ಗುಂಡಿನ ದಾಳಿ.. ಆಸ್ಪತ್ರೆಗೆ ಕರೆದುಕೊಂಡು ಹೋದರು ಉಳಿಯಲಿಲ್ಲ ಎರಡು ಜೀವ

ತಕ್ಷಣ ಅವರ ಕುಟುಂಬಸ್ಥರು ಗಾಯಾಳುಗಳನ್ನ ದೆಹಲಿಯ ಜಿಬಿಟಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಪಡೆಯುವಾಗಲೇ ಇಬ್ಬರು ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲು ಮಾಡಲಾಗಿದೆ.

author-image
Bhimappa
DELHI_POLICE_1
Advertisment

ನವದೆಹಲಿ: ಗುಂಡಿನ ದಾಳಿಗೆ ಇಬ್ಬರು ವ್ಯಕ್ತಿಗಳು ಜೀವ ಕಳೆದುಕೊಂಡಿರುವ ಘಟನೆ ಈಶಾನ್ಯ ದೆಹಲಿಯ ಪ್ರತಾಪ್ ನಗರದ ಸಿ-ಬ್ಲಾಕ್​ ಏರಿಯಾದಲ್ಲಿ ನಡೆದಿದೆ. 

ಸುಧೀರ್ ಅಲಿಯಾಸ್ ಬಂಟಿ (35) ಹಾಗೂ ರಾಧೆ ಪ್ರಜಾಪತಿ (30) ಗುಂಡಿನ ದಾಳಿಯಲ್ಲಿ ಬಲಿಯಾದವರು. ನಿನ್ನೆ ಸುಮಾರು 6 ರಿಂದ 7 ಗಂಟೆ ಸುಮಾರಿಗೆ ಸಿ-ಬ್ಲಾಕ್​ ಏರಿಯಾದಲ್ಲಿ ಫೈರಿಂಗ್ ಮಾಡಿರುವ ಶಬ್ಧ ಕೇಳಿ ಬಂದಿದೆ. ಇದರಿಂದ ಸ್ಥಳೀಯರು ಓಡೋಡಿ ಬಂದು ನೋಡಿದರೆ ಸ್ಥಳದಲ್ಲಿ ಇಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. 

ಇದನ್ನೂ ಓದಿ: 4 ಅಂತಸ್ತಿನ ಕಟ್ಟಡ ಕುಸಿದು ಬಿದ್ದು ತಂದೆ, ಮಗಳು ಬಲಿ.. 7 ಮಂದಿ ಗಂಭೀರ

DELHI_POLICE

ತಕ್ಷಣ ಅವರ ಕುಟುಂಬಸ್ಥರು ಗಾಯಾಳುಗಳನ್ನ ದೆಹಲಿಯ ಜಿಬಿಟಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಪಡೆಯುವಾಗಲೇ ಇಬ್ಬರು ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಸೆಕ್ಷನ್ 103(1), ಮತ್ತು 3(5) ಭಾರತೀಯ ನ್ಯಾಯಾ ಸಂಹಿತಾ (ಬಿಎನ್​ಎಸ್​) ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಗುಂಡಿನ ದಾಳಿ ಮಾಡಿದವರು ಯಾರೆಂದು ತಿಳಿದು ಬಂದಿಲ್ಲ. ಹೀಗಾಗಿ ಫಾರೆನ್ಸಿಕ್​ ಸಿಬ್ಬಂದಿ ಸ್ಥಳವನ್ನು ಸೂಕ್ಷ್ಮವಾಗಿ ಪರಿಶೀಲನ ನಡೆಸಿದ್ದಾರೆ.

ಯಾವ ಉದ್ದೇಶಕ್ಕೆ ದುಷ್ಕರ್ಮಿಗಳು ಈ ಕೃತ್ಯ ನಡೆಸಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ. ಮೇಲ್ನೋಟಕ್ಕೆ ಇದು ಹಳೆಯ ದ್ವೇಷ ಎಂದು ಹೇಳಲಾಗುತ್ತಿದೆ. ಇನ್ನೊಂದು ಅರ್ಥದಲ್ಲಿ ಗ್ಯಾಂಗ್​ವಾರ್​ಗಳ ಮಧ್ಯೆದ ಪೈಪೋಟಿ ಎನ್ನಲಾಗುತ್ತಿದೆ. ಹೀಗಾಗಿ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ಮಾಡುತ್ತಿದ್ದು ಆರೋಪಿಗಳನ್ನು ಪತ್ತೆ ಹಚ್ಚಲು ತಂಡಗಳನ್ನು ರಚನೆ ಮಾಡಲಾಗಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Delhi Police Delhi CM Delhi double murder case
Advertisment