ಮಂತ್ರಮುಗ್ಧಗೊಳಿಸೋ ಅಪರೂಪದ ‘ರಕ್ತ ಚಂದ್ರ’ ಗ್ರಹಣ ಇವತ್ತು..!

ಸೆಪ್ಟೆಂಬರ್ 7, 2025 ರಂದು ಅಂದರೆ ಇವತ್ತು ಸಂಪೂರ್ಣ ಚಂದ್ರ ಗ್ರಹಣ (Lunar eclipse) ಸಂಭವಿಸಲಿದೆ. ರಾತ್ರಿ ಅಪರೂಪದ ‘ರಕ್ತ ಚಂದ್ರ’ ಕಾಣಿಸಿಕೊಳ್ಳಲಿದ್ದು, ಅದು ನೋಡುಗರ ಮೋಡಿ ಮಾಡಲಿದೆ. ಚಂದ್ರ ಭೂಮಿಗೆ ಹತ್ತಿರವಾಗಿರೋದ್ರಿಂದ ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಗೋಚರಿಸುತ್ತದೆ.

author-image
Ganesh Kerekuli
boold moon
Advertisment

ಸೆಪ್ಟೆಂಬರ್ 7, 2025 ರಂದು ಅಂದರೆ ಇವತ್ತು ಸಂಪೂರ್ಣ ಚಂದ್ರ ಗ್ರಹಣ (Lunar eclipse) ಸಂಭವಿಸಲಿದೆ. ರಾತ್ರಿ ಅಪರೂಪದ ‘ರಕ್ತ ಚಂದ್ರ’ ಕಾಣಿಸಿಕೊಳ್ಳಲಿದ್ದು, ಅದು ನೋಡುಗರ ಮೋಡಿ ಮಾಡಲಿದೆ. ಚಂದ್ರ ಭೂಮಿಗೆ ಹತ್ತಿರವಾಗಿರೋದ್ರಿಂದ ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಗೋಚರಿಸುತ್ತದೆ. 

ಇವತ್ತು ಸಂಪೂರ್ಣ ಚಂದ್ರ ಗ್ರಹಣ (Lunar eclipse) ಸಂಭವಿಸಲಿದೆ. ಅಪರೂಪದ ‘ರಕ್ತ ಚಂದ್ರ’ ಕಾಣಿಸಿಕೊಳ್ಳಲಿದ್ದು, ಅದು ನೋಡುಗರ ಮೋಡಿ ಮಾಡಲಿದೆ. 

ಎಲ್ಲೆಲ್ಲಿ ಗೋಚರ..?

ಚಂದ್ರ ಭೂಮಿಗೆ ಹತ್ತಿರವಾಗಿರೋದ್ರಿಂದ ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಗೋಚರಿಸುತ್ತದೆ. ಗೃಹಣದ ಸಂದರ್ಭದಲ್ಲಿ ಚಂದ್ರನ ಬಣ್ಣವು ಚಿನ್ನದ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಈ ವರ್ಷ ಸಂಭವಿಸುತ್ತಿರುವ ಎರಡನೇ ಸಂಪೂರ್ಣ ಚಂದ್ರಗ್ರಹಣ ಇದಾಗಿದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 11.00 ರಿಂದ 12.22 ರವರೆಗೆ ಚಂದ್ರ ಗ್ರಹಣ ಗೋಚರ ಆಗಲಿದೆ. ಏಷ್ಯಾ, ಆಸ್ಟ್ರೇಲಿಯಾ ಮತ್ತು ಯುರೋಪಿನಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 

ಇದನ್ನೂ ಓದಿ:ಜನಾರ್ಧನರೆಡ್ಡಿ ವಿರುದ್ಧ ಮಾನನಷ್ಟ ಕೇಸ್ ದಾಖಲಿಸಿದ ಸಂಸದ ಶಶಿಕಾಂತ್ ಸೆಂತಿಲ್, ಜನಾರ್ಧನರೆಡ್ಡಿ ಹೇಳಿದ್ದೇನು?

Lunar_eclipse_New

ಭಾರತ, ಚೀನಾ, ರಷ್ಯಾ, ಪಶ್ಚಿಮ ಆಸ್ಟ್ರೇಲಿಯಾ, ಪೂರ್ವ ಆಫ್ರಿಕಾ ಮತ್ತು ಅರಬ್ ದೇಶಗಳಲ್ಲಿ ಸ್ಪಷ್ಟವಾಗಿ ಕಾಣಲಿದೆ. ಉತ್ತರ ಅಮೆರಿಕಾದಲ್ಲಿ ಈ ಗ್ರಹಣ ಗೋಚರಿಸಲ್ಲ. ಅಲಾಸ್ಕಾದ ಪಶ್ಚಿಮ ಭಾಗದಲ್ಲಿ ಭಾಗಶಃ ಚಂದ್ರಗ್ರಹಣ ಗೋಚರಿಸುತ್ತದೆ. ಬ್ರಿಟನ್ ಮತ್ತು ಪಶ್ಚಿಮ ಯುರೋಪಿನಲ್ಲಿ ಚಂದ್ರ ಉದಯಿಸಿದ ತಕ್ಷಣ ಗ್ರಹಣದ ನೆರಳು ಕಾಣಿಸಲಿದೆ. 

ಭೂಮಿಯ ನೆರಳು ಚಂದ್ರನ ಮೇಲ್ಮೈ ಮೇಲೆ ಸಂಪೂರ್ಣವಾಗಿ ಬಿದ್ದಾಗ ಸಂಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ. ಸೂರ್ಯನ ಬೆಳಕು ಚಂದ್ರನ ಡಿಸ್ಕ್ ಅನ್ನು ಬೆಳಗಿಸುತ್ತದೆ. ಭೂಮಿಯು ಮಧ್ಯದಲ್ಲಿರೋದ್ರಿಂದ ಸೂರ್ಯನ ಬೆಳಕು ಚಂದ್ರನನ್ನು ತಲುಪುವ ಮೊದಲು ಭೂಮಿಯ ವಾತಾವರಣದ ಮೂಲಕ ಹಾದುಹೋಗುತ್ತದೆ.

ಇದನ್ನೂ ಓದಿ:ಹೆಣ್ಣು ಮಗುವಿಗೆ ತಾಯಿಯಾದ ಭಾವನಾ ರಾಮಣ್ಣ.. ತಾಯಿ, ಮಗು ಕ್ಷೇಮ

ಸೂರ್ಯನ ಬೆಳಕು ಭೂಮಿಯ ವಾತಾವರಣದ ಮೂಲಕ ಚಲಿಸುವಾಗ ಚದುರಿಹೋಗುತ್ತದೆ. ಇದರರ್ಥ ಕಡಿಮೆ ತರಂಗಾಂತರಗಳು (ನೀಲಿ) ದೀರ್ಘ ತರಂಗಾಂತರಗಳಿಗಿಂತ (ಕೆಂಪು) ಹೆಚ್ಚು ಚದುರಿಹೋಗುತ್ತವೆ. ಈ ಸಮಯದಲ್ಲಿ, ಕೆಂಪು ಬೆಳಕು ಚಂದ್ರನ ಕಡೆಗೆ ಬಾಗುತ್ತದೆ. ಅದಕ್ಕಾಗಿಯೇ ಈ ಚಂದ್ರಗ್ರಹಣವನ್ನು ರಕ್ತ ಚಂದ್ರ ಎಂದು ಕರೆಯಲಾಗುತ್ತದೆ. ಈ ಕಾರಣದಿಂದಾಗಿ ಚಂದ್ರನ ಬಣ್ಣವು ಸಂಪೂರ್ಣವಾಗಿ ಬದಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Red Moon Lunar eclipse
Advertisment