/newsfirstlive-kannada/media/media_files/2025/08/18/g_parameshwara-2025-08-18-20-19-06.jpg)
ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿರುವ ಅಸಹಜ ಸಾ*ವು ಪ್ರಕರಣದ ತನಿಖೆ ನಡೆಯುತ್ತಿದೆ. ಈ ಬಗ್ಗೆ ವಿಧಾನಸಭೆಯಲ್ಲಿ ಗಂಭೀರವಾದ ಮಾತುಕತೆಗಳು ನಡೆದಿದ್ದು ಸರ್ಕಾರ ಹಾಗೂ ವಿರೋಧ ಪಕ್ಷದ ನಡುವೆ ವಾಕ್ಸಮರವೇ ನಡೆಯುತ್ತಿದೆ. ಇದರ ನಡುವೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಯೂಟ್ಯೂಬರ್ಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಯಾರೇ ಯೂಟ್ಯೂಬರ್ಗಳಾದರೂ, ಯಾವುದೇ ಯೂಟ್ಯೂಬ್ ಆದರು ಧರ್ಮಸ್ಥಳ ಕ್ಷೇತ್ರ ಬಗ್ಗೆ ಅಪಪ್ರಚಾರ ಮಾಡಬಾರದು. ಒಂದು ವೇಳೆ ಧರ್ಮಸ್ಥಳ ಕ್ಷೇತ್ರದ ಕುರಿತು ಕೆಟ್ಟದಾಗಿ ಮಾತನಾಡಿರುವುದು, ಅಪಪ್ರಚಾರ ಮಾಡಿರುವುದು ಕಂಡು ಬಂದಲ್ಲಿ ಅಂತವರ ವಿರುದ್ಧ ಸರ್ಕಾರ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ. ಎಸ್ಐಟಿ ಅಧಿಕಾರಿಗಳ ತನಿಖೆ ಮಾಡುವಾಗಲೇ ಅಪಪ್ರಚಾರ ಮಾಡಿದರೆ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಬೇಕಾಗುತ್ತೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿಲ್ಸನ್ ಗಾರ್ಡನ್ ಸಿಲಿಂಡರ್ ಸ್ಫೋಟ ಪ್ರಕರಣ; ಆಸ್ಪತ್ರೆಯಲ್ಲಿ 8 ವರ್ಷದ ಕಯಲ್ ನಿಧನ
ವಿಧಾನಸಭೆ ಕಲಾಪದಲ್ಲಿ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್ಐಟಿ ಕಾರ್ಯ ಕುರಿತು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ನಿನ್ನೆ ಮಾತನಾಡಿದರು. ಅಲ್ಲಿ ಸಿಕ್ಕಂತಹ ಅಸ್ಥಿಪಂಜರ, ಮೂಳೆಗಳನ್ನು ಎಫ್ಎಸ್ಎಲ್ ಪರೀಕ್ಷೆಗೆ ರವಾನಿಸಲಾಗಿದ್ದು ವರದಿ ಬರಬೇಕಿದೆ. ವರದಿ ಬರುವವರೆಗೂ ಎಸ್ಐಟಿ ತನಿಖೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದೆ. ವರದಿ ಬಂದ ಬಳಿಕ ತನಿಖೆ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.
ಇನ್ನು ಗೃಹ ಸಚಿವ ಡಾ.ಜಿ ಪರಮೇಶ್ವರ್ ಮಾತನಾಡಿದ ಬಳಿಕ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಎಸ್ಐಟಿ ತನಿಖೆಯನ್ನು ಹೇಳಿದ್ದೀರಿ. ಧರ್ಮಸ್ಥಳದಲ್ಲಿ ಗುಡ್ಡ ಅಗೆದರೂ ಇಲಿ ಸಿಗಲಿಲ್ಲ, ಕಲಾಪದಲ್ಲಿ ನೀವು ಹೇಳಿದರೆ ಸೊಳ್ಳೆ ಕೂಡ ಸತ್ತಿಲ್ಲ. ಅನಾಮಿಕ ಬುರಡೆ ತಂದಿರುವುದರ ಕುರಿತು ಮೊದಲೇ ಯಾಕೆ ತನಿಖೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ