Advertisment

SIT ಮುಂದೆ ಬುರುಡೆ ಕುರಿತು ಬಾಯಿ ಬಿಡದ ಮಾಸ್ಕ್​ಮ್ಯಾನ್ ಚಿನ್ನಯ್ಯ.. ಆ ಗ್ಯಾಂಗ್ ಯಾವುದು?

ತಲೆಬುರುಡೆ ತಂದ ಕೇಸ್​ನಲ್ಲಿ ಮಾಸ್ಕ್​ಮ್ಯಾನ್ ಸಿ.ಎನ್ ಚಿನ್ನಯ್ಯ ಅಲಿಯಾಸ್ ಚೆನ್ನ ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾನೆ. ಆದರೆ ಎಸ್​ಐಟಿ ವಿಚಾರಣೆ ವೇಳೆ ಬುರುಡೆ ಯಾರೋ ತಂದು ಕೊಟ್ಟಿದ್ದಾಗಿ ಅಂತ ಗೊಂದಲವಾದ ಹೇಳಿಕೆ ನೀಡುತ್ತಿದ್ದಾನೆ.

author-image
Bhimappa
MASK_MAN_NEW
Advertisment

ಮಂಗಳೂರು: ತಲೆಬುರುಡೆ ತಂದ ಕೇಸ್​ನಲ್ಲಿ ಮಾಸ್ಕ್​ಮ್ಯಾನ್ ಸಿ.ಎನ್ ಚಿನ್ನಯ್ಯ ಅಲಿಯಾಸ್ ಚೆನ್ನ ಅರೆಸ್ಟ್ ಆಗಿದ್ದಾನೆ. ಆದರೆ ಎಸ್​ಐಟಿ ವಿಚಾರಣೆ ವೇಳೆ ಬುರುಡೆ ಯಾರೋ ತಂದು ಕೊಟ್ಟಿದ್ದಾಗಿ ಗೊಂದಲವಾದ ಹೇಳಿಕೆ ನೀಡುತ್ತಿದ್ದಾನೆ.

Advertisment

ಮಾಸ್ಕ್​ಮ್ಯಾನ್ ಚಿನ್ನಯ್ಯನನ್ನು ಅರೆಸ್ಟ್ ಮಾಡಿದ್ದ ಎಸ್​ಐಟಿ ಅಧಿಕಾರಿಗಳು ಕೋರ್ಟ್​ಗೆ ಹಾಜರು ಪಡಿಸಿದ್ದರು. ಈ ವೇಳೆ ಚಿನ್ನಯ್ಯನನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆದರೆ ಎಸ್​ಐಟಿ ವಿಚಾರಣೆಯಲ್ಲಿ ಯಾರೋ ತಲೆ ಬುರುಡೆ ತಂದು ಕೊಟ್ಟಿದ್ದಾರೆ ಎಂದು ಚಿನ್ನಯ್ಯ ಹೇಳುತ್ತಿದ್ದಾನೆ. ಜುಲೈ 11 ರಂದು ಕೋರ್ಟ್​ನಲ್ಲಿ ತಾನೇ ಭೂಮಿ ಅಗೆದು ತಂದಿದ್ದಾಗಿ 164ರ ಪ್ರಕಾರ ಹೇಳಿಕೆ ಕೊಟ್ಟಿದ್ದನು.

ಇದನ್ನೂ ಓದಿ:ಧರ್ಮಸ್ಥಳದ ಬಗ್ಗೆ ಜನರಲ್ಲಿದ್ದ ಭಕ್ತಿ ಭಾವನೆ ಎಲ್ಲ ಹಾಳು ಮಾಡಿದರು- ವಿಪಕ್ಷ ನಾಯಕ R ಅಶೋಕ್

MASK_MAN_DHARMA

ಇದೇ ಆಧಾರದ ಮೇಲೆ ಆ ಬುರುಡೆಯನ್ನ ಫಾರೆನ್ಸಿಕ್ ಕಳುಹಿಸಿ ಸ್ಥಳ ಪರಿಶೋಧನೆಯನ್ನು ಆರಂಭಿಸಲಾಗಿತ್ತು. ಆದರೆ ನಿರಂತರ ತನಿಖೆಯಿಂದಾಗಿ ಬುರುಡೆ ಬಗ್ಗೆ ಗೊಂದಲಕಾರಿ ಹೇಳಿಕೆ ನೀಡುತ್ತಿದ್ದಾನೆ. ಅದನ್ನು ಎಲ್ಲಿಂದ ತಂದ್ದಿದ್ದು ಎನ್ನುವ ಬಗ್ಗೆ ಹೇಳಿಕೆ ನೀಡುತ್ತಿಲ್ಲ. ಹೀಗಾಗಿ ಡಿಜಿಪಿ ಮೊಹಾಂತಿ ಅವರ ನಿರ್ದೇಶನದಂತೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

Advertisment

ವಿಚಾರಣೆಯಲ್ಲಿ ಬುರುಡೆ ನಾನು ಅಗೆದು ತಂದಿಲ್ಲ ಅದನ್ನು ತಂದು ಕೊಟ್ಟ ಗ್ಯಾಂಗ್ ತಂದು ಕೊಟ್ಟಿತ್ತು. ಇದರ ಆಧಾರದಲ್ಲಿ ಸುಳ್ಳು ಸಾಕ್ಷ್ಯ ಹಾಗೂ ಸುಳ್ಳು ಹೇಳಿಕೆ ಆಧಾರದಲ್ಲಿ ವಶಕ್ಕೆ ಪಡೆದಿದ್ದರು. ವಶಕ್ಕೆ ಪಡೆದು ನ್ಯಾಯಾಲಯದ ಎದುರು ಹಾಜರು ಪಡಿಸಲಾಗಿತ್ತು. ಕೋರ್ಟ್​ನಲ್ಲಿ ಬುರುಡೆ ಗ್ಯಾಂಗ್ ಬಗ್ಗೆ ಮಾಹಿತಿ ನೀಡಿದ್ದನು. ಸದ್ಯ ಹೆಚ್ಚಿನ ತನಿಖೆಗಾಗಿ ರಿವರ್ಸ್ ತನಿಖೆ ಹಿನ್ನೆಲೆಯಲ್ಲಿ ಚಿನ್ನಯ್ಯನನ್ನ ಎಸ್​ಐಟಿ ವಶಕ್ಕೆ ಪಡೆದುಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Dharmasthala case dharmasthala MASK MAN SIT CUSTODY Mask man real face revealed
Advertisment
Advertisment
Advertisment