/newsfirstlive-kannada/media/media_files/2025/08/25/chinnayya-2025-08-25-08-32-57.jpg)
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚೆನ್ನಯ್ಯಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬೆಳ್ತಂಗಡಿ JMFC ಕೋರ್ಟ್ ಆದೇಶ ಹಿನ್ನೆಲೆ ಚೆನ್ನಯ್ಯಗೆ ನ್ಯಾಯಾಂಗ ಬಂಧನ ವಿಧಿಸಿ ಶಿವಮೊಗ್ಗ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಬೆಳಗ್ಗಿನ ಜಾವ 1:20 ಕ್ಕೆ ಶಿವಮೊಗ್ಗದ ಜೈಲಿಗೆ ಚೆನ್ನಯ್ಯನನ್ನ ಶಿಫ್ಟ್ ಮಾಡಲಾಗಿದ್ದು, ಇಂದಿನಿಂದ ಕಾವೇರಿ ಬ್ಯಾರೆಕ್ ನಲ್ಲಿ ಚಿನ್ನಯ್ಯ ಇರಲಿದ್ದಾನೆ. ಭದ್ರತೆ ದೃಷ್ಟಿಯಿಂದ ಚಿನ್ನಯ್ಯನನ್ನ ಶಿವಮೊಗ್ಗಕ್ಕೆ ರವಾನಿಸಲಾಗಿದ್ದು 850ಕ್ಕೂ ಹೆಚ್ಚು ಕೈದಿಗಳು ಇರುವ ಜೈಲು ಇದಾಗಿದೆ.
ಕಣ್ಣೀರಿಟ್ಟ ಚೆನ್ನಯ್ಯ
ಚೆನ್ನಯ್ಯ ಶಿವಮೊಗ್ಗ ಜೈಲು ಸೇರುವಾಗ ಕಣ್ಣೀರು ಇಟ್ಟಿದ್ದಾನೆ. ಶಿವಮೊಗ್ಗ ಕಾರಾಗೃಹದ ಬಳಿ ವಾಹನದಿಂದ ಇಳಿದು ಹೋಗುವಾಗ ಪೊಲೀಸರಿಗೆ ಧನ್ಯವಾದ ಹೇಳಿ ಟಾಟಾ ಮಾಡಿದ್ದಾನೆ. ಎಲ್ಲರಿಗೂ ಧನ್ಯವಾದ ಎಂದು ಹೇಳಿದ ಬಳಿಕ ಕಣ್ಣೀರು ಇಟ್ಟಿದ್ದಾನೆ. ಬೆಳ್ತಂಗಡಿ ಕೋರ್ಟ್ನಿಂದ ಶಿವಮೊಗ್ಗ ಹೋಗುವಾಗ ಪಚ್ಚತಾಪದಲ್ಲಿದ್ದ ಎನ್ನಲಾಗಿದೆ.
ಇದನ್ನೂ ಓದಿ:ವಿಶ್ವದ 5 ಅಂತ್ಯಂತ ದುಬಾರಿ , ಐಷಾರಾಮಿ ಫೋನ್ಗಳು..! ಇವುಗಳನ್ನ ಯಾರೆಲ್ಲ ಬಳಸುತ್ತಾರೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ