/newsfirstlive-kannada/media/media_files/2025/08/25/chinnayya-2025-08-25-08-32-57.jpg)
ಧರ್ಮಸ್ಥಳದ ವಿರುದ್ಧ ಅಪಪ್ರಚಾರಕ್ಕೆ ಬುರುಡೆ ಗ್ಯಾಂಗ್ ಕುತಂತ್ರ ರೂಪಿಸಿದ್ದು ಒಂದೊಂದಾಗೇ ಬಯಲಿಗೆ ಬರ್ತಿವೆ. ದಿನಕ್ಕೊಂದು ಹೇಳಿಕೆ ನೀಡ್ತಿದ್ದ ಸುಜಾತ್ ಭಟ್ರನ್ನೇ ಮೀರಿಸುವಂತಿದೆ ಬರುಡೆ ದಾಸಯ್ಯ ಚಿನ್ನಯ್ಯನ ಕಹಾನಿ. ಒಂದೊಂದು ಸಂದರ್ಶನದಲ್ಲೂ ಸುಳ್ಳಿನ ಮೇಲೆ ಸುಳ್ಳು ಹೇಳಿರೋದು ಬಯಲಾಗಿದ್ದು, ಅದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ.
ಒಂದೂವರೆ ತಿಂಗಳಿನಿಂದ ಧರ್ಮಸ್ಥಳದ ಮೇಲೆ ಆವರಿಸಿಕೊಂಡಿದ್ದ ಆರೋಪದ ಕಾರ್ಮೋಡ ತಾನಾಗೇ ಕರಗ್ತಿದೆ. ಮಂಜುನಾಥನ ಭಕ್ತರ ಶಿವತಾಂಡವ ಶುರುವಾಗ್ತಿದ್ದಂತೆ, ಬುರುಡೆ ಗ್ಯಾಂಗ್ನ ತಾಂಡವ ಬಂದ್ ಆಗಿದೆ. ನ್ಯಾಯಾಧೀಶರ ಮುಂದೆ ಬಿಎನ್ಎಸ್ 183 ಹೇಳಿಕೆ ನೀಡಿದ್ದು, ಕೇವಲ ನಾನು ಪಾತ್ರಧಾರಿ, ಸೂತ್ರಧಾರಿಗಳು ಆಡಿಸಿದಂತೆ ಬುರುಡೆ ಆಟ ಆಡಿದೆ ಎಂದು ಧರ್ಮಸ್ಥಳ ವಿರುದ್ಧದ ಎಣೆದಿದ್ದ ಷಡ್ಯಂತ್ರವನ್ನು ಬಯಲು ಮಾಡಿದ್ದ. ಆದ್ರೀಗ ಈ ಬುರುಡೆ ಗ್ಯಾಂಗ್ ಎಷ್ಟೆಲ್ಲ ಕುತಂತ್ರವನ್ನು ಎಣೆದಿತ್ತು ಅನ್ನೋದಕ್ಕೆ ಮತ್ತೊಂದು ಸಾಕ್ಷ್ಯ ಲಭ್ಯವಾಗಿದೆ.
ತನಿಖೆ ಆರಂಭಕ್ಕೂ ಮೊದ್ಲೇ ಮಾಸ್ಕ್ ಮ್ಯಾನ್ ಸಂದರ್ಶನ
ಬುರುಡೆ ಬಿಟ್ಟ ಚಿನ್ನಯ್ಯನನ್ನು ಎಸ್ಐಟಿ 10 ದಿನಗಳ ಕಸ್ಟಡಿಗೆ ಪಡೆದು, ಬೆಂಡಿತ್ತುತ್ತಿದ್ದು, ಧರ್ಮಸ್ಥಳದ ವಿರುದ್ಧ ಅಪಪ್ರಚಾರಕ್ಕೆ ಹೆಣೆದಿದ್ದ ಒಂದೊಂದೇ ಕುತಂತ್ರವನ್ನ ಬಯಲು ಮಾಡ್ತಿದೆ. ಆದ್ರೆ ಬುರುಡೆ ರಹಸ್ಯದ ತನಿಖೆಗೂ ಮೊದ್ಲೇ ಮಾಸ್ಕ್ ಮ್ಯಾನ್ ಚೆನ್ನಯ್ಯ ವಿಥೌಟ್ ಮಾಸ್ಕ್ ಸಂದರ್ಶನ ನೀಡಿದ್ದು, ಸುಳ್ಳಿನ ಮೇಲೆ ಸುಳ್ಳು ಪುಂಗಿದ್ದಾನೆ. ಯಾಕಂದ್ರೆ ಈತ ದೂರಿನಲ್ಲಿ ಹೇಳಿರೋದೇ ಒಂದು, ಸಂದರ್ಶನದಲ್ಲಿ ಮಾತಾಡಿರೋದೇ ಒಂದು. ಇವ್ನು ಬಿಟ್ಟಿದ್ದು ಬರೀ ಬುರುಡೆಯಲ್ಲ, ಬ್ರಹ್ಮಾಂಡ ಬುರುಡೆ ಅನ್ನೋ ಅನುಮಾನ ಮೂಡುತ್ತೆ..
ಬುರುಡೆ ಸುಳ್ಳು 1: ಶವಗಳ ಹೂತ್ತಿದ್ದು ಹೇಗೆ?
ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಆವತ್ತು ಧರ್ಮಸ್ಥಳದ ದೇವಾಲಯದ ಮೇಲ್ವಿಚಾರಕರ ಸೂಚನೆಯಂತೆ ಹೂತಿದ್ದೆ ಎಂದು ಉಲ್ಲೇಖಿಸಿದ್ದಾನೆ. ಆದ್ರೆ ಯೂಟ್ಯೂಬ್ ಚಾನಲ್ಗೆ ನೀಡಿರುವ ಸಂದರ್ಶನದಲ್ಲಿ ಪೊಲೀಸರ ಸಮ್ಮುಖದಲ್ಲಿ ಹೂತಿದ್ದೆ ಎಂದಿದ್ದಾನೆ.
ಬುರುಡೆ ಸುಳ್ಳು 2: ಪಾಪಪ್ರಜ್ಞೆ ಕಾಡಿದ್ದೇಗೆ?
ಪೊಲೀಸರಿಗೆ ನೀಡಿರುವ ದೂರಿನಲ್ಲಿ ದಶಕದಿಂದ ಕಾಡ್ತಿದ್ದ ಪಾಪಪ್ರಜ್ಞೆಯಿಂದ ಸತ್ಯ ಬಹಿರಂಗ ಪಡಿಸಲು ಬಂದೆ ಎಂದಿದ್ದಾನೆ. ಆದ್ರೆ ಸಂದರ್ಶನದಲ್ಲಿ ಚೆನ್ನಗೆ ಜ್ಞಾನೋದಯ ಆಗಿದ್ದು ಸೌಜನ್ಯ ಕೇಸಿಂದ ಅಂತೆ.
ಬುರುಡೆ ಸುಳ್ಳು 3: ದೂರಿನಲ್ಲಿ ನೂರಾರು.. ಸಂದರ್ಶನದಲ್ಲಿ ಸಾವಿರಾರು ಹೆಣ
ಬುರುಡೆ ದಾಸಯ್ಯ.. ಚಿನ್ನಯ್ಯನ ಮತ್ತೊಂದು ಸುಳ್ಳಿನ ಮಾತಂದ್ರೆ, ಅದು ಹೆಣಗಳ ಬಗ್ಗೆ, ಯಾಕಂದ್ರೆ. ಈತನೇ ನೀಡಿರುವ ದೂರಿನಲ್ಲಿ ನೂರಾರು ಶವಗಳನ್ನು ಹೂತಿದ್ದಾಗಿ ಉಲ್ಲೇಖಿಸಿದ್ದಾನೆ. ಆದ್ರೆ, ಸಂದರ್ಶನದಲ್ಲಿ ಸಾವಿರದೈನೂರು ಹೆಣ ಹೂತಿದ್ದೇನೆ ಎಂದಿದ್ದಾನೆ.
ಬುರುಡೆ ಸುಳ್ಳು 4: ಧರ್ಮಸ್ಥಳದವ್ರೇ ಓಡಿಸಿದ್ರು
ದೂರಿನಲ್ಲಿ ಧರ್ಮಸ್ಥಳ ಬಿಟ್ಟು ರಾತ್ರೋ ರಾತ್ರಿ ಓಡಿ ಹೋಗಿದ್ದೆ ಅಂದಿರೋ ಚಿನ್ನಯ್ಯ. ವಿಥೌಟ್ ಮಾಸ್ಕ್ ಸಂದರ್ಶನದಲ್ಲಿ ಧರ್ಮಸ್ಥಳದವರೇ ಓಡಿಸಿದ್ರು ಎಂದು ಹೇಳುವ ಮೂಲಕ ಪದೇ ಪದೇ ಹೇಳಿಕೆ ಬದಲಾವಣೆ ಮಾಡಿರೋದು ಗೊತ್ತಾಗ್ತಿದೆ.
ಇದನ್ನೂ ಓದಿ:ಧರ್ಮಸ್ಥಳ ಕೇಸ್; ಸಮೀರ್ MD, ಚಿನ್ನಯ್ಯ ವಿಚಾರಣೆ.. ಮಾಸ್ಕ್ಮ್ಯಾನ್ ಮೇಲೆ ಹದ್ದಿನ ಕಣ್ಣು, ಯಾಕೆ ಗೊತ್ತಾ?
ಎಸ್ಐಟಿ ಚಿನ್ನಯ್ಯನನ್ನು ಬಂಧಿಸೋದಕ್ಕೂ ಮೊದ್ಲು ರಾಷ್ಟ್ರೀಯ ಸುದ್ದಿವಾಹಿನಿಗೆ ಮಾಸ್ಕ್ ಧರಿಸಿ ಸಂದರ್ಶನ ಕೊಟ್ಟಿದ್ದ ಚಿನ್ನಯ್ಯ, ಹೂಳುವಾಗ ಜೊತೆಗಿರ್ತಿದ್ದ 4-5 ಜನರ ಹೆಸರೇಳಿದ್ದ. ಆದ್ರೆ ಈ ಸಂದರ್ಶನದಲ್ಲಿ ತನಗಲ್ಲದೆ ಯಾರಿಗೂ ಹೂತ ಜಾಗ ಗೊತ್ತಿಲ್ಲ ಎಂದಿದ್ದಾನೆ.
ಅನನ್ಯ ಭಟ್ಗಿಂತಲೂ ಈ ಬುರುಡೆ ಕಥೆ ಮತ್ತಷ್ಟು ರೋಚಕವಾಗಿದೆ. ಒಬ್ಬೊಬ್ಬರ ಬಳಿ ಒಂದೊಂದು ಹೇಳಿಕೆ ನೀಡಿ ಸುಳ್ಳು ಕತೆ ಕಟ್ಟಿದ್ದಾನೆ. ಈತನ ಸಂದರ್ಶನ ನಡೆಸಿದವರೇ, ಆತ ಹೇಳಿದ್ದು ನಿಜ ಇರಬಹುದಾ ಅಥವಾ ಸುಳ್ಳಾ ಅನ್ನೋ ಗೊಂದಲ ಅವರಲ್ಲೂ ಕೂಡ ಕಾಡಿದೆ. ಸದ್ಯ ಬುರುಡೆ ಮ್ಯಾನ್ ಚೆನ್ನ ಎಸ್ಐಟಿ ಕೈಯಲ್ಲಿ ಲಾಕ್ ಆಗಿದ್ದು, ಚೆನ್ನಯ್ಯನ ಮೊಬೈಲ್ ಸಿಕ್ಕಿದ್ರೆ, ಮತ್ತಷ್ಟು ರಹಸ್ಯಗಳು ಹೊರಬರೋದ್ರಲ್ಲಿ ಅನುಮಾನವೇ ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ