ಧರ್ಮಸ್ಥಳ ಕೇಸ್; ಬುರುಡೆ ಕೊಟ್ಟು ಸುಳ್ಳು ಹೇಳುವಂತೆ ಒತ್ತಾಯ.. ಅನಾಮಿಕ ಸ್ಫೋಟಕ ಹೇಳಿಕೆ

ಧರ್ಮಸ್ಥಳದ ಬುರುಡೆ ಪ್ರಕರಣವು ದಿನದಿಂದ ದಿನಕ್ಕೆ ಟ್ವಿಸ್ಟ್​​ ಪಡೆದುಕೊಳ್ಳುತ್ತಿದ್ದು ಎಸ್​ಟಿಐ ಅಧಿಕಾರಿಗಳ ವಿಚಾರಣೆ ವೇಳೆ ಸಾಕ್ಷಿದಾರ ಸ್ಫೋಟಕ ಹೇಳಿಕೆ ನೀಡಿದ್ದಾನೆ. ಯಾವುದೋ ಒಂದು ಗುಂಪು ನನ್ನ ಸಂಪರ್ಕಿಸಿತ್ತು.

author-image
Bhimappa
ಧರ್ಮಸ್ಥಳ ಕೇಸ್​ ಬಿಗ್​​ ಅಪ್​ಡೇಟ್ಸ್​.. ಬುರುಡೆ ರಹಸ್ಯಕ್ಕಾಗಿ ದೂರುದಾರನ ಜೊತೆ ಕಾಡಿಗೆ ಎಂಟ್ರಿ..! ​
Advertisment

ಮಂಗಳೂರು: ಧರ್ಮಸ್ಥಳದ ಬುರುಡೆ ಪ್ರಕರಣವು ದಿನದಿಂದ ದಿನಕ್ಕೆ ಟ್ವಿಸ್ಟ್​​ ಪಡೆದುಕೊಳ್ಳುತ್ತಿದ್ದು ಎಸ್​ಟಿಐ ಅಧಿಕಾರಿಗಳ ವಿಚಾರಣೆ ವೇಳೆ ಸಾಕ್ಷಿದಾರ ಸ್ಫೋಟಕ ಹೇಳಿಕೆ ನೀಡಿದ್ದಾನೆ. ಯಾವುದೋ ಒಂದು ಗುಂಪು ನನ್ನ ಸಂಪರ್ಕಿಸಿ ತಪ್ಪು ಹೇಳಿಕೆ ನೀಡುವಂತೆ ಒತ್ತಾಯಿಸಿದ್ದರಿಂದ ನಾನು ಇಲ್ಲಿಗೆ ಬಂದೇ ಎಂದು ಹೇಳಿದ್ದಾನೆ.

ಎಸ್​​ಐಟಿ ಅಧಿಕಾರಿಗಳು ದೂರುದಾರನನ್ನು ಪ್ರಶ್ನೆ ಮಾಡಿದ್ದು ಯಾರು ಅಲ್ಲಿಗೆ ಬಂದು ನಿನ್ನನ್ನು ಸಂಪರ್ಕ ಮಾಡಿದ್ದರು ಎಂದು ಕೇಳಿದ್ದಾರೆ. ಇದಕ್ಕೆ ಉತ್ತರ ನೀಡಿದ ದೂರುದಾರ, 2014ರ ನಂತರ ತಮಿಳುನಾಡಿನಲ್ಲಿದ್ದೆ. 2023ರಲ್ಲಿ ಒಂದು ಗುಂಪು ನನ್ನನ್ನು ಸಂಪರ್ಕ ಮಾಡಿತ್ತು. ಧರ್ಮಸ್ಥಳದಲ್ಲಿ ಶವ ಹೂತಿರುವ ಬಗ್ಗೆ ಕೇಳಿತ್ತು. ಅದಕ್ಕೆ ಕಾನೂನು ಪ್ರಕಾರವೇ ಶವಗಳನ್ನು ನಾನು ಹೂತಿರುವುದಾಗಿ ಹೇಳಿದ್ದೇ ಎಂದು ಹೇಳಿದ್ದಾನೆ. 

ಇದನ್ನೂ ಓದಿ: ಹೆಂಡತಿ ಜೀವ ತೆಗೆದು ಓಡಿ ಹೋಗ್ತಿದ್ದ ಪಾಪಿ ಪಾಪಣ್ಣ.. ತಂದೆನ ಹಿಡಿದುಕೊಟ್ಟ ಮಗ

DHARMASTALA_NEW

ಆದರೆ ನನ್ನನ್ನು ಸಂಪರ್ಕ ಮಾಡಿದ್ದ ಗುಂಪು ತಪ್ಪು ಹೇಳಿಕೆ ನೀಡುವಂತೆ ಒತ್ತಾಯಿಸಿದ್ದರು. 2023ರ ಡಿಸೆಂಬರ್​ನಲ್ಲಿ ತಮಿಳುನಾಡಿನಿಂದ ನನನ್ನು ಗುಂಪು ಕರೆತಂದಿತು. ಬುರುಡೆ ಕೊಟ್ಟು ಸುಳ್ಳು ಹೇಳುವಂತೆ ಒತ್ತಾಯ ಮಾಡಿದ್ದರು. ಹೀಗಾಗಿ ಕೋರ್ಟ್​​ನಲ್ಲಿ ಜಡ್ಜ್​ ಮುಂದೆ ಹೇಳಿಕೆ ನೀಡುವಾಗ ತುಂಬಾ ಭಯವಾಗಿತ್ತು ಎಂದು ಹೇಳಿದ್ದಾನೆ.

ಒಂದು ವರ್ಷದಿಂದ ಈ ಕುರಿತು ಚಟುವಟಿಕೆ ನಡೆದಿದ್ದವು. ಮಹಿಳೆಯೊಬ್ಬರ ದೂರಿನ ನಂತರ ಪೊಲೀಸರು ಹಾಗೂ ನ್ಯಾಯಾಲಯದ ಮುಂದೆ ಹೇಳಿಕೆ ನೀಡಲು ನನಗೂ ಧೈರ್ಯ ಬಂತು. ಒಂದು ರೀತಿಯಲ್ಲಿ ಆ ಮಹಿಳೆಯೇ ನನ್ನಲ್ಲಿ ಧೈರ್ಯ ತುಂಬಿದರು ಎನ್ನಬಹುದು. ಇದರಿಂದ ಅಲ್ಲಿಂದ ಬಂದು ಇಲ್ಲಿ ಹೇಳಿಕೆ ನೀಡಲಾಯಿತು ಎಂದು ಹೇಳಿದ್ದಾನೆ ಎನ್ನಲಾಗಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

dharmasthala Dharmasthala case
Advertisment