Advertisment

ಪಾರ್ಟಿ ವೇಳೆ ಸ್ನೇಹಿತನ ಜೊತೆ ಗಲಾಟೆ.. ಯುವತಿ ದುರಂತ ಅಂತ್ಯದ ಹಿಂದೆ ಅನುಮಾನ

ಮಿಟ್ಲಕಟ್ಟೆ ಬಳಿ ಬೈಕ್ ಅಪಘಾತ ಸಂಭವಿಸಿ ದಾವಣಗೆರೆ ಮೂಲದ ಯುವತಿ ಪ್ರಿಯಾ (22) ಮೃತಪಟ್ಟಿದ್ದಾಳೆ. ಹಮ್ಸ್​ನಿಂದಾಗಿ ಬ್ಯಾಲೆನ್ಸ್ ತಪ್ಪಿ ಮರಕ್ಕೆ ಡಿಕ್ಕಿಯಾಗಿ ದುರಂತ ಸಂಭವಿಸಿದೆ.

author-image
Ganesh Kerekuli
Davanagere accident
Advertisment

ದಾವಣಗೆರೆ: ಮಿಟ್ಲಕಟ್ಟೆ ಬಳಿ ಬೈಕ್ ಅಪಘಾತ ಸಂಭವಿಸಿ ದಾವಣಗೆರೆ ಮೂಲದ ಯುವತಿ ಪ್ರಿಯಾ (22) ಮೃತಪಟ್ಟಿದ್ದಾಳೆ. ಹಮ್ಸ್​ನಿಂದಾಗಿ ಬ್ಯಾಲೆನ್ಸ್ ತಪ್ಪಿ ಮರಕ್ಕೆ ಡಿಕ್ಕಿಯಾಗಿ ದುರಂತ ಸಂಭವಿಸಿದೆ. 

Advertisment

ಮೃತ ಪ್ರಿಯಾ ಸ್ನೇಹಿತ ಯೋಗೆಶ್ ಜೊತೆ  ಪಾರ್ಟಿಗೆ ತೆರಳಿದ್ದಳು. ಜರಕಟ್ಟೆಯಲ್ಲಿರುವ ಆಧ್ಯಾ ಹೋಟೆಲ್​ಗೆ ಹೋದಾಗ ಸ್ನೇಹಿತ ಯೋಗೆಶ್ ಮತ್ತು ಪ್ರಿಯಾ ಮಧ್ಯೆ ವಾಗ್ವಾದ ನಡೆದಿದೆ. ನಂತರ ಪ್ರಿಯಾಳ ಮನವೊಲಿಸಿ ಬೈಕ್​​ನಲ್ಲಿ ಕರೆದುಕೊಂಡು ಬಂದಿದ್ದ ಎನ್ನಲಾಗಿದೆ.

ಈ ವೇಳೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಮಿಟ್ಲಕಟ್ಟೆ ಬಳಿ ಅಪಘಾತ ಸಂಭವಿಸಿದೆ. ಅಪಘಾತದ ಸ್ಥಳದಲ್ಲಿ ಯುವತಿ ಮೃತಪಟ್ಟರೆ ಯೋಗೆಶ್ ಗಂಭೀರ ಗಾಯಗೊಂಡಿದ್ದಾರೆ. ಮೃತ ಪ್ರಿಯಾ ಮತ್ತು ಯೋಗೆಶ್​ ವಾಗ್ವಾದದ ಕೊನೆ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪಾರ್ಟಿಯಲ್ಲಿ ನಿಜಕ್ಕೂ ಇಬ್ಬರ ಮಧ್ಯೆ ಆಗಿರುವ ಗಲಾಟೆ ಏನು ಅನ್ನೋದು ತನಿಖೆಯಿಂದ ತಿಳಿದುಬರಬೇಕಿದೆ. 

ಇದನ್ನೂ ಓದಿ: ಡಿಕೆಶಿಗೆ ಸಿಎಂ ಸ್ಥಾನ ನೀಡಲಿ ಎಂದು ಬಹಿರಂಗವಾಗಿ ಧ್ವನಿ ಎತ್ತಿದ ಶಾಸಕ ಕದಲೂರು ಉದಯ್‌! ಡಿಕೆಗೆ ಪ್ರತಿಫಲ ಸಿಗಬೇಕು ಎಂದ ಉದಯ್‌ 

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Davanagere news
Advertisment
Advertisment
Advertisment