/newsfirstlive-kannada/media/media_files/2025/09/07/hubbli-chaku-irita-2025-09-07-07-47-26.jpg)
ಹುಬ್ಬಳ್ಳಿ: ನ್ಯೂ ಮ್ಯಾದರ ಓಣಿಯಲ್ಲಿ ಗಣೇಶ ವಿಸರ್ಜನೆ ವೇಳೆ ಯುವಕನಿಗೆ ಚಾಕು ಇರಿತ ಆಗಿದೆ. ಡಿಜೆ ಸದ್ದಿಗೆ ಡ್ಯಾನ್ಸ್ ಮಾಡುತ್ತಲೇ ಯುವಕನ ಹೊಟ್ಟೆಗೆ ಚಾಕು ಇರಿಯಲಾಗಿದೆ.
ಚೇತನ್ ಗೌಡ ಎಂಬ ವ್ಯಕ್ತಿಗೆ ಚಾಕು ಇರಿಯಲಾಗಿದೆ. ಸೆಟ್ಲಮೆಂಟ್ ನಿವಾಸಿ ಶ್ರೀ ಎಂಬಾತ ಚಾಕು ಇರಿದಿದ್ದಾನೆ. ಸದ್ಯ ಚೇತನ್ ಗೌಡನನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಎನ್.ಶಶಿಕುಮಾರ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಹುಬ್ಬಳ್ಳಿಯ ಗಣೇಶ ವಿಸರ್ಜನೆ ಸಾಕಷ್ಟು ಇತಿಹಾಸ ಹೊಂದಿದೆ. ಮೆರವಣಿಗೆಯಲ್ಲಿ ಸುಮಾರು 4 ಲಕ್ಷ ಜನ ಸೇರಿದ್ದರು. ಇದೇ ಸಮಯದಲ್ಲಿಯೇ ಯುವಕನಿಗೆ ಚಾಕು ಇರಿಯಲಾಗಿದೆ. ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:ಮಂತ್ರಮುಗ್ಧಗೊಳಿಸೋ ಅಪರೂಪದ ‘ರಕ್ತ ಚಂದ್ರ’ ಗ್ರಹಣ ಇವತ್ತು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ