/newsfirstlive-kannada/media/media_files/2025/08/29/sujatha2-2025-08-29-07-52-58.jpg)
ಅನನ್ಯಾ ಭಟ್ ಮಿಸ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೂಡ ದೂರುದಾರೆ ಸುಜಾತ ಭಟ್ ವಿಚಾರಣೆ ನಡೆಯಲಿದೆ. ತನಿಖಾಧಿಕಾರಿ ಗುಣಪಾಲ ಜೆ ಅವರು ಸುಜಾತ ಭಟ್ರನ್ನ ವಿಚಾರಣೆ ನಡೆಸಲಿದ್ದಾರೆ.
ಇದನ್ನೂ ಓದಿ:ಕೈಕೊಟ್ಟ ಬುರುಡೆ ಗ್ಯಾಂಗ್.. ಏಕಾಂಗಿಯಾದ ಸುಜಾತಾ ಭಟ್!
ಈಗಾಗಲೇ ಮೂರು ದಿನಗಳ ಕಾಲ ಸುದೀರ್ಘ ವಿಚಾರಣೆಗೆ ಒಳಪಟ್ಟಿರುವ ಸುಜಾತಾ ಭಟ್ ಅಧಿಕಾರಿಗಳ ಮುಂದೆ ಸ್ಪೋಟಕ ಮಾಹಿತಿಗಳನ್ನ ಬಾಯ್ಬಿಟ್ಟಿದ್ದಾರೆ. ಇಂದು ಸುಜಾತ ಭಟ್ ವಿಚಾರಣೆ ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ಬಂಧನದ ಬಗ್ಗೆ ಎಸ್ಐಟಿ ಅಧಿಕಾರಿಗಳು ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ.
/filters:format(webp)/newsfirstlive-kannada/media/media_files/2025/08/26/dharmasthala-sujata-bhat-2025-08-26-16-07-38.jpg)
ಆರಂಭದಲ್ಲಿ ನನ್ನ ಮಗಳು ನಾಪತ್ತೆಯಾಗಿದ್ದಾಳೆ. ಆಕೆಯ ಅಸ್ತಿಯನ್ನ ಹುಡುಕಿಕೊಡಿ ಅಂತ ಸುಜಾತ ಭಟ್ ಕಾರಿನಲ್ಲಿ ಬಂದು ದೂರು ಕೊಟ್ಟಿದ್ದರು. ನಂತರ ಸುಳ್ಳು ಫೋಟೋ ತೋರಿಸಿ ಸುಜಾತ ಭಟ್ಸಿಕ್ಕಿಹಾಕಿಕೊಂಡಿದ್ದರು. ಮಾಧ್ಯಮ ಹಾಗೂ ಬುರುಡೆ ಗ್ಯಾಂಗ್ ಮುಂದೆ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದರು. ಹೀಗಾಗಿ ಸುಜಾತ ಭಟ್ರನ್ನ ಬುರುಡೆ ಗ್ಯಾಂಗ್ ದೂರ ಮಾಡಿದೆ ಅಂತ ಹೇಳಲಾಗ್ತಿದ್ದು, ಹೀಗಾಗಿ ನಿನ್ನೆ ಆಟೋದಲ್ಲಿ ಏಕಾಂಕಿಯಾಗಿ ಬಂದು ವಿಚಾರಣೆಗೆ ಹಾಜರಾಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ