ಬುರುಡೆ ಕೇಸ್​ನಲ್ಲಿ ಟ್ವಿಸ್ಟ್.. SIT ಮುಂದೆ ಸ್ಫೋಟಕ ವಿಚಾರ ಬಿಚ್ಚಿಟ್ಟ ಚಿನ್ನಯ್ಯ

ಬುರುಡೆ ಸಂಕಷ್ಟದಲ್ಲಿ ಸಿಲುಕಿರುವ ಆರೋಪಿ ಚಿನ್ನಯ್ಯನಿಗೆ ಬ್ಯಾಕ್​ ಟು ಬ್ಯಾಕ್​ ಸಂಕಷ್ಟ ಎದುರಾಗಿದೆ. ದಿನದಿಂದ ದಿನಕ್ಕೆ ಬುರುಡೆ ರಹಸ್ಯ ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ. ಈ ಹಿಂದೆ ಸೋಷಿಯಲ್​ ಮೀಡಿಯಾದಲ್ಲಿ ಬುರುಡೆ ವಿಡಿಯೋವೊಂದು ವೈರಲ್ ಆಗಿತ್ತು.

author-image
Veenashree Gangani
Updated On
dharmasthala case(11)
Advertisment

ಮಂಗಳೂರು: ಬುರುಡೆ ಸಂಕಷ್ಟದಲ್ಲಿ ಸಿಲುಕಿರುವ ಆರೋಪಿ ಚಿನ್ನಯ್ಯನಿಗೆ ಬ್ಯಾಕ್​ ಟು ಬ್ಯಾಕ್​ ಸಂಕಷ್ಟ ಎದುರಾಗಿದೆ. ದಿನದಿಂದ ದಿನಕ್ಕೆ ಬುರುಡೆ ರಹಸ್ಯ ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ. ಈ ಹಿಂದೆ ಸೋಷಿಯಲ್​ ಮೀಡಿಯಾದಲ್ಲಿ ಬುರುಡೆ ವಿಡಿಯೋವೊಂದು ವೈರಲ್ ಆಗಿತ್ತು.

ಇದನ್ನೂ ಓದಿ:ಕೈಕೊಟ್ಟ ಬುರುಡೆ ಗ್ಯಾಂಗ್​.. ಏಕಾಂಗಿಯಾದ ಸುಜಾತಾ ಭಟ್!

dharmasthala case(10)

ಆದ್ರೆ, ಇದೀಗ ಆರೋಪಿ ದೂರುದಾರ ಚಿನ್ನಯ್ಯನ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಹೌದು, ಮೊದ ಮೊದಲು ಚಿನ್ನಯ್ಯ ನಾನು ಧರ್ಮಸ್ಥಳದಿಂದಲೇ ಬುರುಡೆ ತೆಗೆದುಕೊಂಡು ಬಂದು ಇಟ್ಟುಕೊಂಡಿದ್ದ ಅಂತ ಹೇಳಿಕೆ ನೀಡಿದ್ದ. ಈಗ ಆರೋಪಿ ದೂರುದಾರ ಮನೆ ಸರ್ಚ್ ವೇಳೆ ಬರುಡೆ ತಿಮರೋಡಿ ಕೊಟ್ಟಿದ್ದು ಅಂತ ಹೇಳಿದ್ದಾನಂತೆ. 

Mahesh Timarodi(1)

ತಿಮರೋಡಿ ಮನೆಯಿಂದ ತಂದಿದ್ದ ಬುರುಡೆ?

ದೂರುದಾರ ಚಿನ್ನಯ್ಯ ತಲೆ ಬುರುಡೆ ತಂದ ವಿಡಿಯೋ ಚಿತ್ರಿಸಿದ್ದು ತಿಮರೋಡಿ ರಬ್ಬರ್ ತೋಟದ ಒಂದು ಜಾಗದಿಂದ ಅಂತ ಹೇಳಿಕೆ ನೀಡಿದ್ದಾನೆ. ಹೀಗಾಗಿ FSL ಅಧಿಕಾರಿಗಳು ಬುರುಡೆಗೆ ಅಂಟಿರುವ ಮಣ್ಣು ಮತ್ತು ತೋಟದ ಮಣ್ಣಿನ ತಾಳೆ ಹಾಕಲಿದ್ದಾರೆ. ಈಗಾಗಲೇ SIT ಅಧಿಕಾರಿ ತಿಮರೋಡಿ ರಬ್ಬರ್ ತೋಟದ ಮಣ್ಣು ಸಂಗ್ರಹ ಮಾಡಿದ್ದಾರೆ. ಮಣ್ಣು ಸಂಗ್ರಹಿಸಿ FSL ಲ್ಯಾಬ್​ಗೆ ಕಳುಹಿಸಿದ್ದಾರೆ. ಒಂದು ವೇಳೆ ತಿಮರೋಡಿ ತೋಟದ ಮಣ್ಣು ಮತ್ತು ಬುರುಡೆಯಲ್ಲಿರೋ ಮಣ್ಣಿನ ಕಣಗಳ ಗುಣ ಲಕ್ಷಣಗಳ ಪಾಸಿಟಿವ್ ಬಂದರೆ ಪ್ರಕರಣದಲ್ಲಿ ಮತ್ತೊಂದು ಸಾಕ್ಷಿ ಸಿಕ್ಕಂತೆ ಆಗಿಲಿದೆ. ಜೊತೆಗೆ ಬುರುಡೆ ಗ್ಯಾಂಗ್ ಷಡ್ಯಂತ್ರಕ್ಕೆ ಸ್ಫೋಟಕ ಸಾಕ್ಷ್ಯ ಸಿಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chenna Dharmasthala
Advertisment