/newsfirstlive-kannada/media/media_files/2025/09/02/dharmasthala-2025-09-02-08-09-02.jpg)
ಧರ್ಮಸ್ಥಳದಲ್ಲಿ ಜೋರು ಮಳೆ, ಆ ಮಳೆಯಲ್ಲೇ ಹೋರಾಟ, ಇನ್ನೊಂದ್ಕಡೆ ತನಿಖೆ. ಎರಡೂ ಬಿರುಸಿನ ದಾಟಿಯಲ್ಲೇ ನಡೆದಿವೆ. ಇಂಟ್ರಸ್ಟಿಂಗ್ ಅಂದ್ರೆ, ಆರು ತಿಂಗಳ ಹಿಂದೆ ಮಾಸ್ಕ್ಮ್ಯಾನ್ ಚೆನ್ನ ತಂಗಿದ್ದ ಹಳ್ಳಿಮನೆ ರೆಸಾರ್ಟ್ಗೂ ಎಂಟ್ರಿಕೊಟ್ಟಿದೆ. ಈ ಪ್ರಕರಣಕ್ಕೂ ಹಳ್ಳಿಮನೆ ರೆಸಾರ್ಟ್ಗೂ ಸಣ್ಣ ಲಿಂಕ್ ಇದ್ದು, ಎಸ್ಐಟಿ ಶೋಧಕ್ಕಿಳಿದಿತ್ತು.
ತಲೆಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ಚುರುಕುಗೊಂಡಿದೆ. ಬುರುಡೆ ಹಿಡಿದುಕೊಂಡು ಕಥೆ ಕಟ್ಟಿದ್ದ ಮಾಸ್ಕ್ಮ್ಯಾನ್, ಷಡ್ಯಂತ್ರದ ತಂಡಕ್ಕೆ ಮಂಕುಬೂದಿ ಎರಚಿದ್ದಾನೆ. ದೂರುದಾರ ಚೆನ್ನನನ್ನ ವಶಕ್ಕೆ ಪಡೆದ ಎಸ್‌ಐಟಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸ್ತಿದ್ದಾರೆ. ತನಿಖೆಯಲ್ಲಿ ಇಡೀ ಕಥನ ಬಿಚ್ಚಿಟ್ಟ ಚೆನ್ನ, ಇದ್ದು-ಬಂದ ಜಾಗಗಳಲ್ಲಿ SIT ಮಹಜರಿಗೆ ಸಹಕರಿಸ್ತಿದ್ದಾನೆ.
ಒಂದು ದಿನ ಇದ್ದು ಹೋದ ರೆಸಾರ್ಟ್ನಲ್ಲಿ ಶೋಧ
ಅಂದ್ಹಾಗೆ ಬುರುಡೆ ಗ್ಯಾಂಗ್ನ ಮತ್ತಷ್ಟು ಕರಾಳ ಮುಖ ಬಟಾಬಯಲಾಗ್ತಿದೆ. ಮಹಜರು ವೇಳೆ ಆ ಜಾಗಗಳ ಬ್ಲೂ ಪ್ರಿಂಟ್ ಪತ್ತೆ ಆಗಿದೆ. ಗುಂಡಿ ತೋರಿಸುವ ಬಗ್ಗೆ 1 ವರ್ಷದಿಂದ ತಾಲೀಮು ನಡೆದಿದ್ದು ಗೊತ್ತಾಗಿದೆ. ಚಿನ್ನಯ್ಯನ 2ನೇ ಪತ್ನಿಗೂ ಎಟ್ಐಟಿ, ತನಿಖೆಯ ತಾಂಬೂಲ ನೀಡಿದೆ. ಇತ್ತ ಉಜಿರೆಯ ಹಳ್ಳಿಮನೆ ರೆಸಾರ್ಟ್ನಲ್ಲಿ SIT ಮಹಜರು ನಡೆಸಿದೆ.
ಹಳ್ಳಿಮನೆಯಲ್ಲಿ ಶೋಧ!
- 6 ತಿಂಗಳ ಹಿಂದೆ ಹಳ್ಳಿಮನೆ ರೆಸಾರ್ಟ್ನಲ್ಲಿ ಉಳಿದಿದ್ದ ಚಿನ್ನಯ್ಯ
- ಗಿರೀಶ್ ಮಟ್ಟಣ್ಣನವರ್, ವಿಠಲ ಗೌಡ, ಚೆನ್ನನ ಜೊತೆ ಮೀಟಿಂಗ್
- ರೆಸಾರ್ಟ್ನಲ್ಲಿ ಸಭೆ ಮಾಡಿರುವ ಬಗ್ಗೆ ಮಾಹಿತಿ ನೀಡಿದ ಚಿನ್ನಯ್ಯ
- ಬೆಳ್ತಂಗಡಿಯ ಎಸ್ಐಟಿಯಿಂದ ಹಳ್ಳಿಮನೆ ರೆಸಾರ್ಟ್ನಲ್ಲಿ ಶೋಧ
- ಮಹಜರು ಮುಗಿಸಿ ಬೆಳ್ತಂಗಡಿಗೆ ಚಿನ್ನಯ್ಯನನ್ನು ಕರೆದೊಯ್ದ SIT
ಇದನ್ನೂ ಓದಿ: ಮಿಲೇನಿಯಮ್ ಸಿಟಿಯಲ್ಲಿ 20 Km ಟ್ರಾಫಿಕ್.. ಸವಾರರು, ಚಾಲಕರು, ಜನರು ಸುಸ್ತೋ ಸುಸ್ತು..!
ಈ ನಡುವೆ ನಿನ್ನೆ ಬಿಜೆಪಿವತಿಯಿಂದ ಧರ್ಮಸ್ಥಳ ಚಲೋ ಸಮಾವೇಶ ನಡೆದಿದೆ. ಈ ಸಭೆ ಮುಗಿಯುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೌಜನ್ಯ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಸೌಜನ್ಯ ತಾಯಿ ಜೊತೆ ಸೌಜನ್ಯದ ಮಾತು, ನೋವಿಗೆ ಸ್ಪಂದಿಸುವ ಭರವಸೆಯ ಅಭಯ ನೀಡಿದ್ದಾರೆ. ನ್ಯಾಯಾಂಗ ಹೋರಾಟಕ್ಕೆ ಹೆಗಲು ಕೊಡುವ ವಾಗ್ದಾನ ಕೊಟ್ಟಿದ್ದಾರೆ.
ಧರ್ಮದ ಉಳಿವಿಗಾಗಿ ಕೇಸರಿ ಪಡೆ ಧರ್ಮಸ್ಥಳ ಚಲೋ ನಡೆಸಿದ ವಿಜಯೇಂದ್ರ, ಇನ್ನೊಂದ್ಕಡೆ ಸೌಜನ್ಯ ಕುಟುಂಬಕ್ಕೂ ಸಾಂತ್ವನ ಹೇಳಿದ್ದಾರೆ. ಸುರಿಯೋ ಮಳೆಯಲ್ಲೂ ಒಂದ್ಕಡೆ ತನಿಖೆ ನಡೀತಿದ್ರೆ, ಇನ್ನೊಂದ್ಕಡೆ ಬಿಜೆಪಿ ನಾಯಕರ ಪಾದಯಾತ್ರೆ ಸಮಾಪ್ತವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ