/newsfirstlive-kannada/media/media_files/2025/09/07/soujayna-vithal-gowda-2025-09-07-11-29-45.jpg)
ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳು ಬುರುಡೆ ರಹಸ್ಯವನ್ನು ಬಯಲಿಗೆ ಎಳೆದಿದ್ದಾರೆ. ತೀವ್ರ ವಿಚಾರಣೆ ವೇಳೆ ಗಿರೀಶ್ ಮಟ್ಟಣ್ಣವರ್, ಬುರುಡೆ ಕೊಟ್ಟಿದ್ದು ಯಾರು ಎಂಬ ಸಿಕ್ರೇಟ್ ರಿವೀಲ್ ಮಾಡಿದ್ದಾರೆ.
ಈ ಬುರುಡೆ ತಂದು ಕೊಟ್ಟಿದ್ದೇ ವಿಠಲ್ ಗೌಡ. ಈ ವಿಠಲ್ ಗೌಡ ಸೌಜನ್ಯಳ ಮಾವ. ನೇತ್ರಾವತಿ ಸ್ನಾನ ಘಟ್ಟದ ಸಮೀಪದಲ್ಲಿರುವ ಬಂಗ್ಲಗುಡ್ಡ ಕಾಡಿಂದ ವಿಠಲ್ ಗೌಡ ಬುರುಡೆ ಹುಡುಕಿ ತಂದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಸ್ಪಾಟ್ 11A ಯಿಂದ ಸ್ವಲ್ಪ ದೂರದಲ್ಲೇ ತಲೆ ಬುರುಡೆ ಸಿಕ್ಕಿದೆ. ಆ ಸ್ಥಳದಲ್ಲಿ ಕೇವಲ ಬುರುಡೆ ಮಾತ್ರ ಪತ್ತೆ ಆಗಿದೆ ಎಂದು ವಿಠಲ್ ಗೌಡ ಹೇಳಿದ್ದಾನೆ ಎನ್ನಲಾಗಿದೆ. ಮರದ ಕೆಳಗೆ ಭೂಮಿಯ ಮೇಲ್ಭಾಗದಲ್ಲಿ ದೊರೆತಿದ್ದ ತಲೆ ಬುರುಡೆ ಅದು ಎನ್ನಲಾಗಿದೆ. ಇನ್ನು, ಬುರುಡೆ ದೊರೆತ ಸ್ಥಳದಲ್ಲಿ ಎಸ್ಐಟಿ ಅಧಿಕಾರಿಗಳು ಅಸ್ಥಪಂಜರಕ್ಕಾಗಿ ಹುಡುಕಾಟ ನಡೆಸಿದ್ದಾರೆ.
ವಿಠಲ್ ಗೌಡನ ತೀವ್ರ ವಿಚಾರಣೆ
ಬಂಗ್ಲೆಗುಡ್ಡದಿಂದ ತಲೆ ಬುರುಡೆ ತಂದಿರುವ ವಿಠಲ್ ಗೌಡನ ತೀವ್ರ ವಿಚಾರಣೆ ಮಾಡುತ್ತಿದ್ದಾರೆ. ಆತ್ಮ*ತ್ಯೆ ಮಾಡಿಕೊಂಡ ಮೃತದೇಹದ ತಲೆಬುರುಡೆ ಎತ್ತಿಕೊಂಡು ಬಂದಿದ್ದಾರೆ ಎನ್ನಲಾಗಿದೆ. ಈ ವಿಠಲ್ ಗೌಡಗೆ ಪ್ರದೀಪ್ ಗೌಡ ಎಂಬಾತ ಸಹಾಯ ಮಾಡಿದ್ದಾನೆ. ಕಾಡಲ್ಲಿ ಆತ್ಮ*ತ್ಯೆ ಮಾಡಿಕೊಂಡ ಬಗ್ಗೆ ಮಾಹಿತಿ ತಿಳಿದಿತ್ತು.
ಒಂದು ದಿನ ವಿಠಲ್ ಗೌಡ ಬಂಗ್ಲೆಗುಡ್ಡಕ್ಕೆ ಹೋಗಿ ಬುರುಡೆ ನೋಡಿಕೊಂಡು ಬಂದಿದ್ದಾನೆ. ನಂತರ ಸಹಾಯಕ್ಕಾಗಿ ಪ್ರದೀಪ್ ಗೌಡನನ್ನು ಕರೆದುಕೊಂಡು ಹೋಗಿ ತಂದಿದ್ದಾನೆ ಎನ್ನಲಾಗಿದೆ. ಸದ್ಯ ಬುರುಡೆ ಎಲ್ಲಿಂದ ಸಿಕ್ಕಿದೆ ಅನ್ನೋದ್ರ ಪ್ರಕರಣ ಬೇಧಿಸಿರುವ ಪೊಲೀಸರು, ಸ್ಥಳ ಮಹಜರು ಪ್ರಕ್ರಿಯೆ ನಡೆಸಿದ್ದಾರೆ.
ಇದನ್ನೂ ಓದಿ:ಶಿವಮೊಗ್ಗ ಜೈಲು ಸೇರಿದ ಬುರುಡೆ ಚೆನ್ನಯ್ಯ.. ಕಾರಾಗೃಹಕ್ಕೆ ಬರುತ್ತಿದ್ದಂತೆಯೇ ಕಣ್ಣೀರು..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ