Advertisment

Dharmasthala Case: ಬುರುಡೆ ಕೇಸ್​ಗೆ ಬಿಗ್​​ ಟ್ವಿಸ್ಟ್.. ಮಾಸ್ಕ್​ ಮ್ಯಾನ್ ಬಂಧನ

ಧರ್ಮಸ್ಥಳದ ಪ್ರಕರಣದಲ್ಲಿ ದೂರುದಾರನಾಗಿದ್ದ ಮಾಸ್ಕ್​ಮ್ಯಾನ್ ಅನ್ನು ವಿಶೇಷ ತನಿಖಾ ದಳ (ಎಸ್​ಐಟಿ)ದ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಇವತ್ತು ಬೆಳ್ತಂಗಡಿ ಕೋರ್ಟ್​ಗೆ ಎಸ್​ಐಟಿ ಅಧಿಕಾರಿಗಳು ಹಾಜರು ಪಡಿಸಲಿದ್ದಾರೆ.

author-image
Bhimappa
MASK_MAN_NEW

ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಬಂಧಿಸಿದ ಎಸ್‌ಐಟಿ

Advertisment
  • SIT ಯಿಂದ ಮಾಸ್ಕ್ ಮ್ಯಾನ್ ಬಂಧನ
  • ಮೊದಲ ತಲೆ ಬುರುಡೆ ತಂದಿದ್ದ ಕೇಸ್ ನಲ್ಲಿ ಮಾಸ್ಕ್ ಮ್ಯಾನ್ ಬಂಧನ
  • ತಲೆ ಬುರುಡೆ ಎಲ್ಲಿಂದ ತಂದಿದ್ದು ಎಂದು ಹೇಳದ ಮಾಸ್ಕ್ ಮ್ಯಾನ್

ಮಂಗಳೂರು: ಧರ್ಮಸ್ಥಳದ ಪ್ರಕರಣದಲ್ಲಿ ದೂರುದಾರನಾಗಿದ್ದ ಮಾಸ್ಕ್​ಮ್ಯಾನ್ ಅನ್ನು ವಿಶೇಷ ತನಿಖಾ ದಳ (ಎಸ್​ಐಟಿ)ದ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ತಲೆ ಬುರುಡೆಯನ್ನು ನ್ಯಾಯಾಲಯಕ್ಕೆ ತಂದಿದ್ದ ಕೇಸ್​ನಲ್ಲಿ ಮಾಸ್ಕ್​ಮ್ಯಾನ್ ಅನ್ನು ಬಂಧಿಸಲಾಗಿದೆ. ಇವತ್ತು ಬೆಳ್ತಂಗಡಿ ಕೋರ್ಟ್​ಗೆ ಎಸ್​ಐಟಿ ಅಧಿಕಾರಿಗಳು ಹಾಜರು ಪಡಿಸಲಿದ್ದಾರೆ. 

Advertisment

ಎಸ್​ಐಟಿ ಅಧಿಕಾರಿಗಳು ಬಂಧನ ಬಳಿಕ‌ ಮಾಸ್ಕ್ ಮ್ಯಾನ್ ಹೆಸರು ರವೀಲ್ ಮಾಡಿದ್ದು ಆತನ ಹೆಸರು ಸಿ.ಎನ್ ಚಿನ್ನಯ್ಯ ಅಲಿಯಾಸ್ ಚೆನ್ನ ಎಂದು ಬಂಧನದಲ್ಲಿ ಉಲ್ಲೇಖ ಮಾಡಲಾಗಿದೆ. ಆರೋಪಿ ಮಂಡ್ಯ ಜಿಲ್ಲೆಯ ಮಂಡ್ಯ ತಾಲೂಕಿನ ಚಿಕ್ಕಬೆಳ್ಳಿ ನಿವಾಸಿ ಆಗಿದ್ದಾನೆ. ನ್ಯಾಯಾಲಯದಲ್ಲಿ ಪ್ರಕರಣದ ಮತ್ತಷ್ಟು ವಿಚಾರಣೆಗೆ ಕಸ್ಟಡಿಗೆ ನೀಡಬೇಕು ಎಂದು ಎಸ್​ಐಟಿ ಅಧಿಕಾರಿಗಳು ಕೇಳಲಿದ್ದಾರೆ. ತನಿಖೆ ವೇಳೆ ಹಲವರ ಹೆಸರು ಬಾಯಿಬಿಟ್ಟಿರೋ ಸಾಧ್ಯತೆ ಇದೆ. 

ಇದನ್ನೂ ಓದಿ: ಫುಟ್​ಬಾಲ್​ ಫ್ಯಾನ್ಸ್​ಗೆ ಗುಡ್​ನ್ಯೂಸ್​.. ಕೇರಳದಲ್ಲಿ ಮ್ಯಾಚ್ ಆಡಲಿರುವ ಲಿಯೋನೆಲ್ ಮೆಸ್ಸಿ ಟೀಮ್

DHARMASTALA_CASE

ಮಾಸ್ಕ್​ಮ್ಯಾನ್ ಹೇಳಿರುವ ಅವರ ಬಗ್ಗೆ ಕೂಲಂಕುಷವಾಗಿ ಮಾಹಿತಿ ಸಂಗ್ರಹಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ತನ್ನ ಹಿಂದಿನ ಟೀಮ್ ಬಗ್ಗೆ ಚಿನ್ನಯ್ಯ ಬಾಯಿ ಬಿಟ್ಟಿದ್ದಾನೆ. ಹೀಗಾಗಿ ಅವರು ಯಾರು ಅನ್ನೋ ಬಗ್ಗೆ ವಿಚಾರಣೆ ನಡೆಸಬೇಕಾಗಿದೆ. ಹೀಗಾಗಿ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಕೆಲವೇ ಕ್ಷಣಗಳಲ್ಲಿ ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗಲಿದ್ದಾರೆ. ವೈದ್ಯಕೀಯ ಪರೀಕ್ಷೆ ಬಳಿಕ ಕೋರ್ಟ್​ಗೆ ಹಾಜರು ಪಡಿಸಲಿದ್ದಾರೆ. ಕಸ್ಟಡಿಗೆ ಪಡೆದ ಬಳಿಕ ಮತ್ತಷ್ಟು ಜನರಿಗೆ ಸಂಕಷ್ಟ ಸಾಧ್ಯತೆ ಇದೆ. 

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

dharmasthala case, sameer md Dharmasthala case dharmasthala
Advertisment
Advertisment
Advertisment