/newsfirstlive-kannada/media/media_files/2025/08/25/sameer_chinnayya-2025-08-25-08-09-41.jpg)
ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಎಸಗಲಾಗಿದೆ ಎನ್ನಲಾದ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಬುರುಡೆ ಚಿನ್ನಯ್ಯನನ್ನು ವಶಕ್ಕೆ ಪಡೆದಿರುವ ಎಸ್ಐಟಿ ಎಲ್ಲ ಒಂದೊಂದು ವಿಷ್ಯವನ್ನು ಬಾಯ್ಬಿಡಿಸುತ್ತಿದೆ. ಸದ್ಯ ಚಿನ್ನಯ್ಯನ ಎಸ್ಐಟಿಯ ಬಿಗಿ ಭದ್ರತೆಯಲ್ಲಿದ್ದು 24 ಗಂಟೆಯೂ ಆತನ ಮೇಲೆ ಕಣ್ಣಿಟ್ಟಿದೆ.
24 ಗಂಟೆ ದೂರುದಾರನ ವಾಚ್ ಮಾಡುತ್ತಿರುವ SIT ಅಧಿಕಾರಿಗಳು
ಒಂದೂವರೆ ತಿಂಗಳಿನಿಂದ ಧರ್ಮಸ್ಥಳದ ಮೇಲೆ ಆವರಿಸಿಕೊಂಡಿದ್ದ ಆರೋಪದ ಕಾರ್ಮೋಡ ತಾನಾಗೇ ಕರಗ್ತಿದೆ. ಜುಲೈ 19ರಂದು ರಾಜ್ಯ ಸರ್ಕಾರ ರಚಿಸಿದ ಪ್ರಣವ್ ಮೊಹಾಂತಿ ಸಾರಥ್ಯದ ವಿಶೇಷ ತನಿಖಾ ತಂಡ ಶಿಸ್ತುಬದ್ಧವಾಗಿ ನಡೆಸಿದ ತನಿಖೆಯಿಂದ ಒಂದೊಂದೇ ಸತ್ಯಗಳು ಹೊರಬರ್ತಿವೆ. ಇಡೀ ಪ್ರಕರಣದ ಹಿಂದಿನ ಷಡ್ಯಂತ್ರಗಳು, ಪಿತೂರಿಗಳು ಬೆಳಕಿಗೆ ಬಂದು ಗ್ರಹಣ ಮುಕ್ತಿ ಆಗ್ತಿದೆ.
10 ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ತೀವ್ರಗೊಳಿಸಿರುವ ಎಸ್ಐಟಿ, ಆರೋಪಿ ಚಿನ್ನಯ್ಯ ಹೇಳಿದ ಎಲ್ಲರಿಗೂ ಆರಂಭಿಕ ಹಂತದಲ್ಲಿ ನೋಟಿಸ್ ನೀಡಲು ಪ್ಲಾನ್ ಮಾಡಿದೆ. ಈ ಹಿನ್ನಲೆ ಇವತ್ತು ಚೆನ್ನನಿಂದ ಬಿಎನ್ಎಸ್ 183 ಹೇಳಿಕೆ ದಾಖಲಿಸಲು ಸಜ್ಜಾಗಿದ್ದು, ಆರೋಪಿ ಚೆನ್ನಯ್ಯನ ಮೇಲೆ 24 ಗಂಟೆಗಳ ಕಾಲ ಹದ್ದಿನ ಕಣ್ಣಿಟ್ಟಿದ್ದಾರೆ.
- ಆರೋಪಿ ಚಿನ್ನಯ್ಯನನ್ನು ಬಿಗಿ ಭದ್ರತೆಯಲ್ಲಿ ಇರಿಸಿರುವ ಎಸ್ಐಟಿ
- ಕೇವಲ ಪ್ಯಾಂಟ್ ಮತ್ತು ಶರ್ಟ್ ಧರಿಸಲು ಮಾತ್ರ SIT ಅವಕಾಶ
- ಈ ಹಿಂದಿನಿಂದಲೂ ಪಂಚೆ ಮತ್ತು ಅಂಗಿ ಧರಿಸುತ್ತಿದ್ದ ದೂರುದಾರ
- ಆತ ದೇಹದಲ್ಲಿ ಕಟ್ಟಿಕೊಂಡಿದ್ದ ನೂಲುಗಳನ್ನು ತೆಗೆಸಿರುವ ಎಸ್ಐಟಿ
- ದೂರುದಾರ ಅತ್ಮಹತ್ಯೆಗೆ ಶರಾಣಾಗುವ ಶಂಕೆ ಹಿನ್ನೆಲೆ ಮುನ್ನೆಚ್ಚರಿಕೆ
ಇದನ್ನೂ ಓದಿ: ಹೆಂಡತಿಗೆ ಬೆಂಕಿ ಹಚ್ಚಿ ಜೀವ ತೆಗೆದ ಕೇಸ್; ವರದಕ್ಷಿಣೆಯಾಗಿ ಏನೇನು ಕೊಟ್ಟಿದ್ದರು ಗೊತ್ತಾ?
ಸಮೀರ್ನನ್ನು ಮತ್ತೆ ವಿಚಾರಣೆಗೆ ಕರೆದಿರುವ ತನಿಖಾಧಿಕಾರಿಗಳು
ಒಂದೆಡೆ ಬುರುಡೆ ದಾಸಯ್ಯನಿಗೆ ಎಸ್ಐಟಿ ಬೆಂಡೆತ್ತುತ್ತಿದ್ದರೆ, ಮತ್ತೊಂದೆಡೆ ಬೆಳ್ತಂಗಡಿ ಪೊಲೀಸರು ಧೂತ ಅಲ್ಲ ಅಲ್ಲ ದೂರ್ತ ಸಮೀರನಿಗೆ ಭೂತ ಬಿಡಿಸಿದ್ದಾರೆ. ಮೊದಲ ದಿನ ಯೂಟ್ಯೂಬ್ ಚಾನೆಲ್, AI ವಿಡಿಯೋಗಳ ಬಗ್ಗೆ ತನಿಖಾಧಿಕಾರಿ ನಾಗೇಶ್ ಕದ್ರಿ ಪ್ರಶ್ನೆ ಮಾಡಿದ್ರು. ಇವತ್ತು ಕೂಡ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.
ವಿಡಿಯೋ ಎಡಿಟಿಂಗ್ ಸಾಫ್ಟ್ವೇರ್ ಬಳಸಿದ ಕಂಪ್ಯೂಟರ್ ಮತ್ತು ಮೊಬೈಲ್ ವಶಕ್ಕೆ ನೀಡುವಂತೆ ಸೂಚಿಸಿದ್ದಾರೆ. ಇವತ್ತು ಕೂಡ ಸಮೀರ್ನನ್ನು ಮತ್ತೆ ವಿಚಾರಣೆಗೆ ಒಳಪಡಿಸಲಿದ್ದಾರೆ. ಬುರುಡೆ ಮಾತುಗಳ ಮೂಲಕ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲು ಕುತಂತ್ರ ಎಣೆದವರಿಗೆ ಇದೀಗ ಎಸ್ಐಟಿ ತನಿಖೆ ಮೂಲಕ ನಡುಕ ಶುರುವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ