/newsfirstlive-kannada/media/media_files/2025/10/12/dk_shivakumar_friend_55-2025-10-12-16-30-15.jpg)
ಬೆಂಗಳೂರು: ಸ್ನೇಹಿತ, ಗಳೆಯ ಎಂದರೆ ಯಾವಾಗಲೂ ಎಲ್ಲರ ಎದೆ ಮಿಡಿಯುತ್ತದೆ. ಏಕೆಂದರೆ ಎಲ್ಲರಿಗೂ ಸ್ನೇಹಿತ ಇದ್ದೇ ಇರುತ್ತಾನೆ. ಆದರೆ ಜೀವನದಲ್ಲಿ ಹಲವಾರು ಬದಲಾವಣೆ ನಡೆಯುವಾಗ, ನಮ್ಮ ಪಯಾಣ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗುವಾಗ ಸ್ನೇಹಿತನ ಬಿಟ್ಟು ಬಂದಿರುತ್ತೇವೆ. ಅಂತಹ ಸ್ನೇಹ ಮತ್ತೆ ಸಿಕ್ಕರೇ ಎಷ್ಟು ಖುಷಿ, ಸಂತಸ ಇರುತ್ತೋ.. ಅಂತಹ ಸಂದರ್ಭಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಇಂದು ಸಾಕ್ಷಿಯಾಗಿದ್ದಾರೆ.
ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಇವತ್ತು ಬೆಂಗಳೂರು ನಡಿಗೆ ಕಾರ್ಯಕ್ರಮದ ಅಂಗವಾಗಿ ಮತ್ತಿಕೆರೆಯ ಜೆಪಿ ಪಾರ್ಕ್​ನಲ್ಲಿ ಜನರೊಂದಿಗೆ ಸಂವಾದ ನಡೆಸುತ್ತಿದ್ದರು. ಈ ವೇಳೆ ಅವರಿಗೆ ಶಾಲಾ ದಿನಗಳಲ್ಲಿದ್ದ ಸ್ನೇಹಿತ ಸಿಕ್ಕಿದ್ದಾರೆ. ಗೆಳೆಯ ಕಾಣಿಸುತ್ತಿದ್ದಿದ್ದೇ ತಡ ತಮ್ಮ ಶಾಲಾದಿನಗಳ ವರಸೆಯಲ್ಲಿ ಎಲ್ಲಿದ್ದೋ, ಏನ್​ ಮಾಡುತ್ತಿದ್ದೀಯಾ.. ಬಾ..ಬಾ.. ಎಂದು ಆತ್ಮೀಯವಾಗಿ ಕರೆದು ತಬ್ಬಿಕೊಂಡಿದ್ದಾರೆ. ಈ ವೇಳೆ ಸ್ನೇಹಿತ ಮಾದವ್ ನಾಯಕ್ ಮೊಗದಲ್ಲಿ ನಗುವಿನ ಮಂದಹಾಸವಿತ್ತು. ಡಿ.ಕೆ ಶಿವಕುಮಾರ್ ಅವರು ಶಾಲಾ ದಿನಗಳನ್ನು ಮೆಲುಕು ಹಾಕಿದರು.
ಇದನ್ನೂ ಓದಿ:ದಾಖಲೆ ಹೊಸ್ತಿಲಿನಲ್ಲಿ ಸ್ಮೃತಿ ಮಂದಾನ.. ಮಹತ್ವದ ರೆಕಾರ್ಡ್​ ಬ್ರೇಕ್ ಮಾಡ್ತಾರಾ?
ಶಾಲೆಯಲ್ಲಿ ನಾನು ಎಲೆಕ್ಷನ್​ಗೆ ನಿಂತುಕೊಂಡಿದ್ದೆ. ಆಗ ಇವನು ಮ್ಯಾಥ್ಸ್​ನಲ್ಲಿ ಫಸ್ಟ್​ ಇದ್ದ. ಎಲೆಕ್ಷನ್​ನಲ್ಲಿ ಕೌಂಟಿಂಗ್ ಬಂದಾಗ ನನ್ನ ಪರವಾಗಿ ಇವನನ್ನ ಕಳಿಸಿದ್ದೆ ಎಂದು ಡಿ.ಕೆ ಶಿವಕುಮಾರ್ ಅವರು ಹೇಳುತ್ತಿದ್ದಂತೆ ಅಲ್ಲಿದ್ದವರೆಲ್ಲ ನಕ್ಕರು. ಬಳಿಕ ಫೋಟೋಗೆ ಪೋಸ್​ ಕೊಡುವಾಗಲೂ ಮಾತನಾಡಿದ ಡಿಸಿಎಂ, ನಾನು ಬರೋಬ್ಬರಿ 55 ವರ್ಷಗಳ ನಂತರ ಗಳೆಯನನ್ನು ಮೀಟ್​ ಮಾಡಿದೆ. ಶಾಲೆಯಲ್ಲಿ ನನಗೆ ಇವನು ಎಲೆಕ್ಷನ್ ಏಜೆಂಟ್​ ಎಂದು ಹೇಳಿ ಸಂತಸ ಪಟ್ಟಿದ್ದಾರೆ.
ನಾನು 7ನೇ ಕ್ಲಾಸ್​ನಲ್ಲಿ ಕಾರ್ಮೆಂಟ್​ ಸ್ಕೂಲ್​ನಲ್ಲಿ ಎಲೆಕ್ಷನ್​ಗೆ ನಿಂತಿದ್ದೆ. ಅವಾಗ ನನಗೆ ಇವನು ಕೌಂಟಿಂಗ್ ಏಜೆಂಟ್ ಆಗಿದ್ದನು. ಶಾಲೆಯಲ್ಲಿ ಬ್ರಿಲಿಯಂಟ್​ ಆಗಿದ್ದ. ಹಳೆಯ ಗೆಳೆಯರು ಎಲ್ಲ ಆಗಾಗ ಸಿಗುತ್ತಿರುತ್ತಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಅವರ ಗೆಳೆಯ ಮಾದವ್ ನಾಯಕ್ ಅವರು ಮಾತನಾಡಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ