/newsfirstlive-kannada/media/media_files/2025/08/15/dharmasthala-case2-2025-08-15-18-22-19.jpg)
ಧರ್ಮಸ್ಥಳ ಗ್ರಾಮದಲ್ಲಿ ಶ*ವ ಹೂತಿಟ್ಟ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ SIT ಸ್ಥಳ ಪರಿಶೋಧನೆ ಇಂದು ಸ್ಥಗಿತಗೊಳಿಸಲಾಗಿದೆ. SIT ಅಧಿಕಾರಿಗಳು ಈಗಾಗಲೇ ಅನಾಮಿಕ ದೂರುದಾರ ತೋರಿಸಿದ ಎಲ್ಲಾ ಸ್ಥಳಗಳನ್ನು ಅಗೆದು ಪರಿಶೋಧನೆ ನಡೆಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದೇ ಭಾರೀ ಸ್ಫೋಟ; ಜೀವ ಬಿಟ್ಟ ಬಾಲಕ, 9 ಮಂದಿ ಗಂಭೀರ
ಆದ್ರೆ, ಯಾವೊಂದು ಸ್ಥಳದಲ್ಲೂ ಅಸ್ಥಿಪಂಜರದ ಕುರುಹು ಪತ್ತೆಯಾಗಿಲ್ಲ. ಇಂದು ಸ್ವಾತಂತ್ರ ದಿನಾಚರಣೆ ಹಿನ್ನೆಲೆ ಸ್ಥಳ ಪರಿಶೋಧನೆ ಸ್ಥಗಿತಗೊಳಿಸಲಾಗಿದೆ. ಇದರ ಮಧ್ಯೆ ಅನಾಮಿಕ ಇಂಡಿಯಾ ಟುಡೇ ಸುದ್ದಿಗಾರರೊಂದಿಗೆ ಕೆಲವೊಂದು ವಿಚಾರಗಳ ಬಗ್ಗೆ ಮಾತಾಡಿದ್ದಾನೆ. ಹೂತಿಟ್ಟ ಶ*ವಗಳ ಬಗ್ಗೆ, ಆ ಜಾಗದಲ್ಲಿ ಕಳೆ ಬರಹ ಸಿಗದೇ ಇರುವ ಬಗ್ಗೆ ಹೇಳಿಕೆ ನೀಡಿದ್ದಾನೆ.
ಅಲ್ಲದೇ ಅನಾಮಧೇಯ ಹೇಳಿಕೆಗಳಿಂದಲೇ ಇನ್ನೂ, ಹಲವು ಅನುಮಾನ ಮೂಡುತ್ತಿವೆ. ಒಬ್ಬಂಟಿಯಲ್ಲ.. ಶ* ಹೂಳುವಾಗ 3 ಜನ ಇರುತ್ತಿದ್ದರಂತೆ. ಅಣ್ಣ, ಬಾವ, ರಾಜು ಎಂಬಾತನ ಜೊತೆ ಹೂಳ್ತಿದ್ದನಂತೆ. ಅ*ತ್ಯಾಚಾರ ಆಗಿದ್ದನ್ನ ನಾನು ಹೇಳೋಕಾಗಲ್ಲ, ಗೊತ್ತಾಗಲ್ಲ ಅಂದ್ರೆ ಅ*ತ್ಯಾಚಾರ ಆರೋಪ ಮಾಡಿರೋದೇಕೆ? ಎಸ್‌ಐಟಿ ಅಧಿಕಾರಿಗಳಿಗೆ ನನ್ಮೇಲೆ ನಂಬಿಕೆಯೇ ಇಲ್ಲ. ತೋರಿಸಿದಲ್ಲೆಲ್ಲಾ ಅಗೀತಿದ್ರೂ SIT ಮೇಲೆ ಅನಾಮಿಕ ಅಸಮಾಧಾನ ವ್ಯಕ್ತಪಡಿಸಿದ್ದಾನೆ.
ಇದರ ಮಧ್ಯೆ ಅನಾಮಧೇಯನ ತೋರಿಸಿದ ಜಾಗದಲ್ಲಿ ಬರುಡೆಗಳು ಸಿಗುತ್ತಿಲ್ಲ ಹೀಗಾಗಿ ಅನಾಮಿಕನ ಮೇಲೆ ಅನುಮಾನ ವ್ಯಕ್ತವಾಗುತ್ತಿವೆ ಅನ್ನೋ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ. ನಾನೆಲ್ಲೂ ಓಡಿ ಹೋಗಲ್ಲ, ಯಾಕೆ ಹೋಗ್ಲಿ? ನಾನೇನು ಕಳ್ಳನಾ? ನ್ಯಾಯ ಕೊಡಿಸ್ಬೇಕು ಅಂತಿಲ್ಲ, ಶವಗಳನ್ನ ಎತ್ಕೊಟ್ಟು ಹೋಗ್ತೇನೆ. ಹೆಂಡ್ತಿ, ಮಕ್ಕಳನ್ನ ನೋಡಿಯೇ ಎರಡೂವರೆ ತಿಂಗಳಾಗ್ತಾ ಬಂತು. ಡೆಡ್‌ಬಾಡಿಗಳನ್ನ ತೋರಿಸಿ ಊರಿಗೆ ಹೋಗುತ್ತೇನೆ. ಅರ್ಧಕ್ಕೆ ನಿಲ್ಲಿಸಬಾರದು, ಎಲ್ಲಾನೂ ಮುಗಿಸಲೇಬೇಕು. ಎಲ್ಲಾ 5 ಸ್ಪಾಟ್ ಮುಗಿಸಿ ಕ್ಲಿಯರ್ ಮಾಡಿ ಕೊಡ್ಬೇಕು. ನನಗೆ ಹೆಣ ತೆಗೆಸಿಕೊಟ್ಟು ಅವ್ರು ಏನ್ಬೇಕಾದ್ರೂ ಮಾಡ್ಲಿ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ