ಚಂದ್ರಗ್ರಹಣ ಬಗ್ಗೆ ಹೆಬ್ಬಳ್ಳಿ ಅಜ್ಜನ ಭವಿಷ್ಯ.. ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್

ಸೂರ್ಯ ಹಾಗೂ ಚಂದ್ರನ ನಡುವೆ ಭೂಮಿ ಮೆಲ್ಲನೆ ಬಂದಾಗ ಚಂದ್ರಗ್ರಹಣ ಸಂಭವಿಸಿತು. ಈ ಮಹಾ ಅದ್ಭುತವನ್ನು ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಸಾರ್ವಜನಿಕರು ನೋಡಿ ಖುಷಿ ಪಟ್ಟರು. ಈ ಚಂದ್ರಗ್ರಹಣ ಹೋಲಿಕೆ ಆಗುವಂತೆ 2 ತಿಂಗಳ ಹಿಂದೆಯೇ ದರ್ಗಾದ ಅಜ್ಜ ಭವಿಷ್ಯ ನುಡಿದಿದ್ದರು.

author-image
Bhimappa
BGK_LUNAR_1
Advertisment

ಬಾಗಲಕೋಟೆ: ಖಗೋಳ ಕೌತುಕಕ್ಕೆ ನಭೋ ಮಂಡಲ ಸಾಕ್ಷಿ ಆಗಿದ್ದು, ಸದ್ಯ ಸುದೀರ್ಘ ಚಂದ್ರಗ್ರಹಣ   ಮುಕ್ತಾಯವಾಗಿದೆ. ಆಕಾಶದಲ್ಲಿ ಬೆಳ್ಳಗೆ ಕಾಣುತ್ತಿದ್ದ ಚಂದ್ರ ನಿನ್ನೆ ಗ್ರಹಣದಿಂದ ಬಂಧಿಯಾಗಿದ್ದು, ಕೆಂಪು ಬಣ್ಣದಲ್ಲಿ ಕಾಣಿಸಿಕೊಂಡಿದ್ದಾನೆ.

ಸೂರ್ಯ ಹಾಗೂ ಚಂದ್ರನ ನಡುವೆ ಭೂಮಿ ಮೆಲ್ಲನೆ ಬಂದಾಗ ಚಂದ್ರಗ್ರಹಣ ಸಂಭವಿಸಿತು. ಈ ಮಹಾ ಅದ್ಭುತವನ್ನು ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಸಾರ್ವಜನಿಕರು ನೋಡಿ ಖುಷಿ ಪಟ್ಟಿದ್ದಾರೆ. ಈ ಚಂದ್ರಗ್ರಹಣ ಹೋಲಿಕೆ ಆಗುವಂತೆ ಎರಡು ತಿಂಗಳ ಹಿಂದೆಯೇ ದರ್ಗಾದ ಅಜ್ಜ ಭವಿಷ್ಯ ನುಡಿದಿದ್ದರು.

ಇದನ್ನೂ ಓದಿ:ರಾತ್ರಿ ಕ್ಷಣ ಕ್ಷಣಕ್ಕೂ ಶಶಿಯ ಬಣ್ಣ ಬದಲಾವಣೆ.. ಅಪರೂಪದ ಚಂದ್ರಗ್ರಹಣ ಚಂದವೋ ಚಂದ!

BGK_LUNAR

ಎರಡು ತಿಂಗಳ ಹಿಂದೆಯೇ ಚಂದ್ರಗ್ರಹಣ ಭವಿಷ್ಯ ನುಡಿದ ಅಜ್ಜ

ಬಾಗಲಕೋಟೆಯ ಬಾದಾಮಿ ತಾಲೂಕಿನ ಹೆಬ್ಬಳ್ಳಿಯ ಗುರುದೊಡ್ಡಸಾಬವಲಿ ದರ್ಗಾದ ಅಜ್ಜ ಎರಡು ತಿಂಗಳ ಹಿಂದೆಯೇ ಚಂದ್ರಗ್ರಹಣದ ಭವಿಷ್ಯ ನುಡಿದಿದ್ದರು. ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಶಾಕ್​ ಆಗಿದ್ದಾರೆ.  

ಹೆಬ್ಬಳ್ಳಿ ಅಜ್ಜ ಮೊಹರಂ ಹಬ್ಬದ ಕೊನೆಯ ದಿನದಂದು, ಚಂದ್ರನನ್ನ ಕೆಂಪು ಮಾಡಬೇಕಂತ ಮಾಡೀನಿ. ಇಷ್ಟು ದಿನ 10-12 ವರ್ಷ ಬೆಳ್ಳಂಗೆ ಚಂದ್ರ ಬೆಳ್ಳಗೆ ಮಾಡಿದ್ದೆ. ಆದರೆ ಇನ್ಮೇಲೆ ಚಂದಪ್ಪನನ್ನ ಕೆಂಪು ರಕ್ತಮಯ ಮಾಡ್ತೀನಿ ಎಂದು ಎರಡು ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದರು. ಸದ್ಯ ಈ ವಿಡಿಯೋ ವೈರಲ್​ ಅಗಿದ್ದು, ಅಚ್ಚರಿಯನ್ನ ಮೂಡಿಸಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Red Moon Blood Moon Bagalkot mini cylinder blast, bagalkot
Advertisment