/newsfirstlive-kannada/media/media_files/2025/08/23/r_ashok-2-2025-08-23-13-40-25.jpg)
ಬೆಂಗಳೂರು: ಧರ್ಮಸ್ಥಳ ವಿಚಾರದಲ್ಲಿ ಆರಂಭವಾದಗಿಂದ ಇದರಲ್ಲಿ ಷಡ್ಯಂತ್ರ ಇದೆ ಎಂದು ಮೊದಲೇ ಹೇಳಿದ್ದೇವು. ಬರೀ ಬುರುಡೆಯನ್ನೇ ಬಿಟ್ಟಿದ್ದಾರೆ. ಆದರೆ ರಾಜ್ಯದ ಜನರು ನೋವನ್ನು ಅನುಭವಿಸಿದರು. ಧರ್ಮಸ್ಥಳದ ಬಗ್ಗೆ ಇದ್ದಂತಹ ಭಕ್ತಿ ಭಾವನೆ ಹಾಳು ಮಾಡಿದರು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಹೇಳಿದ್ದಾರೆ.
ಧರ್ಮಸ್ಥಳದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಧರ್ಮಸ್ಥಳದ ಬಗ್ಗೆ ಬುರುಡೆ ತೋರಿಸಿ ಬರೀ ಬುರುಡೆ ಬಿಟ್ಟಿದ್ದಾರೆ. ಧರ್ಮಸ್ಥಳದ ಬಗ್ಗೆ ಇದ್ದ ಭಕ್ತಿ ಭಾವನೆ ಹಾಳು ಮಾಡಿದರು. ಎಸ್ಐಟಿ ರಚನೆ ಮಾಡುವಂತೆ ಸಿಎಂಗೆ ನಿತ್ಯ ಸಾವಿರಾರು ಪತ್ರಗಳು ಬರುತ್ತಿದ್ದವು. ಆದರೆ ಇವರು ಮೊದಲು ಎಸ್ಐಟಿ ಮಾಡಿದ್ದೇ ತಪ್ಪು. ದೂರು ಕೊಟ್ಟವನು ಏನು ಅಂತ ಮೊದಲೇ ತಿಳಿಯಬೇಕಿತ್ತು. ಮಾಸ್ಕ್ಮ್ಯಾನ್ನ ಹೆಂಡತಿಯೇ ಅವನ ಬಗ್ಗೆ ಆರೋಪ ಮಾಡಿದ್ದಾಳೆ ಎಂದು ಹೇಳಿದ್ದಾರೆ.
ಸಮೀರ್ ಎಂಡಿ ಮೊದಲು ಆರೋಪ ಮಾಡಿದ್ದು. ಅವನು ಎಡಪರ ಸಂಘಟನೆಗಳನ್ನ ಜೊತೆಗೆ ಕರೆದುಕೊಳ್ಳುತ್ತಾನೆ. ಬಳಿಕ ಅನನ್ಯ ಭಟ್ ನಾಪತ್ತೆ ಅಂತ ಕರೆದುಕೊಳ್ಳುತ್ತಾನೆ. ತನಿಖೆ ಹೇಗೆ ಮಾಡಬೇಕು ಅಂತ ಇವರೇ ಬರೆದುಕೊಟ್ಟಿದ್ದಾರೆ. ಧರ್ಮಸ್ಥಳದಲ್ಲಿ ಇರೋರನ್ನ ಮತಾಂತರ ಮಾಡಲು ಹೊರಟಿದ್ದಾರೆ. ಸಮೀರ್ ಎನ್ನುವನು ಎಲ್ಲಿಂದ ಬಂದ?. ಅನೇಕರು ಅತ್ಯಾಚಾರ ಆಗಿದೆ ಅಂತ ನೂರಾರು ದೂರು ಕೊಟ್ಟಿದ್ದಾರೆ. ಅದರ ಬಗ್ಗೆ ಎಷ್ಟು ಕ್ರಮ ಕೈಗೊಂಡಿದ್ದಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಇಷ್ಟೊಂದು ಪೊಲೀಸ್ ಅಧಿಕಾರಿಗಳು ರೆಗ್ಯೂಲರ್ ಕೆಲಸ ಬಿಟ್ಟು ಇದರ ತನಿಖೆಗೆ ಹೋಗಿದ್ದಾರೆ. ಬೆಟ್ಟ ಅಗೆದು, ಇಲಿ ಹಿಡಿದಿದ್ದಾರೆ. ಇಂತ ತಪ್ಪನ್ನ ಯಾವ ಸರ್ಕಾರ ಕೂಡ ಮಾಡಿಲ್ಲ. ಯಾರೋ ದಾರಿ ಹೋಕರು ಹೇಳಿದ ಅಂತೆ ಮಾಡಿದ್ದಾರೆ. ಕಾಂಗ್ರೆಸ್ನವರು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆರ್ ಅಶೋಕ್ ಹೇಳಿದ್ದಾರೆ.
ಮುಸುಕುದಾರಿ ಮನುಷ್ಯನಿಗೆ ಮನೆ ಕೊಡುತ್ತೇವೆ, ಹಣ ಕೊಡುತ್ತೇವೆ ಎಂದು ಆಸೆ ತೋರಿಸಿದ್ದಾರೆ. ಅವನನ್ನ ಈಗ ಜೈಲಿಗೆ ಕಳಿಸಿದ್ದಾರೆ. ಮುಸುಕುದಾರಿ ಮುಖ್ಯ ಅಲ್ಲ, ಆತನ ಹಿಂದೆ ಇರುವರನ್ನ ಪತ್ತೆ ಮಾಡಬೇಕು. ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಗೌರವ ಇದ್ರೆ, ಮುಸುಕುದಾರಿ ಹಿಂದೆ ಯಾರಿದ್ದಾರೆ ಅಂತ ಪತ್ತೆ ಹಚ್ಚಲು ಎಸ್ಐಟಿ ರಚಿಸಬೇಕು. ಇಲ್ಲ ಎಂದರೆ ಎನ್ಐಎ ತನಿಖೆಗೆ ಕೊಡಿ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಧರ್ಮಸ್ಥಳ ಕೇಸ್; ಆರೆಸ್ಟ್ ಆದ ಮಾಸ್ಕ್ಮ್ಯಾನ್ ಚಿನ್ನಯ್ಯ ಎಲ್ಲಿ ಕೆಲಸ ಮಾಡುತ್ತಿದ್ದ..? ನಿಜವಾದ ಮುಖ ರಿವೀಲ್
ತನಿಖೆಗೆ ಕೊಡಲೇಬೇಕು, ಇಲ್ಲದಿದ್ದರೇ ರಾಜ್ಯ ಸರ್ಕಾರವೇ ಇದರ ಹಿಂದಿದೆ ಅಂತ ಸಾಭೀತಾಗಲಿದೆ. ಮೊದಲೇ ತನಿಖೆ ಮಾಡಿದರೆ ಒಂದು ದಿನದಲ್ಲಿ ಇದರ ಬಗ್ಗೆ ಗೊತ್ತಾಗುತ್ತಿತ್ತು. ಪೊಲೀಸರು ಮೂಳೆ ಸಿಕ್ಕಿತಾ, ಬುರುಡೆ ಸಿಕ್ಕಿತಾ ಅಂತ ಅಷ್ಟಕ್ಕೇ ಸೀಮಿತ ಆಯಿತು. ಈಗ ಒಬ್ಬೊಬ್ಬರೇ ಸತ್ಯ ಒಪ್ಪಿಕೊಳ್ಳುತ್ತಿದ್ದಾರೆ. ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಲವ್ ಜಿಹಾದ್ ರೀತಿಯಲ್ಲಿ, ಮತಾಂತರ ಜಿಹಾದ್ ಇದರಲ್ಲಿ ನಡೆಯುತ್ತಿರುವ ಶಂಕೆ ಇದೆ ಎಂದು ಆರ್ ಅಶೋಕ್ ಅವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ