/newsfirstlive-kannada/media/media_files/2025/08/14/anukumar_darshan-2025-08-14-14-52-30.jpg)
ಚಿತ್ರದುರ್ಗ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ 7 ಆರೋಪಿಗಳಿಗೆ ನೀಡಲಾದ ಜಾಮೀನು ಅನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ಈ ಆರೋಪಿಗಳಲ್ಲಿ ಒಬ್ಬರಾಗಿರುವ ಅನುಕುಮಾರ್ ಕೂಡ ಮತ್ತೆ ಜೈಲಿಗೆ ಹೋಗಬೇಕಾಗಿದೆ. ನ್ಯಾಯಾಲಯದಿಂದ ತೀರ್ಪು ಬೆನ್ನಲ್ಲೇ ಅನುಕುಮಾರ್ ತಾಯಿ, ದೇವರು ನಮಗೆ ನೆಮ್ಮದಿ ಕೊಡಲಿಲ್ಲ ಎಂದು ಗೋಳಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಆರೋಪಿ ಅನುಕುಮಾರ್ ಅವರ ತಾಯಿ ಜಯಮ್ಮ, ಜೈಲಿಗೆ ಹೋದವನು ಬಂದನಲ್ಲ ಎನ್ನುವ ನೆಮ್ಮದಿ ಇಷ್ಟು ದಿನ ಇತ್ತು. ಮನೆಯಲ್ಲಿ ಕೂಲಿ ಮಾಡಿಕೊಂಡು ಚೆನ್ನಾಗಿ ಇದ್ವಿ. ಮತ್ತೆ ಈಗ ಅದೇ ಪರಿಸ್ಥಿತಿ ಬಂದಿದೆ. ಜಾಮೀನು ಪಡೆಯಲು ಎಲ್ಲೆಲ್ಲೋ ಸಾಲ ಮಾಡಿ ಮಗನನ್ನು ಕರೆದುಕೊಂಡು ಬಂದಿದ್ದೇವು ಎಂದು ಹೇಳಿದ್ದಾರೆ.
ಇದನ್ನೂ ಓದಿ:BREAKING: ಸುಪ್ರೀಂ ಕೋರ್ಟ್ ತೀರ್ಪು ಬೆನ್ನಲ್ಲೇ ಎ1 ಆರೋಪಿ ಪವಿತ್ರಾ ಗೌಡ ಅರೆಸ್ಟ್
ಈಗ ಮಾಡಿರುವ ಸಾಲವನ್ನು ಮಗ ಅನುಕುಮಾರ್ ತೀರಿಸುತ್ತಾನೆ ಎಂದುಕೊಂಡಿದ್ವಿ. ಮತ್ತೆ ಈಗ ಸಂಕಷ್ಟ ಬಂದರೆ ನಾವು ಬದುಕುವುದು ಹೇಗೆ?. ನಾವು ನೋವು ಹೇಗೆ ಸುಧಾರಿಸಿಕೊಳ್ಳಬೇಕು?. ಮತ್ತೆ ಈಗ ನಮಗೆ ಕೊರಗು ಬಂದಿದೆ. ಬೆಳಗ್ಗೆ ಇದನ್ನು ಕೇಳಿ ಬೇಸರ ಆಯಿತು. ಶೂರಿಟಿಗೂ ಸಾಕಷ್ಟು ಓಡಾಡಿ ಬೇಲ್ ತಂದಿದ್ದೇವೆ. ನಮ್ಮ ಕಷ್ಟಕ್ಕೆ ಯಾರು ಆಗಲೇ ಇಲ್ಲ. ದೇವರು ಹೀಗೆ ವನವಾಸ ಕೊಟ್ಟರೇ ಏನ್ ಮಾಡೋದು ಎಂದು ಹೇಳಿದ್ದಾರೆ.
ಮಳೆ ಬಂದರೆ ಮನೆ ಸೋರುತ್ತಿದೆ. ಹೇಗೋ ಮಾಡಿ ಮನೆ ಕಟ್ಟೋಣ, ಸೀಟ್ ಹಾಕ್ಕೊಂಡು ಇರೋಣ ಎಂದುಕೊಂಡಿದ್ವಿ. ಆದರೆ ದೇವರು ನಮಗೆ ನೆಮ್ಮದಿನೇ ಕೊಡಲಿಲ್ಲ. ಎನ್ ಮಾಡೋದು?. ಇನ್ನೇನು ಇಲ್ಲ, ದೇವರ ಮೇಲೆ ಭಾರ ಹಾಕಿದ್ದೇವೆ. ನನ್ನ ಮಗ ಅಲ್ಲ, ನಿನ್ನ ಮಗ ಎಂದು ಬಿಟ್ಟಿದ್ದೇನೆ ಅಷ್ಟೇ.. ಎಂದು ಅಳುತ್ತಾ ಆರೋಪಿ ಅನುಕುಮಾರ್ ಅವರ ತಾಯಿ ಜಯಮ್ಮ ದುಃಖ ವ್ಯಕ್ತಪಡಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ