/newsfirstlive-kannada/media/media_files/2025/12/17/pallavi-kaggal-2025-12-17-12-41-50.jpg)
ಧಾರವಾಡ: ಪರೀಕ್ಷಾರ್ಥಿ ಯುವತಿ ರೈಲು ಹಳಿಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಪಲ್ಲವಿ ಕಗ್ಗಲ್ (25) ಮೃತ ಪರೀಕ್ಷಾರ್ಥಿ.
ಬಳ್ಳಾರಿ ಜಿಲ್ಲೆಯ ಕಗ್ಗಲ್ ಗ್ರಾಮದ ನಿವಾಸಿ ಆಗಿದ್ದ ಪಲ್ಲವಿ ಕಗ್ಗಲ್, ಬಿಕಾಂ ಮುಗಿಸಿದ್ದರು. ಬಿಕಾಂ ಮುಗಿಸಿ ಸ್ಪರ್ಧಾತ್ಮಕ ಪರೀಕ್ಷೆಗೆ ಓದಲು ಧಾರವಾಡಕ್ಕೆ ಬಂದಿದ್ದರು. 2021 ರಿಂದ ಧಾರವಾಡದಲ್ಲಿ ಓದುತ್ತಿದ್ದರು.
ಪೊಲೀಸ್ ಪೇದೆಗೆ ತಯಾರಿ ನಡೆಸಿದ್ದ ಪಲ್ಲವಿ, ದೈಹಿಕ ಪರೀಕ್ಷೆಯಲ್ಲಿ ಪಾಸಾಗಿದ್ದರು. 2024 ರಲ್ಲಿ ನಡೆದ ದೈಹಿಕ ಪರೀಕ್ಷೆಯಲ್ಲಿ ಪಾಸಾಗಿದ್ದರು. ಆದರೆ ಲಿಖಿತ ಪರೀಕ್ಷೆಯಲ್ಲಿ ಉತ್ತಿರ್ಣ ಆಗಿರಲಿಲ್ಲ. ಮತ್ತೆ ನೇಮಕಾತಿ ಪರೀಕ್ಷೆ ಬರೆಯಲು ಸಜ್ಜಾಗುತ್ತಿದ್ದರು. ಕಳೆದ ನಾಲ್ಕು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುತ್ತಿದ್ದಳು.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌ನ ಮಹತ್ವದ ವಿಚಾರಣೆ ಆರಂಭ : ಸಾಕ್ಷಿ ಹೇಳಲು ರೇಣುಕಾಸ್ವಾಮಿ ತಂದೆ, ತಾಯಿ ಹಾಜರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us