ಬಗೆದಷ್ಟು ಬಯಲಾಗ್ತಿದೆ ಸುಜಾತಾ ಭಟ್​ ಕಥೆ ಕಹಾನಿ; ಅನನ್ಯಾನಾ? ವಾಸಂತಿನಾ? ಈ ಪೋಟೋ ಅಸಲಿಯತ್ತೇನು?

ಅನನ್ಯಾ ಭಟ್​ ಅನ್ನೋ ಪಾತ್ರದ ಮೂಲಕ ಧರ್ಮಸ್ಥಳ ಕೇಸ್​ಗೆ ಪರಾಕಾಯ ಪ್ರವೇಶ ಮಾಡಿದ್ದ ಸಜಾತಾ ಸುತ್ತ ಅನುಮಾನದ ಹುತ್ತ ಕಟ್ಟತೊಡಗಿದೆ. ಹೆತ್ತು-ಹೊತ್ತು ಸಾಕದೇ, ನನಗೊಬ್ಳು ಮಗಳಿದ್ದಾಳೆ ಅನ್ನೋ ಸುಜಾತಾ ವ್ಯಥೆ, ಕಟ್ಟುಕತೆಯ ಅನ್ನೋ ಶಂಕೆ ಮೂಡಿದೆ.

author-image
Veenashree Gangani
Updated On
sujatha bhat(4)
Advertisment

ಅನನ್ಯಾ ಭಟ್​ ಅನ್ನೋ ಪಾತ್ರದ ಮೂಲಕ ಧರ್ಮಸ್ಥಳ ಕೇಸ್​ಗೆ ಪರಾಕಾಯ ಪ್ರವೇಶ ಮಾಡಿದ್ದ ಸಜಾತಾ ಸುತ್ತ ಅನುಮಾನದ ಹುತ್ತ ಕಟ್ಟತೊಡಗಿದೆ. ಹೆತ್ತು-ಹೊತ್ತು ಸಾಕದೇ, ನನಗೊಬ್ಳು ಮಗಳಿದ್ದಾಳೆ ಅನ್ನೋ ಸುಜಾತಾ ವ್ಯಥೆ, ಕಟ್ಟುಕತೆಯ ಅನ್ನೋ ಶಂಕೆ ಮೂಡಿದೆ. ಸುಜಾತ ಭಟ್​. ಇದೊಂದು ಹೆಸರು ಧರ್ಮಸ್ಥಳ ಶ*ವ ಹೂತಿಟ್ಟ ಪ್ರಕರಣಕ್ಕಿಂತ ಹೆಚ್ಚಾಗಿ ಎಸ್​ಐಟಿ ಅಧಿಕಾರಿಗಳ ನಿದ್ದೆಗೆಡಿಸಿದೆ. ಅನನ್ಯಾ ಭಟ್ ಅನ್ನೋ ಪಾತ್ರದ ಮೂಲಕ ಕೇಸ್​ಗೆ ಹೊಸ ಟ್ವಿಸ್ಟ್​ ಕೊಟ್ಟಿದ್ದ ಸುಜಾತ​ ಬಂಡವಾಳ ವಾಸಂತಿ ಎಂಬಾಕೆಯ ಮೂಲಕ ಬಯಲಾಗ್ತಿದೆ. ಸುಜಾತ್​ ಭಟ್​ ಸುತ್ತ ಅನುಮಾನದ ಹುತ್ತ ಕಟ್ಟುತ್ತಿದೆ.

ಇದನ್ನೂ ಓದಿ:ದರ್ಶನ್ ಸೆಲೆಬ್ರಿಟಿಗಳಿಗೆ ಗುಡ್​ನ್ಯೂಸ್​.. ಡೆವಿಲ್ ಸಿನಿಮಾ ಫಸ್ಟ್ ಸಾಂಗ್​ ರಿಲೀಸ್​ಗೆ ಮುಹೂರ್ತ ಫಿಕ್ಸ್​

sujatha bhat(2)

ವಾಸಂತಿ ಫೋಟೋ ಬಳಸಿಕೊಂಡು ಹೊಸ ಕತೆ ಹೆಣೆದಿದ್ದ ಸುಜಾತ ಭಟ್​ ಬಂಡವಾಳ ಬಗೆದಷ್ಟು ಬಯಲಾಗ್ತಿದೆ. 2007ರಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಸಾವನ್ನಪ್ಪಿದ್ದ ರಂಗ ಪ್ರಸಾದ್ ಅವರ ಸೊಸೆ ಈ ವಾಸಂತಿಯ ಮತ್ತಷ್ಟು ಫೋಟೋ ನ್ಯೂಸ್​ ಫಸ್ಟ್​ಗೆ ಲಭ್ಯವಾಗಿದೆ. ವೀರಾಜಪೇಟೆಯ ಹೊಳೆಯಲ್ಲಿ ಶವವಾಗಿ ಪತ್ತೆಯಾಗಿದ್ದ ವಾಸಂತಿ ಫೋಟೋವನ್ನೇ ಸುಜಾತ ಭಟ್ ತನ್ನ ಮಗಳು​ ಅನನ್ಯಾ ಭಟ್​ ಎಂದು ಬಿಂಬಿಸಿದ್ದಾಳೆ.

sujatha bhat(1)

ನಮಗೆ ಬೇಸರ ಆಗುತ್ತಿದೆ ಸರ್. ಏಕೆಂದರೆ ನಮ್ಮ ತಂಗಿ ಫೋಟೋವನ್ನು ಇಟ್ಟುಕೊಂಡು ದುರ್ಬಳಕೆ ಮಾಡುತ್ತಿದ್ದಾರೆ. ನಮ್ಮ ತಂಗಿಯ ಫೋಟೋ ಇಟ್ಟುಕೊಂಡು ಅವರು ಯಾಕೆ ನನ್ನ ಮಗಳು ಮಗಳು ಅಂತ ಯಾಕೆ ಹೀಗೆ ಮಾಡಬೇಕು? ಎಲ್ಲ ದಾಖಲೆಗಳು ನಮ್ಮ ಬಳಿ ಇವೆ. ಕುಟುಂಬಸ್ಥರೆಲ್ಲಾ ಕುಳಿತುಕೊಂಡು ಇದರ ಬಗ್ಗೆ ಮಾತಾಡುತ್ತೇವೆ.

ವಿಜಯ್, ವಾಸಂತಿ ಸಹೋದರ

ಶಿವಮೊಗ್ಗ ಜಿಲ್ಲೆಯ ರಿಪ್ಪನ್​ಪೇಟೆಯಲ್ಲಿ ಪ್ರಭಾಕರ್ ಬಾಳಿಗ​ ಎಂಬುವರ ಜೊತೆ ಈ ಸುಜಾತಾ ವಾಸವಿದ್ರು.
1999 ರಿಂದ 2007ರವರೆಗೆ ರಿಪ್ಪನ್ ಪೇಟೆಯಲ್ಲಿ ಸುಜಾತಾ ವಾಸವಾಗಿದ್ರಂತೆ. ರಿಪ್ಪನ್ ಪೇಟೆಯ JSB ಕಲ್ಯಾಣ ಮಂಟಪದ ಬಳಿ ಇದ್ದ ಪ್ರಭಾಕರ್ ಮನೆಯಲ್ಲಿ ಸುಜಾತಾ ಭಟ್​ ಕೇರ್ ಟೇಕರ್ ಆಗಿದ್ರಂತೆ. ಈ ಪ್ರಭಾಕರ್ ಬಾಳಿಗ ಉಡುಪಿಯಲ್ಲಿ ಬಸ್ ಏಜೆಂಟ್ ಆಗಿದ್ರಂತೆ. ಹೀಗಾಗಿ ಕರಾವಳಿಯಲ್ಲಿ ಪ್ರಭಾಕರ್ ಬಾಳಿಗಗೆ ಸುಜಾತಾ ಪರಿಚಯವಾಗಿ ರಿಪ್ಪನ್ ಪೇಟೆಯಲ್ಲಿ ಜೊತೆಗೆ ವಾಸವಿದ್ರಂತೆ.

sujatha bhat(3)

ಆದ್ರೆ 8 ವರ್ಷ ರಿಪ್ಪನ್​ಪೇಟೆಯಲ್ಲಿ ವಾಸವಿದ್ರೂ ಎದುರಿನ ಮನೆಯವರಿಗೂ ಸುಜಾತಾ ಭಟ್​ ಪುತ್ರಿ ಅನನ್ಯಾ ಒಂದು ದಿನವೂ ಕಂಡಿಲ್ವಂತೆ. 2007ರ ತನಕ ಮನೆ ತುಂಬಾ ಶ್ವಾನಗಳಿದ್ವೆ ವಿನಃ ಯಾವು ಮಕ್ಕಳು ಇರ್ಲಿಲ್ವಂತೆ. ಬಳಿಕ 2007ರಲ್ಲಿ ಬೆಂಗಳೂರಿನ ಜಡ್ಜ್ ಮನೆಯಲ್ಲಿ ಕೆಲಸ ಸಿಕ್ತು ಅಂತ ಸುಜಾತಾ ತೆರಳಿದ್ರಂತೆ. ಪ್ರಭಾಕರ್ ನಿಧನರಾದ 2 ವರ್ಷ ಮುಂಚೆಯೇ ಸುಜಾತಾ ಭಟ್​ ಅವರ ಮನೆಯನ್ನ ತೊರೆದಿದ್ರಂತೆ. ಪ್ರಭಾಕರ್​​ರಿಂದ ಮನೆ ಜಾಗ ಖರೀದ್ದ ಮಾಡಿದ್ದ ವ್ಯಕ್ತಿ ಹೇಳೋ ಪ್ರಕಾರ 2009ರಲ್ಲಿ ಪ್ರಭಾಕರ್ ನಿಧನರಾಗಿದ್ರಂತೆ.

ಅನನ್ಯಾ ಭಟ್​ ಅನ್ನೋ ಪಾತ್ರದ ಮೂಲಕ ಧರ್ಮಸ್ಥಳದಲ್ಲಿ ಶ*ವ ಹೂತಿಟ್ಟ ಪ್ರಕರಣದ ದಿಕ್ಕುತಪ್ಪಿಸಿದ ಸುಜಾತ ಭಟ್​ ಹಿಂದಿನ ಸೂತ್ರದಾರಿ ಯಾರು ಅನ್ನೋದೆ ಸದ್ಯದ ಯಕ್ಷ ಪ್ರಶ್ನೆ. ಇಲ್ಲದ ಮಗಳನ್ನ ಸುಜಾತ ಭಟ್​ ಬಳಸಿಕೊಂಡಿದ್ಯಾಕೆ? ಆಕೆಯ ಉದ್ದೇಶವೇನೂ ಅನ್ನೋ ಸತ್ಯ ಸದ್ಯ ಆ ಮಂಜುನಾಥನೊಬ್ಬನೆ ಬಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Dharmasthala case
Advertisment