ಮತ್ತೆ ಅಖಾಡಕ್ಕೆ ಇಳಿದ ಟಾಟಾ ಸುಮೋ.. Tata Motors ಲಾಂಚ್ ಮಾಡಿದ ಕಾರಿನ ಬೆಲೆ ಇಷ್ಟು ಕಡಿಮೆನಾ?

ಸದ್ಯ ಟಾಟಾ ಮೋಟರ್ಸ್ ಪುನಃ ಈ ಕಾರನ್ನು ಹೊಸ ರೀತಿಯಲ್ಲಿ ಮಾರ್ಕೆಟ್​ಗೆ ಪರಿಚಯಿಸುತ್ತಿದೆ. ಮಧ್ಯಮ ವರ್ಗದ ಕುಟುಂಬಗಳಿಗೆ ಕ್ಯಾಚಿ ಆಗುವಂತೆ 2025ರ ಹೊಸ ಟಾಟಾ ಸುಮೋ ಅನ್ನು ಟಾಟಾ ಮೋಟರ್ಸ್ ಲಾಂಚ್ ಮಾಡಿದೆ.

author-image
Bhimappa
Tata_Sumo
Advertisment

ವಾಹನ ಪ್ರಿಯರ ನೆಚ್ಚಿನ ಕಾರು ಎಂದರೆ ಅದು ಟಾಟಾ ಸುಮೋ. ಈಗಲೂ ಈ ಬ್ರ್ಯಾಂಡ್ ​ಲಭ್ಯ ಇದ್ದರೂ ಹೆಚ್ಚಾಗಿ ಸಿನಿಮಾಗಳ ಫೈಟಿಂಗ್​​ ಸೀನ್​ಗಳಲ್ಲಿ ಕಾಣಬಹುದು. ಸದ್ಯ ಟಾಟಾ ಮೋಟರ್ಸ್ ಪುನಃ ಈ ಕಾರನ್ನು ಹೊಸ ರೀತಿಯಲ್ಲಿ ಮಾರ್ಕೆಟ್​ಗೆ ಪರಿಚಯಿಸುತ್ತಿದೆ. ಮಧ್ಯಮ ವರ್ಗದ ಕುಟುಂಬಗಳಿಗೆ ಕ್ಯಾಚಿ ಆಗುವಂತೆ 2025ರ ಹೊಸ ಟಾಟಾ ಸುಮೋ ಅನ್ನು ಟಾಟಾ ಮೋಟರ್ಸ್ ಲಾಂಚ್ ಮಾಡಿದೆ.

ಭಾರತದ ರಸ್ತೆಗಳಿಗೆ ಹೊಂದಿಕೊಳ್ಳುವಂತೆ ಈ ಕಾರನ್ನು ಸಖತ್ ರಗಡ್ ಸ್ಟೈಲೀಶ್ ಆಗಿ ರೆಡಿ ಮಾಡಲಾಗಿದೆ. ಮೊದಲಿನ ಟಾಟಾ ಸುಮೋಗಿಂತ 2025ರ ಹೊಸ ಟಾಟಾ ಸುಮೋ ಒಳ್ಳೆಯ ಫ್ಯೂಚರ್ಸ್​ ಹೊಂದಿದೆ. ಸಾಮಾನ್ಯ ಕುಟುಂಬಗಳಿಗೂ ಕೈಗೆಟುಕುವ ಬೆಲೆಯಲ್ಲಿ ಲಭ್ಯ ಇರುವುದರಿಂದ ಭಾರತೀಯ ಮಾರ್ಕೆಟ್​ಗಳಲ್ಲಿ ಮತ್ತೆ ಟಾಟಾ ಸುಮೋ ಕಾರಿನ ಖರೀದಿಯ ಭರಾಟೆ ಜೋರಾಗಬಹುದು ಎಂದು ಹೇಳಲಾಗುತ್ತಿದೆ. 

ಗ್ರಾಮೀಣ ಭಾಗದವರಿಗೂ ಈ ಕಾರು ಲಭ್ಯ

ಫ್ರೆಂಡ್ಲಿ ಬಜೆಟ್ ಆಗಿರುವುದರಿಂದ ಎಲ್ಲ ಕುಟುಂಬಗಳು, ಗ್ರಾಮೀಣ ಭಾಗದವರು ಕೂಡ ಈ ಕಾರಿನ ಬೆಲೆಯಲ್ಲಿ ಯಾವುದೇ ರಾಜೀ ಇಲ್ಲದೇ ಖರೀದಿ ಮಾಡಬಹುದು. ಈಗ ಎಲೆಕ್ಟ್ರಿಕ್​ ವಾಹನಗಳ ಯುಗ ನಡೆಯುತ್ತಿದ್ದರೂ, ಡಿಸೇಲ್ ಮತ್ತು ಸಿಎನ್​ಜಿ ಇಂದ ಓಡುವ ಕಾರು ಬೇಕು ಎನ್ನುವವರಿಗೆ ಟಾಟಾ ಸುಮೋ ಬೆಸ್ಟ್ ಚಾಯ್ಸ್​​ ಆಗಿದೆ. ಏಕೆಂದರೆ ವ್ಯಾಪಾರ ವ್ಯವಹಾರ ಮಾಡುವವರಿಗೆ ಇದು ಲಾಭ ತಂದುಕೊಡುವ ಕಾರು. ಅಲ್ಲದೇ ಇಎಂಐ, ಎಕ್ಸ್​ಚೇಂಜ್ ಹಾಗೂ ಡೌನ್​ ಪೇಮೆಂಟ್ ಮಾಡಿಯೂ ಈ ಕಾರನ್ನು ಗ್ರಾಹಕರು ಖರೀದಿ ಮಾಡಬಹುದು.

ಇದನ್ನೂ ಓದಿ:ಡಾ.ವಿಷ್ಣುವರ್ಧನ್ ಅಸ್ಥಿ ಇರೋದು ಎಲ್ಲಿ?, ಆ ಒಂದು ಸ್ಥಳದಲ್ಲಿ ಮಾತ್ರ ಇದೆ- ಅನಿರುದ್ಧ ಜಟ್ಕರ್

Tata_Sumo_Car

ಹೊಸ ಟಾಟಾ ಸುಮೋ ಕಾರು ಒಂದು ಲೀಟರ್ ಇಂಧನಕ್ಕೆ ಬರೋಬ್ಬರಿ 42 ಕಿಲೋ ಮೀಟರ್ ಮೈಲೇಜ್ ಕೊಡಲಿದೆ. ಇದರಿಂದ ಲಾಂಗ್ ಡ್ರೈ, ನಗರಗಳಲ್ಲಿನ ಟ್ರಾಫಿಕ್​ನಲ್ಲಿ ಇಂಧನ ಉಳಿತಾಯ ಆಗಲಿದೆ. ಓನರ್​ಗೆ ಉಳಿತಾಯವೇ ಆಗಲಿದೆ. ಭಾರತದ ರಸ್ತೆಗಳ ಕಂಡೀಷನ್​ಗೆ ತಕ್ಕಂತೆ ಈ ಕಾರು ರೋಬಸ್ಟ್ ಬಾಡಿ ಜೊತೆಗೆ ಫ್ರೇಮ್​ ಚೆಸ್ಸಿಸ್​ (Frame Chassis) ಹೊಂದಿದೆ. ಕಾರಿನ ಇಂಜಿನ್ ಅನ್ನು​ ಲೋವೊರ್ ಆರ್​ಪಿಎಂನಲ್ಲಿ ಅಧಿಕ ಟಾರ್ಕ್ (torque) ಒದಗಿಸಲು ಟ್ಯೂನ್ ಮಾಡಲಾಗಿದೆ.

ಈ ಕಾರಿನ ಬೆಲೆ ಇಷ್ಟು ಕಡಿಮೆನಾ?

ಕಾರಿನ ಮುಂಭಾಗದ ಗ್ರಿಲ್ ದೊಡ್ಡದಾಗಿದ್ದು ಎಲ್​ಇಡಿ ಡಿಆರ್​ಎಲ್​ ಜೊತೆಗೆ ಪ್ರೀಮಿಯಂ ಟಚ್​ ನೀಡಲಾಗಿದೆ. ಬ್ಲಾಕ್​​ ಬಂಪರ್ಸ್ ಫುಲ್ ಸ್ಟ್ರಾಂಗ್ ಇವೆ. Infotainment Systemಗೆ ಹೊಸ ಟಚ್​ಸ್ಕ್ರೀನ್, ಪವರ್ ವಿಂಡೋ ಮತ್ತು ಸೆಂಟ್ರಲ್ ಲಾಕಿಂಗ್, ಎಸಿ, ಮೊಬೈಲ್ ಚಾರ್ಜರ್ ಸೇರಿ ಇನ್ನು ಕೆಲವು ಹೊಸ ಫ್ಯೂಚರ್ಸ್​ ಕೂಡ ಹೊಂದಿದೆ. ಇದರ ಜೊತೆಗೆ ಕಾರಿನಲ್ಲಿ ವಸ್ತುಗಳನ್ನು ಸಾಗಿಸಲು ಸೀಟ್​ಗಳನ್ನು ಫೋಲ್ಡ್​ ಮಾಡಬಹುದು. 

ಒಂದೇ ಬಾರಿಗೆ 7 ರಿಂದ 8 ಪ್ರಯಾಣಿಕರು ಅರಾಮಾಗಿ ಟಾಟಾ ಸುಮೋ ಕಾರಿನಲ್ಲಿ ಪ್ರಯಾಣಿಸಬಹುದು. ಹಳ್ಳಿ ಕಡೆ ಪ್ಯಾಸೆಂಜರ್ ಕಾರು ಆಗಿಯೂ ಇದನ್ನು ಉಯೋಗಿಸಬಹುದು. ಈ ಎಲ್ಲದರ ಮಧ್ಯೆ ಇದರ ಬೆಲೆ ಎಷ್ಟು ಎನ್ನುವುದು ತಲೆಯಲ್ಲಿ ಓಡಾಡುತ್ತಿದ್ರೆ ಆನ್ಸರ್ ಸಿಂಪಲ್. ಹೊಸ ಟಾಟಾ ಸುಮೋ ಕಾರಿನ ಬೆಲೆ ಕೇವಲ 7 ಲಕ್ಷದ 50 ಸಾವಿರ ರೂಪಾಯಿ (ex-Showroom) ಆಗಿದೆ. ಭಾರತೀಯ ಮಧ್ಯಮ ವರ್ಗದ ಕುಟುಂಬಗಳಿಗೆ ಈ ಬೆಲೆ ತುಂಬಾ ಕ್ಯಾಚಿನೇ ಎಂದು ಹೇಳಬಹುದು. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Tata Sumo
Advertisment