/newsfirstlive-kannada/media/media_files/2025/08/26/sameer_md-1-2025-08-26-08-36-26.jpg)
ವಿವಾದಿತ ಯೂಟ್ಯೂಬರ್ ಸಮೀರ್ಗೆ 2ನೇ ದಿನವು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ 9 ಗಂಟೆಗಳ ಕಾಲ ಡ್ರಿಲ್ ಮಾಡಿ, ಆದಾಯದ ಮೂಲವನ್ನು ಕೆದಕಿದ್ದಾರೆ.
ದೂತ ಹೆಸರಿನ ಯೂಟ್ಯೂಬ್ ಚಾನಲ್ ಇಟ್ಟುಕೊಂಡು, ಈ ಧೂರ್ತ ಸಮೀರ್ ಆಡಿದ ನವರಂಗಿ ಆಟಗಳು ಒಂದೊಂದಲ್ಲ. ಸಾಕ್ಷಿ ತಾನೇ ಕೇಳ್ತಾ ಇದ್ರಿ, ಸಾಕ್ಷಿ ತಾನೇ ಬೇಕಿತ್ತು ನಿಮ್ಗೆಲ್ಲ, ಈಗ ಜೀವಂತ ಮುಂದೆ ಇದೆ ಎಂದು ಬುರುಡೆ ದಾಸಯ್ಯ ಅಲ್ಲ ಚಿನ್ನಯ್ಯ ಎಂಬಾತ ರಂಗ ಪ್ರವೇಶ ಮಾಡಿಸಿದ್ದ. ಈತನ ಸ್ಕ್ರಿಪ್ಟು, ಡೈಲಾಗ್ಗೆ ಪತ್ತೆದಾರಿ ಕಾದಂಬರಿಕಾರರೂ ಕೂಡ ನಾಚಬೇಕು. ಆ ರೀತಿ ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಬ್ಯಾಕ್ ಟು ಬ್ಯಾಕ್ ವಿಡಿಯೋ ಹಾಕಿ ಶೇಕ್ ಮಾಡಿದ್ದ ಧೂರ್ತ ಸಮೀರನಿಗೆ ತಾನು ಮಾಡಿದ ಎಐ ವಿಡಿಯೋಗಳೇ ಬೇತಾಳಗಳಂತೆ ಬೆನ್ನತ್ತಿವೆ.
ವಾಯ್ಸ್ ಸ್ಯಾಂಪಲ್, ಆದಾಯ ಮೂಲ, ಬ್ಯಾಂಕ್ ಖಾತೆ ಮಾಹಿತಿ ಸಂಗ್ರಹ
ವಿವಾದಿತ ಯೂಟ್ಯೂಬರ್ ಸಮೀರ್ನನ್ನು ಬೆಳ್ತಂಗಡಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಧರ್ಮಸ್ಥಳ ಬಗೆಗಿನ ಎಐ ವಿಡಿಯೋ ಪ್ರಕರಣ, ಬೆನಕ ಆಸ್ಪತ್ರೆ ಬಳಿ ಗಲಾಟೆ ಮತ್ತು ವರದಿಗಾರನ ಮೇಲೆ ಹಲ್ಲೆ.. ಹೀಗೆ ಮೂರು ಪ್ರಕರಣಗಳಲ್ಲಿ 2ನೇ ದಿನ ಬರೋಬ್ಬರಿ 9 ಗಂಟೆಗಳ ಕಾಲ ಸಮೀರ್ನನ್ನು ಇನ್ಸ್ಪೆಕ್ಟರ್ ಸುಬ್ಬಾಪುರ್ ಮಠ್ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಎಐ ವಿಡಿಯೋ ಎಡಿಟಿಂಗ್, ಸಾಫ್ಟ್‌ವೇರ್ ಬಳಕೆ ಬಗ್ಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿ ನೀರಿಳಿಸಿದ್ದಾರೆ.
ಇಂದು ಲ್ಯಾಪ್‌ಟಾಪ್ ಜೊತೆ ವಿಚಾರಣೆಗೆ ಹಾಜರಾಗಲು ಸೂಚನೆ
2ನೇ ದಿನ ಸುಮಾರು 9 ಗಂಟೆಗಳ ಕಾಲ ಸಮೀರ್ನ ವಿಚಾರಣೆ ನಡೆಸಲಾಗಿದ್ದು, ವಾಯ್ಸ್ ಸ್ಯಾಂಪಲ್, ಆದಾಯದ ಮೂಲ, ಬ್ಯಾಂಕ್ ಅಕೌಂಟ್ಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಇವತ್ತೂ ಕೂಡ ಮತ್ತೆ ವಿಚಾರಣೆಗೆ ಬರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದು, ಲ್ಯಾಪ್‌ಟಾಪ್ ಜೊತೆ ಹಾಜರಾಗಲು ತಿಳಿಸಿದ್ದಾರೆ.
ಧರ್ಮಸ್ಥಳದ ಬೆಂಬಲಕ್ಕೆ ನಿಂತವರಿಗೆ ಧರ್ಮಾಧಿಕಾರಿ ಧನ್ಯವಾದ
ಧರ್ಮಸ್ಥಳ ಕ್ಷೇತ್ರದ ಬಗ್ಗೆ ಇತ್ತೀಚಿನ ಬೆಳವಣಿಗಳಿಗೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಬೇಸರ ವ್ಯಕ್ತಪಡಿಸಿದ್ದು, ಸಮಯ ಬಂದಾಗ ಮಾತನಾಡ್ತೀನಿ ಎಂದಿದ್ದಾರೆ. ಬುರುಡೆ ಗ್ಯಾಂಗ್ನ ಮುಖವಾಡ ಬಯಲಾದ ಬಳಿಕ ಕ್ಷೇತ್ರದ ಮೇಲೆ ಭಕ್ತರಿಗಿರುವ ಗೌರವ ಜಾಸ್ತಿಯಾಗಿದೆ. ಮಂಜುನಾಥ ಸ್ವಾಮಿಯೂ ನಿಮಗೆ ಆಶೀರ್ವಾದ ಮಾಡಲಿ ಎಂದು ಧರ್ಮಸ್ಥಳದ ಪರ ನಿಂತ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.
ಇದನ್ನೂ ಓದಿ:ಧರ್ಮಸ್ಥಳ; ಮಾಸ್ಕ್ಮ್ಯಾನ್ ಚಿನ್ನಯ್ಯನ 2ನೇ ಹೆಂಡತಿ ಮಲ್ಲಿಕಾ ಶಾಕಿಂಗ್ ಹೇಳಿಕೆ
ಇನ್ನು ಧರ್ಮಸ್ಥಳದ ಬಗ್ಗೆ ಅಪಪ್ರಚಾರಕ್ಕೆ ದೊಡ್ಡ ಷಡ್ಯಂತ್ರ ನಡೆದಿದ್ದು, ಇದಕ್ಕೆ ವಿದೇಶದಿಂದ ಫಂಡಿಂಗ್ ಆಗಿದೆ. ಈ ಬಗ್ಗೆ ಎನ್ಐಎ ತನಿಖೆ ಆಗ್ಬೇಕೆಂದು ಬಿಜೆಪಿ ಆಗ್ರಹಿಸಿದೆ. ಗೃಹಸಚಿವರು ಎನ್ಐಎ ತನಿಖೆಯ ಆಗತ್ಯತೆ ಇಲ್ಲ ಅಂದ್ರೆ, ಸಚಿವ ಸತೀಶ್ ಜಾರಕಿಹೊಳಿ, ಈ ಕೇಸನ್ನು ಎನ್‌ಐಎಗೆ ವಹಿಸಿದ್ರೆ ತಪ್ಪಲ್ಲ ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಯೂಟ್ಯೂಬರ್ ಮಹಮ್ಮದ್ ಸಮೀರ್ಗೆ ಪೊಲೀಸರು ಫುಲ್ ಡ್ರಿಲ್ ಮಾಡಿದ್ದಾರೆ. ಆದಾಯ ಮೂಲವನ್ನು ಕೆದಕಿರುವ ಎಸ್ಐಟಿ, ಇವತ್ತು ಕೂಡ ಸಮೀರ್ನನ್ನು ವಿಚಾರಣೆಗೆ ಒಳಪಡಿಸಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ