಪಳ: ಕೊಪ್ಪಳದ ಕನಕಗಿರಿ ಮೂಲದ ಕಿರುತೆರೆ ನಟ ಆರ್ಯನ್ ಗುರುಸ್ವಾಮಿ ವಸ್ತ್ರದ್​ ತನ್ನ ಹುಟ್ಟು ಹಬ್ಬದ ದಿನದಂದೇ ಉಸಿರು ನಿಲ್ಲಿಸಿದ್ದಾನೆ. ಕಳೆದ 15 ದಿನಗಳ ಹಿಂದೆ ಹಾಸಕ್ಕೆ ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ನಡೆದ ಅಪಘಾತದಿಂದಾಗಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲು ಆಗಿದ್ದರು.
ಆರ್ಯನ್ ಗುರುಸ್ವಾಮಿ ವಸ್ತ್ರದ್ ಅವರನ್ನು ಅಪಘಾತದ ನಂತರ ಬೆಂಗಳೂರಿಸ ಸ್ಪರ್ಶ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಿನ್ನೆ ನಟ ಆರ್ಯನ್ ಹುಟ್ಟು ಹಬ್ಬದ ಹಿನ್ನಲೆ ಕಟುಂಬಸ್ಥರು ಕೇಕ್ ಕತ್ತರಿಸಿದ್ದರು. ಈ ವೇಳೆ ದುಖಃವು ಮಡುಗಟ್ಟಿತ್ತು. ಆದ್ರೆ ವಿಧಿಯಾಟ ಚಿಕಿತ್ಸೆ ಫಲಾಕಾರಿಯಾಗದೆ ಕಿರುತೆರೆ ನಟ ಆರ್ಯನ್ ಕೊನೆಯುಸಿರೆಳೆದಿದ್ದಾರೆ.
ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು
ಮಗನನ್ನು ಕಳೆದುಕೊಂಡ ದುಖಃದ ನಡುವೆಯೇ ಪೋಷಕರು ಮೃತ ನಟ ಆರ್ಯನ್ ಗುರುಸ್ವಾಮಿ ಅವರ ಅಂಗಾಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಹುಟ್ಟೂರಾದ ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಇಂದು ಅಂತ್ಯಕ್ರಿಯೆ ನೆರೆವೇರಿಸಲಾಗುವುದು ಎಂದು ಮಾಹಿತಿ ಲಭ್ಯವಾಗಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us