ಮಾಸ್ಕ್​ಮ್ಯಾನ್ ಚಿನ್ನಯ್ಯನ ಸಹೋದರನನ್ನ ವಶಕ್ಕೆ ಪಡೆದ SIT ಅಧಿಕಾರಿಗಳು

ಧರ್ಮಸ್ಥಳ ವಿಚಾರದಲ್ಲಿ ದೂರುದಾರ ಮಾಸ್ಕ್​ಮ್ಯಾನ್ ಚಿನ್ನಯ್ಯನ ಸಹೋದರನನ್ನು ವಿಶೇಷ ತನಿಖಾ ತಂಡ (ಎಸ್​ಐಟಿ)ದ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ತಾನಾಸೆ ಬೆಳಗ್ಗೆ ಕೆಲಸಕ್ಕೆ ಹೋಗಿದ್ದನು.

author-image
Bhimappa
MASK_MAN_BROTHER_TANASE
Advertisment

ಮಂಗಳೂರು: ಧರ್ಮಸ್ಥಳ ವಿಚಾರದಲ್ಲಿ ದೂರುದಾರ ಮಾಸ್ಕ್​ಮ್ಯಾನ್ ಚಿನ್ನಯ್ಯನ ಸಹೋದರನನ್ನು ವಿಶೇಷ ತನಿಖಾ ತಂಡ (ಎಸ್​ಐಟಿ)ದ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. 

ಚಿನ್ನಯ್ಯನನ ಸಹೋದರ ತಾನಾಸೆಯನ್ನ ವಶಕ್ಕೆ ಪಡೆಯಲಾಗಿದೆ. ಮಾಸ್ಕ್ ಮ್ಯಾನ್ ಚಿನ್ನಯ್ಯ ಅಲಿಯಾಸ್ ಚೆನ್ನನನ್ನು 10 ದಿನಗಳ ಕಾಲ ಎಸ್‌ಐಟಿ ಪೊಲೀಸರ ವಶಕ್ಕೆ ನೀಡಿ ಬೆಳ್ತಂಗಡಿ ಕೋರ್ಟ್ ಆದೇಶ ನೀಡಿತ್ತು. ಇದರ ಬೆನ್ನಲ್ಲೇ ಎಸ್​ಐಟಿ ಅಧಿಕಾರಿಗಳು ಚಿನ್ನಯ್ಯನ ಸಹೋದರನಾದ ತಾನಾಸೆಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ.      

ಇದನ್ನೂ ಓದಿ: ನನ್ನ ತಂಗಿ ವಾಸಂತಿ ಸಾವಿನಲ್ಲಿ ಸುಜಾತ ಭಟ್ ಕೈವಾಡ; ಸಹೋದರ ವಿಜಯ್ ಸ್ಫೋಟಕ ಆರೋಪ

MASK_MAN

ತಾನಾಸೆ ಬೆಳಗ್ಗೆ ಕೆಲಸಕ್ಕೆ ಎಂದು ಹೋಗಿದ್ದನು. ಆದರೆ ಅವನು ಕೆಲಸ ಮಾಡುವ ಸ್ಥಳಕ್ಕೆ ಹೋಗಿಯೇ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಎಸ್​ಐಟಿ ಅಧಿಕಾರಿಗಳು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆಯಲ್ಲಿ ಏನೆಲ್ಲಾ ಸತ್ಯಗಳು ಹೊರಬರಲಿವೆ. ಧರ್ಮಸ್ಥಳ ವಿಚಾರದಲ್ಲಿ ಇವರು ಹೇಗೆ ಇನ್ವಾಲ್ ಆದರು, ಯಾರು ಈ ಬಗ್ಗೆ ಕುತುಂತ್ರ ಎಣೆದಿದ್ದಾರೆ ಎನ್ನುವುದು ತಿಳಿದು ಬರಬೇಕಿದೆ. 

ಚಿನ್ನಯ್ಯಗೆ 2 ಲಕ್ಷ ರೂಪಾಯಿ ನೀಡಿ ಸುಳ್ಳು ದೂರು ನೀಡಲು ಗ್ಯಾಂಗ್ ಒಂದು ತರಬೇತಿ ನೀಡಿದ್ದಾರಂತೆ. ಇದಾದ ಮೇಲೆಯೇ ಪೊಲೀಸರಿಗೆ ಚಿನ್ನಯ್ಯ ಸುಳ್ಳು ದೂರು ಕೊಟ್ಟಿದ್ದನು. ತಲೆ ಬುರುಡೆಯನ್ನು ಚಿನ್ನಯ್ಯನ ಕೈಗೆ ಗ್ಯಾಂಗ್ ಒಂದು ಕೊಟ್ಟು ಅದನ್ನು ಪೊಲೀಸರು, ಕೋರ್ಟ್​ಗೆ ಒಪ್ಪಿಸು ಎಂದು ಹೇಳಿದ್ದಾರಂತೆ. ಆ ಗ್ಯಾಂಗ್ ಹೇಳಿದಂತೆ ಚಿನ್ನಯ್ಯ ಕೇಳಿದ್ದಾನೆ. ಚಿನ್ನಯ್ಯಗೆ ಸುಳ್ಳು ದೂರು ನೀಡಲು ಹೇಳಿರುವ ಗ್ಯಾಂಗ್ ಬಗ್ಗೆಯೇ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Dharmasthala case Mask man real face revealed MASK MAN SIT CUSTODY
Advertisment