/newsfirstlive-kannada/media/media_files/2025/08/01/keshav-gowda-dharmasthala-2025-08-01-12-03-22.jpg)
ಧರ್ಮಸ್ಥಳದಲ್ಲಿ ಶ*ವ ಹೂತಿಟ್ಟ ಆರೋಪಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ತನಿಖೆ ಚುರುಕು ಮಾಡಿದ್ದಾರೆ. ಪಾಯಿಂಟ್-6ರಲ್ಲಿ ತನಿಖೆಗೆ ಟರ್ನಿಂಗ್ ಪಾಯಿಂಟ್ ಸಿಕ್ಕಿದ್ದು, ದೂರುದಾರ ಮಾರ್ಕ್ ಮಾಡಿದ್ದ ಸ್ಥಳದಲ್ಲಿ ಮಾನವ ದೇಹದ ಮೂಳೆಗಳು ಸಿಕ್ಕಿವೆ. ಸದ್ಯ ಅವಶೇಷಗಳು ಸಿಕ್ಕ ಸ್ಥಳಕ್ಕೆ SIT ಹೆಚ್ಚಿನ ಭದ್ರತೆ ಕ್ರಮಕೈಗೊಂಡಿದ್ದು, 4 ದಿಕ್ಕಿನಲ್ಲಿ ಶೀಟ್ ಹಾಕಿ ಸಾಕ್ಷಿ ನಾಶ ಆಗದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಇದನ್ನೂ ಓದಿ:ಧರ್ಮಸ್ಥಳ ಪ್ರಕರಣದ ತನಿಖೆಗೆ ಮೇಜರ್ ಟ್ವಿಸ್ಟ್.. ಪಾಯಿಂಟ್ 1ರಲ್ಲಿ ಸಿಕ್ಕ ಡೆಬಿಟ್ ಕಾರ್ಡ್ ರಹಸ್ಯ ಬಯಲು..!
ನೇತ್ರಾವತಿ ಸ್ನಾನಘಟ್ಟದಲ್ಲಿ ಶ*ವಗಳನ್ನು ಹೂತಿಟ್ಟ ಆರೋಪ ಮಾಡಿರುವ ದೂರುದಾರ ಹೆ*ಣದ ಮೇಲಿನ ಚಿನ್ನ ಕದಿಯುತ್ತಿದ್ದ ಎಂದು ಧರ್ಮಸ್ಥಳ ಗ್ರಾಮ ಪಂಜಾಯಿತಿ ಮಾಜಿ ಅಧ್ಯಕ್ಷ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ನ್ಯೂಸ್ ಫಸ್ಟ್ನೊಂದಿಗೆ ಮಾತಾಡಿದ ಧರ್ಮಸ್ಥಳ ಗ್ರಾಮ ಪಂಜಾಯಿತಿ ಮಾಜಿ ಅಧ್ಯಕ್ಷ ಕೇಶವ ಗೌಡ, ದೂರು ನೀಡಿದ ಅನಾಮಿಕ ಯಾರು ಅನ್ನುವುದು ಧರ್ಮಸ್ಥಳದ ಜನರಿಗೆ ಗೊತ್ತಿದೆ. ಈ ವ್ಯಕ್ತಿ ನಟೋರಿಯಸ್ ಆಗಿದ್ದು, ಹೆ*ಣಗಳ ಮೇಲಿದ್ದ ಚಿನ್ನ, ಹಣ ಕದಿಯುತ್ತಿದ್ದ. ಹೊಳೆಯಲ್ಲಿ ಅನಾಥ ಶವಗಳು ಸಿಕ್ಕರೆ ನುಗ್ಗಿ ಹೊಳೆಯಿಂದ ಚಿನ್ನ ತೆಗೆಯುತ್ತಿದ್ದೆ. ಆತ ಧರ್ಮಸ್ಥಳದಿಂದ ಓಡಿ ಹೋಗಿಲ್ಲ. ಆತ ಮಾಡಿದ ದುಷ್ಕೃತ್ಯಗಳಿಗೆ ಆತನನ್ನು ಕ್ಷೇತ್ರದಿಂದ ಹೊರ ಹಾಕಲಾಗಿತ್ತು ಎಂದು ಆರೋಪಿಸಿದ್ದಾರೆ.
ಮಾತನ್ನು ಮುಂದುವರೆಸಿದ ಅವರು, ಈ ಹಿಂದೆ ಇಲ್ಲಿ ಮೃತದೇಹಗಳನ್ನು ಕಾನೂನು ಪ್ರಕಾರವೇ ಹೂಳಲಾಗಿದ್ದು, ಪೋಸ್ಟ್ ಮಾರ್ಟಮ್, ಹೂಳುವ ಪ್ರಕ್ರಿಯೆಗಳು ಸಮರ್ಪಕವಾಗಿ ನಡೆದಿವೆ. ಹೂಳದ ಪ್ರಕರಣಗಳಲ್ಲಿ ಮೃತರ ವಿಳಾಸ ದೊರಕಿದಾಗ ಅಲ್ಲಿಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. ಅಪರಿಚಿತರು ಮೃತಪಟ್ಟಾಗ ಇಲ್ಲಿಯೇ ಅಸಹಜ ಸಾವು ಪ್ರಕರಣ ದಾಖಲಿಸಿ ಹೂಳುವ ವ್ಯವಸ್ಥೆ ಇದ್ದು, ಇದು ಕಾನೂನು ಪ್ರಕಾರವೇ ಆಗುತ್ತದೆ. ಯಾರೋ ಅನಾಮಿಕ ಬಂದು ಇಲ್ಲಿ ಸಾವಿರಾರು ಜನರು ಸ*ತ್ತಿದ್ದು, ನೂರಾರು ಹೆ*ಣಗಳನ್ನು ಹೂತು ಹಾಕಿದ್ದೇನೆ ಎನ್ನುವುದಕ್ಕೆ ಇಲ್ಲಿ ಮಹಾಯುದ್ಧ ಆಗಿರಲಿಲ್ಲ. ದೂರು ನೀಡಿರುವ ಈ ಅನಾಮಿಕ ವ್ಯಕ್ತಿ ತಾನು ಧರ್ಮಸ್ಥಳದಲ್ಲಿ ಕೆಲಸಮಾಡಿದ್ದಾಗಿ ಹೇಳಿದ್ದು, ಈತ ಯಾರು ಅನ್ನುವುದು ನಮಗೆ ಗೊತ್ತಿದೆ ಎಂದು ಗುಡುಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ