/newsfirstlive-kannada/media/media_files/2025/08/17/mys_gayatri-2025-08-17-21-59-51.jpg)
ಮೈಸೂರು: ಮದ್ಯಪಾನ ಮಾಡುವುದಕ್ಕೆ ಹಣ ನೀಡಲಿಲ್ಲ ಎಂದು ತನ್ನ ಹೆಂಡತಿಯನ್ನೇ ಮಚ್ಚಿನಿಂದ ಕೊಚ್ಚಿ ಗಂಡ ಜೀವ ತೆಗೆದಿದ್ದಾನೆ. ಮೈಸೂರಿನ ಮಹದೇಶ್ವರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.
ಮಹದೇಶ್ವರ ಬಡಾವಣೆಯ ನಿವಾಸಿ ಗಾಯತ್ರಿ ಜೀವ ಕಳೆದುಕೊಂಡವರು. ಈಕೆಯ ಗಂಡನಾದ ಪಾಪಣ್ಣ ರಿಯಲ್ ಎಸ್ಟೇಟ್ ವಹಿವಾಟು ನಡೆಸುತ್ತಿದ್ದನು. ರಿಯಲ್ ಎಸ್ಟೇಟ್ನಲ್ಲಿ ನಷ್ಟ ಉಂಟಾಗಿ ಕುಡಿತದ ಚಟಕ್ಕೆ ದಾಸನಾಗಿದ್ದನು. ಇದರಿಂದಲೇ ಕುಡಿತಕ್ಕಾಗಿ ಹೆಂಡತಿ, ಮಕ್ಕಳಿಗೆ ಹಣ ಕೊಡುವಂತೆ ಪೀಡಿಸುತ್ತಿದ್ದನು. ಇರುವ ಜಮೀನು ಅನ್ನು ಮಾರಾಟ ಮಾಡಿ, ಅದರಿಂದ ಬರುವ ಹಣ ನೀಡುವಂತೆ ಕಿರುಕುಳ ಕೊಡುತ್ತಿದ್ದನು.
ಇದನ್ನೂ ಓದಿ:ಮತ್ತೆ ಅಖಾಡಕ್ಕೆ ಇಳಿದ ಟಾಟಾ ಸುಮೋ.. Tata Motors ಲಾಂಚ್ ಮಾಡಿದ ಕಾರಿನ ಬೆಲೆ ಇಷ್ಟು ಕಡಿಮೆನಾ?
ಕುಡಿತಕ್ಕೆ ಹಣ ನೀಡದಿದ್ದಕ್ಕೆ ಗಂಡ, ಹೆಂಡತಿ ನಡುವೆ ಆಗಾಗ ಗಲಾಟೆಗಳು ನಡೆದಿವೆ. ಅದರಂತೆ ಇಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿದ್ದು ಹೆಂಡತಿ ಮೇಲೆ ಮಚ್ಚಿನಿಂದ ಕ್ರೂರಿ ಹಲ್ಲೆ ನಡೆಸಿ ಉಸಿರನ್ನೇ ನಿಲ್ಲಿಸಿ ಬಿಟ್ಟಿದ್ದಾನೆ. ಹೆಂಡತಿ ಜೀವ ತೆಗೆದು ಪಾಪಣ್ಣ ಓಡಿ ಹೋಗುತ್ತಿದ್ದನು. ಇದೇ ಸಮಯಕ್ಕೆ ಮಗ ಬಂದು ತಂದೆಯನ್ನ ಹಿಡಿದುಕೊಂಡಿದ್ದಾನೆ.
ಈ ಸಂಬಂಧ ಅವರ ಮಗ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ತಂದೆಯೇ, ನನ್ನ ತಾಯಿಯನ್ನು ಮುಗಿಸಿ ಓಡಿ ಹೋಗುತ್ತಿದ್ದಾಗ ಹಿಡಿದುಕೊಂಡಿದ್ದೇನೆ ಎಂದು ಪ್ರಕರಣ ದಾಖಲು ಮಾಡಿದ್ದಾನೆ. ಸದ್ಯ ಕೃತ್ಯ ಎಸಗಿದ ಪಾಪಿ ಪಾಪಣ್ಣನನ್ನು ಪೊಲೀಸರು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ