/newsfirstlive-kannada/media/media_files/2025/12/21/mahest-tenginakayi-car-driver-2025-12-21-12-54-14.jpg)
ಹುಬ್ಬಳ್ಳಿ: ಮಗಳ ಜನ್ಮದಿನ ಆಚರಣೆ ಮಾಡಲು ಆಸೆಯಿಂದ ಓಡೋಡಿ ಹೊರಟ್ಟಿದ್ದ ಅಪ್ಪ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಹುಬ್ಬಳ್ಳಿ ಹೊರವಲಯದಲ್ಲಿ ನಡೆದಿದೆ.
ಮಂಜುನಾಥ್ ಅಲಿಯಾಸ್ ಸಾರಥಿ ಮೃತ ದುರ್ದೈವಿ. ಮೃತ ಮಂಜುನಾಥ್, ಶಾಸಕ ಮಹೇಶ್ ಟೆಂಗಿನಕಾಯಿ ಅವರು ಕಾರು ಚಾಲಕರಾಗಿದ್ದರು. ಹುಬ್ಬಳ್ಳಿ ತಾಲ್ಲೂಕಿನ ಕುಂದಗೋಳ ಕ್ರಾಸ್ ಬಳಿ ಸ್ಕೂಟಿಯಲ್ಲಿ ಹೋಗ್ತಿದ್ದಾಗ ಅಪಘಾತ ಸಂಭವಿಸಿದೆ.
ರಸ್ತೆ ಡಿವೈಡರ್​​ಗೆ ಸ್ಕೂಟರ್ ಡಿಕ್ಕಿ ಹೊಡೆದು ಮಂಜುನಾಥ ಜೀವ ಕಳೆದುಕೊಂಡಿದ್ದಾರೆ. ಮಗಳ ಹುಟ್ಟುಹಬ್ಬಕ್ಕೆ ಕೇಕ್ ತೆಗೆದುಕೊಂಡು ಹೋಗುತ್ತಿದ್ದರು. ಮಂಜುನಾಥ್, ಶಾಸಕ ಮಹೇಶ್ ಟೆಂಗಿನಕಾಯಿ ಕಾರು ಚಾಲಕನಾಗಿ ಹಲವು ವರ್ಷಗಳಿಂದ ಕೆಲಸ ಮಾಡ್ತಿದ್ದರು.
ವಿಷಯ ತಿಳಿಯುತ್ತಿದ್ದಂತೆಯೇ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಶಾಸಕ ಮಹೇಶ್ ಟೆಂಗಿನಕಾಯಿ ದೌಡಾಯಿಸಿದ್ದಾರೆ. ಶವಗಾರದ ಮುಂದೆ ಶಾಸಕರು ಬಿಕ್ಕಿ ಬಿಕ್ಕಿ ಕಣ್ಣೀರು ಇಟ್ಟಿದ್ದಾರೆ.
ಇದನ್ನೂ ಓದಿ: ನಾವೆಲ್ಲರೂ ಚೆನ್ನಾಗಿರಬೇಕು ಎಂಬ ಉದ್ದೇಶದಿಂದ ಸುಮ್ನಿದ್ದೆ, ಬಾಯಿ ಇಲ್ಲ ಎಂದಲ್ಲ -ಕಿಚ್ಚ ಸುದೀಪ್ ವಾರ್ನಿಂಗ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us