/newsfirstlive-kannada/media/media_files/2025/09/27/cm_siddu_parameshwar-2025-09-27-08-40-38.jpg)
ಕಲರ್ ಕಲರ್ ಕಾಗೆ ಹಾರಿಸಿದ್ದ ಬುರುಡೆ ಗ್ಯಾಂಗ್​ ಕಳ್ಳಾಟ ಬಯಲಾಗಿದ್ದು, ಸರ್ಕಾರವನ್ನೇ ಯಾಮಾರಿಸಿತಾ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಶುರುವಾಗಿದೆ. ಇದರಿಂದ ಮುಜಗರಕ್ಕೊಳಗಾದ ಸಿಎಂ ಸಿದ್ದರಾಮಯ್ಯ ಅವರು, ಗೃಹಸಚಿವ ಡಾ.ಜಿ ಪರಮೇಶ್ವರ್​ರನ್ನು ಕರೆಸಿಕೊಂಡು ಅಸಮಾಧಾನ ಹೊರ ಹಾಕಿದ್ದಾರೆ.
ಧರ್ಮಸ್ಥಳ ಬುರುಡೆ ಕೇಸ್‌ನಲ್ಲಿ ಸರ್ಕಾರಕ್ಕೆ ಮುಜುಗರ
ಧರ್ಮಸ್ಥಳದ ವಿರುದ್ಧ ಬುರುಡೆ ಗ್ಯಾಂಗ್ ಷಡ್ಯಂತ್ರ ರೂಪಿಸಿ ಕಲರ್ ಕಲರ್ ಕಾಗೆ ಹಾರಿಸಿ ಆಟ ಆಡಿಸಿದ್ದ ಈ ಗ್ಯಾಂಗ್‌ನ ಅಸಲಿ ಸತ್ಯ ಬಯಲಾಗಿದೆ. ಸುಪ್ರೀಂಕೋರ್ಟ್‌ನಲ್ಲೂ ಬಿ ಗ್ಯಾಂಗ್ ಷಡ್ಯಂತ್ರ ಹೊರಬಿದ್ದ ಬೆನ್ನಲ್ಲೇ, ಇದು ರಾಜ್ಯದಲ್ಲೇ ಸಂಚಲನ ಸೃಷ್ಟಿಸಿದೆ. ಅಷ್ಟೇ ಅಲ್ಲ, ಸುಪ್ರೀಂಕೋರ್ಟ್‌ನಲ್ಲಿ ತಮಗಾಗಿದ್ದ ಮುಖಭಂಗ ಮುಚ್ಚಿಟ್ಟು ಬುರುಡೆ ಗ್ಯಾಂಗ್​ ಸರ್ಕಾರವನ್ನು ಯಾಮಾರಿಸಿದೆ ಎಂದು ಜನರು ಮಾತನಾಡಿಕೊಳ್ತಿದ್ದಾರೆ. ಇದು ಸರ್ಕಾರಕ್ಕೆ ಮುಜುಗರ ತರಿಸಿದ್ದು. ಇದರ ಬೆನ್ನಲ್ಲೇ ಅಲರ್ಟ್​ ಆದ ಸಿಎಂ ಸಿದ್ದರಾಮಯ್ಯ, ಗೃಹಸಚಿವರ ಮೇಲೆ ಅಸಮಾಧಾನಗೊಂಡಿದ್ದಾರೆ.
ಬುರುಡೆ ಗ್ಯಾಂಗ್​ನ ಮಾತು ನಂಬಿ ಎಸ್​ಐಟಿ ಎರಡು ತಿಂಗಳಿಂದ ತನಿಖೆಯನ್ನು ನಡೆಸ್ತಿದೆ. ಇಷ್ಟೆಲ್ಲ ತನಿಖೆ ನಡೆಸ್ತಿದ್ರೂ ಸುಪ್ರೀಂಕೋರ್ಟ್​ ಬುರುಡೆ ಗ್ಯಾಂಗ್​ಗೆ ತಪರಾಕಿ ಹಾಕಿದ್ದು, ಸರ್ಕಾರದ ಗಮನಕ್ಕೆ ಇರಲಿಲ್ವ ಅನ್ನೋದು ಪ್ರಶ್ನೆ. ಹೀಗಾಗಿ ಸರ್ಕಾರಕ್ಕೆ ಮುಜುಗರ ಆಗ್ತಿದ್ದಂತೆ, ಸಿಎಂ ಸಿದ್ದರಾಮಯ್ಯನವರು, ಗೃಹಸಚಿವರನ್ನು ಕರೆಸಿಕೊಂಡು ಅಸಮಾಧಾನ ಹೊರಹಾಕಿದ್ದಾರೆ.
ಪರಂ ಮೇಲೆ ಸಿಎಂ ಗರಂ!
- ಬುರುಡೆ ಗ್ಯಾಂಗ್ ಪಿಐಎಲ್ ವಜಾಗೊಳಿಸಿದ್ದ ಸುಪ್ರೀಂಕೋರ್ಟ್
- ಸುಪ್ರೀಂಕೋರ್ಟ್‌ನಿಂದ ಅರ್ಜಿ ವಜಾ ಬಳಿಕ ಎಸ್‌ಐಟಿ ರಚನೆ
- ಮಾಸ್ಕ್ ಮ್ಯಾನ್ ಚಿನ್ನಯ್ಯನ ಹೇಳಿಕೆ ಆಧರಿಸಿ ಎಸ್‌ಐಟಿ ರಚನೆ
- ಸುಪ್ರೀಂನಲ್ಲಿ ಅರ್ಜಿ ವಜಾ ಆದ ಬಗ್ಗೆ ನಿಮ್ಮ ಗಮನಕ್ಕೆ ಇರಲಿಲ್ವಾ?
- ಎಸ್‌ಐಟಿ ತನಿಖೆ ವೇಳೆಯೂ ಈ ಬಗ್ಗೆ ನಿಮಗೆ ಮಾಹಿತಿ ಇರಲಿಲ್ವಾ
- ಡಾ.ಪರಮೇಶ್ವರ್​ಗೆ ಸಾಲು ಸಾಲು ಪ್ರಶ್ನೆ ಮಾಡಿ ಸಿಎಂ ಅಸಮಾಧಾನ
ಇದಕ್ಕೂ ಮೊದಲು ಗೃಹಸಚಿವ ಡಾ.ಜಿ ಪರಮೇಶ್ವರ್ ಅವರು, ಎಸ್​ಐಟಿ ಮುಖ್ಯಸ್ಥ ಪ್ರಣವ್​ ಮೊಹಂತಿಗೆ ಒಂದು ಗಂಟೆಗೂ ಹೆಚ್ಚು ಕಾಲ ಕ್ಲಾಸ್​ ತೆಗೆದುಕೊಂಡರು.
ಮೊಹಂತಿಗೆ ಗೃಹ ಸಚಿವರು ಕ್ಲಾಸ್
- ಮಾಧ್ಯಮಗಳಲ್ಲಿ ಸುದ್ದಿಯಾಗಿದೆ ನಿಮ್ಮ ಗಮನಕ್ಕೆ ಬಂದಿರಲಿಲ್ವಾ?
- ಸುಪ್ರೀಂಕೋರ್ಟ್ ಆದೇಶ ಗೊತ್ತಿಲ್ಲದೆ ಇಷ್ಟು ದಿನ ತನಿಖೆ ಮಾಡಿದ್ರಾ?
- ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಮುಂದೆ ಏನು ಮಾಡಬೇಕು?
- ಇದೇ ವಿಚಾರವನ್ನ ವಿರೋಧ ಪಕ್ಷಗಳು ಅಸ್ತ್ರ ಮಾಡಿಕೊಳ್ಳಲಿವೆ
- ಎರಡು ತಿಂಗಳಿಂದ ಈ ಪ್ರಕರಣದ ಬಗ್ಗೆ ತನಿಖೆ ಮಾಡುತ್ತಿದ್ದೀರಿ
- ಈ ಬಗ್ಗೆ ಮಾಹಿತಿ ಸಂಗ್ರಹಿಸಬೇಕಿತ್ತು ಅಲ್ವ ಎಂದು ಪರಂ ಬೇಸರ
ಇದನ್ನೂ ಓದಿ: ತನ್ನ ಕ್ಲಾಸ್​ಮೇಟ್​ ತಾಯಿಯನ್ನ ಮದುವೆಯಾದ ವಿದ್ಯಾರ್ಥಿ.. ಈ ಇಬ್ಬರ ನಡುವೆ ಲವ್ ಹೇಗಾಯಿತು?
ಇನ್ನು ಚಿನ್ನಯ್ಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ಯಾಕೆ ವಜಾಗೊಳಿಸಿದೆ ಅನ್ನೋ ಬಗ್ಗೆ ಸುಪ್ರೀಂಕೋರ್ಟ್​ನ ಹಿರಿಯ ವಕೀಲ ಕೆ.ವಿ ಧನಂಜಯ ಸ್ಪಷ್ಟನೆ ನೀಡಿದ್ದಾರೆ. ಕೆ.ವಿ ಧನಂಜಯ್​ ಚಿನ್ನಯ್ಯ ಪರ ವಾದಿಸಿದ್ದರು. ದೂರುದಾರರು ತಡವಾಗಿ ಅರ್ಜಿ ಸಲ್ಲಿಸಿದ್ದಕ್ಕೆ ಮತ್ತು ಆರೋಪಗಳ ಅರ್ಹತೆಯನ್ನು ಪರಿಶೀಲಿಸದೆ ವಜಾಗೊಳಿಸಿರುತ್ತಿರುವಾಗಿ ಸುಪ್ರೀಂಕೋರ್ಟ್ ಹೇಳಿದೆ. ಸದ್ಯ ನಡೆಯುತ್ತಿರುವ ಎಸ್​ಐಟಿ ತನಿಖೆ ಮೇಲೆ ಸುಪ್ರೀಂಕೋರ್ಟ್ ಹೇಳಿಕೆ ಯಾವುದೇ ಪರಿಣಾಮ ಬೀರಲ್ಲ ಎಂದೂ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದ್ದಾರೆ.
ಬುರುಡೆ ಗ್ಯಾಂಗ್​ ಸರ್ಕಾರವನ್ನೇ ಯಾಮಾರಿಸಿದ್ದು, ಮಾತ್ರವಲ್ಲ,, ಕೋಟ್ಯಂತರ ಭಕ್ತರ ಭಾವನೆಗಳ ಜೊತೆಯೂ ಆಟವಾಡಿದೆ. ಹೀಗಾಗಿ ಈ ಪ್ರಕರಣದಲ್ಲಿ ಸರ್ಕಾರ ಮುಂದೆ ಏನು ಕ್ರಮಕೈಗೊಳ್ಳುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ