/newsfirstlive-kannada/media/media_files/2025/08/23/dharmasthala3-2025-08-23-16-47-00.jpg)
ಧರ್ಮಸ್ಥಳ ಸುತ್ತಮುತ್ತ ನೂರಾರು ಶ*ವಗಳನ್ನೂ ಹೂತು ಹಾಕಿದ್ದೇನೆ ಎಂದು ಆರೋಪ ಮಾಡಿದ್ದ ಅನಾಮಿಕನನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಅಲ್ಲದೇ ಇಷ್ಟು ದಿನ ಶ*ವಗಳನ್ನು ಅಲ್ಲಿ ಹೂತು ಹಾಕಿದ್ದೇನೆ, ಇಲ್ಲಿ ಹೂತು ಹಾಕಿದ್ದೇನೆ ಅಂತ ಎಸ್​ಐಟಿ ಅಧಿಕಾರಿಗಳ ಮುಂದೆ ಹೇಳಿಕೊಂಡು ಸ್ಥಳಗಳನ್ನು ತೋರಿಸುತ್ತಿದ್ದ ಮಾಸ್ಕ್‌ಮ್ಯಾನ್ ನಿಜವಾದ ಹೆಸರು, ಆತನ ಮುಖ ಬಹಿರಂಗಗೊಂಡಿದೆ.
/filters:format(webp)/newsfirstlive-kannada/media/media_files/2025/08/23/dharmasthala2-2025-08-23-16-33-52.jpg)
ಅಷ್ಟೇ ಅಲ್ಲದೇ ಅನಾಮಿಕ ಅರೆಸ್ಟ್ ಆಗುತ್ತಿದ್ದಂತೆ ಶ್ರೀಧರ್ಮಸ್ಥಳ ಮಂಜುನಾಥ ದೇವಸ್ಥಾನದ ಟ್ರಸ್ಟ್ ಇದೀಗ ಫೇಸ್​ಬುಕ್​ ಖಾತೆಯಲ್ಲಿ ಪೋಸ್ಟ್​ವೊಂದನ್ನು ಶೇರ್ ಮಾಡಿಕೊಂಡಿದೆ. ಶಿವತಾಂಡವದ ಫೋಟೋವನ್ನು ಶೇರ್ ಮಾಡಲಾಗಿದೆ. ಆ ಪೋಸ್ಟ್​ ಜೊತೆಗೆ ‘ನಮೋ ಮಂಜುನಾಥ’ ಎಂದು ಬರೆಯಲಾಗಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪ್ರತಿಕ್ರಿಯೆ..
ಇನ್ನೂ, ಈ ಎಲ್ಲ ಬೆಳವಣಿಗೆ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಎಸ್ಐಟಿ ತನಿಖೆಯ ಹಂತದಲ್ಲಿ ನಾನು ಹೆಚ್ಚು ಮಾತನಾಡಲ್ಲ. ಧರ್ಮಸ್ಥಳಕ್ಕೆ ಬಂದು ಬೆಂಬಲ ಸೂಚಿಸಿದ ಎಲ್ಲರಿಗೂ ಧನ್ಯವಾದಗಳು. ಈಗ ಒಂದೊಂದೇ ಸತ್ಯಗಳು ಹೊರಗೆ ಬರ್ತಾ ಇದೆ. ಸತ್ಯವನ್ನ ತೊಳೆದು ಇಟ್ಟಂತಾಗಿದೆ. ಕ್ಷೇತ್ರದ ಮೇಲಿನ ಅಭಿಮಾನ ಹೀಗೆ ಇರಲಿ. ಎಲ್ಲರ ಪ್ರೀತಿ ವಿಶ್ವಾಸ ಹೀಗೆಯೇ ಇರಲಿ ಎಂದು ಆಶಿಸುತ್ತೇನೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಯಾರು ಈ ಮಾಸ್ಕ್​ ಮ್ಯಾನ್​..?
ಧರ್ಮಸ್ಥಳದಲ್ಲಿ ನೂರಾರು ಶ*ವಗಳನ್ನು ಹೂತಿದ್ದೇನೆ ಎಂದಿದ್ದ ಮಾಸ್ಕ್​ಮ್ಯಾನ್ ನಿಜವಾದ ಹೆಸರು ಸಿ.ಎನ್ ಚಿನ್ನಯ್ಯ ಅಲಿಯಾಸ್ ಚೆನ್ನ ಆಗಿದೆ. ಈತನು ತಮಿಳುನಾಡಿನ ಈರೋಡ್ ನಗರದ ಚಿಕ್ಕ ಅರಸಿ ಪಾಳ್ಯದಲ್ಲಿ ವಾಸಿಯಾಗಿದ್ದಾನೆ. ಈರೋಡ್ ನಗರದ ಬಳಿ ಇರುವ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಎರಡು ವರ್ಷಗಳ ಹಿಂದೆ ಉಜಿರೆಗೆ ಚಿನ್ನಯ್ಯ ಮರಳಿ ಬಂದಿದ್ದನು. ಬಳಿಕ ಪಂಚಾಯಿತಿಯಲ್ಲಿ ಸಫಾಯಿ ಕರ್ಮಚಾರಿ ಕೆಲಸಕ್ಕೆ ಸೇರಿದ್ದನು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us