ಯೂಟ್ಯೂಬರ್ ಸಮೀರ್​ಗೆ ನಿರೀಕ್ಷಣಾ ಜಾಮೀನು ಮಂಜೂರು

ಯೂಟ್ಯೂಬರ್ ಸಮೀರ್​ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ. ಬಂಧನದ ಭೀತಿಯಲ್ಲಿದ್ದ ಸಮೀರ್ ಎಂ.ಡಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ. ಇದರಿಂದಾಗಿ ಸಮೀರ್​ ಪೊಲೀಸರ ಬಂಧನದಿಂದ ಬಚಾವ್​ ಆಗಿದ್ದಾನೆ.

author-image
Veenashree Gangani
sameer md(5)

ಯೂಟ್ಯೂಬರ್ ಸಮೀರ್ ಎಂ.ಡಿ.

Advertisment
  • ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು ಮಂಜೂರು
  • ದಕ್ಷಿಣ ಕನ್ನಡ ಜಿಲ್ಲಾ ಸತ್ರ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಮಂಜೂರು
  • ನಿರೀಕ್ಷಣಾ ಜಾಮೀನು ನೀಡಿಕೆಗೆ ಷರತ್ತು ವಿಧಿಸಿರುವ ಕೋರ್ಟ್

ಮಂಗಳೂರು: ಬಂಧನದ ಭೀತಿಯಲ್ಲಿದ್ದ ಯೂಟ್ಯೂಬರ್ ಸಮೀರ್​ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ.   ದಕ್ಷಿಣ ಕನ್ನಡ ಜಿಲ್ಲಾ ಸತ್ರ ನ್ಯಾಯಾಲಯವು ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.  ಇದರಿಂದಾಗಿ ಸಮೀರ್​ ಪೊಲೀಸರ ಬಂಧನದಿಂದ ಬಚಾವ್​ ಆಗಿದ್ದಾನೆ. ಈ ನಿರೀಕ್ಷಣಾ ಆದೇಶದ ಪ್ರತಿ ಪಡೆದು ಪೊಲೀಸರ ವಿಚಾರಣೆಗೆ ಹಾಜರು ಆಗಬಹುದು. ಆಗ ಪೋಲಿಸರು ಸಮೀರ್​ನನ್ನು ಬಂಧಿಸುವಂತಿಲ್ಲ. ವಿಚಾರಣೆ ನಡೆಸಿ ಕಳಿಸಬಹುದು. ಅಲ್ಲದೇ ಸಮೀರ್​ ವಿಚಾರಣೆಗೆ ಸಹಕಾರ ನೀಡಬೇಕಾಗುತ್ತದೆ.

 ಕೋರ್ಟ್​ನಿಂದ ಸಮೀರ್​ಗೆ ನಿರೀಕ್ಷಣಾ  ಜಾಮೀನು ಕಂಡೀಷನ್ಸ್
1. ಸಮೀರ್​ಗೆ 75 ಸಾವಿರ ವೈಯಕ್ತಿಕ ಬಾಂಡ್ ನೀಡಬೇಕು
2. ಮತ್ತೆ ಇದೇ ರೀತಿಯ ಅಪರಾಧವನ್ನು ಮಾಡಬಾರದು 
3. ಸಮೀರ್ ತಪ್ಪಿಸಿಕೊಳ್ಳಬಾರದು 
4. ಬೆದರಿಕೆ, ಪ್ರಚೋದನೆ ಅಥವಾ ಇನ್ಯಾವುದೇ ರೀತಿಯಲ್ಲಿ ಸಾಕ್ಷಿಗಳನ್ನು ತಿರುಚಬಾರದು. 
5. ಪ್ರಾಸಿಕ್ಯೂಷನ್ ಸಾಕ್ಷ್ಯವನ್ನು ನಾಶಪಡಿಸಬಾರದು. 
6. ತನಿಖಾಧಿಕಾರಿಗೆ ಸಮೀರ್​ ಸಿಗುವಂತಿರಬೇಕು. ಅಗತ್ಯವಿದ್ದಾಗ ವಿಚಾರಣೆಗೆ ಹಾಜರಾಗಬೇಕು.
7. ನಿಗದಿತ ಸಂದರ್ಭದಲ್ಲಿ ಕೋರ್ಟ್​ಗೆ ಹಾಜರಾಗಬೇಕು.
ಈ ಷರತ್ತುಗಳನ್ನು ಆರೋಪಿ ಸಮೀರ್ ಎಂ.ಡಿ. ಪಾಲಿಸಬೇಕು. ಷರತ್ತು ಉಲಂಘಿಸಿದರೇ, ನಿರೀಕ್ಷಣಾ ಜಾಮೀನು ರದ್ದುಪಡಿಸುವಂತೆ ಪೊಲೀಸರು, ಪ್ರಾಸಿಕ್ಯೂಷನ್ ಗೆ ಕೋರ್ಟ್ ಗೆ ಮನವಿ ಮಾಡಲು ಅವಕಾಶ ಸಿಗಲಿದೆ. 

ಇದನ್ನೂ ಓದಿ:ಅನನ್ಯ ಭಟ್ ಬಗ್ಗೆ ಸುಜಾತ ಭಟ್ ರಿಂದ ಗೊಂದಲ, ಅಸ್ಪಷ್ಟ ಹೇಳಿಕೆ, ಉತ್ತರ ಸಿಗದ 15 ಪ್ರಶ್ನೆಗಳು

sameer md(1)

ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿದ್ದ ಆರೋಪದ ಮೇಲೆ ಪೊಲೀಸರು ಜುಲೈ 12ರಂದು ಸಮೀರ್​ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದರು. ಇದೇ ಪ್ರಕರಣದಲ್ಲಿ ಯೂಟ್ಯೂಬರ್ ಸಮೀರ್ ಎಂ.ಡಿ. ಯನ್ನ ಬಂಧಿಸಲು ಧರ್ಮಸ್ಥಳ ಪೊಲೀಸರು ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದರು. 

ಇದಕ್ಕೂ ಮೊದಲೇ ಆಗಸ್ಟ್ 19ರಂದೇ ಸಮೀರ್​ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಜಿಲ್ಲಾ ನ್ಯಾಯಾಲಯವು ಸಂಜೆ 4.30ಕ್ಕೆ ಆದೇಶ ಕಾಯ್ದಿರಿಸಿತ್ತು. ಇದೀಗ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಲಯ ಯೂಟ್ಯೂಬರ್ ಸಮೀರ್​ಗೆ ನಿರೀಕ್ಷಣಾ  ಜಾಮೀನು ಮಂಜೂರು ಮಾಡಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

dharmasthala case, sameer md
Advertisment