/newsfirstlive-kannada/media/media_files/2026/01/09/sujata-handi-2026-01-09-10-11-04.jpg)
ಹುಬ್ಬಳ್ಳಿ: ಬಿಜೆಪಿ ಕಾರ್ಯಕರ್ತೆ ಸುಜಾತ ಹಂಡಿ ವಿವಸ್ತ್ರ ಪ್ರಕರಣ ಖಂಡಿಸಿ ಇವತ್ತು ಬಿಜೆಪಿ ನಾಯಕರು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ. ಮತ್ತೊಂದು ಕಡೆ ಪ್ರಕರಣದ ತನಿಖೆಯನ್ನೂ ಪೊಲೀಸರು ತೀವ್ರಗೊಳಿಸಿದ್ದಾರೆ. ಈ ಮಧ್ಯೆ ಸುಜಾತ ಹಂಡಿಗೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ವಿಡಿಯೋದಲ್ಲಿ ಏನಿದೆ..?
ಸುಜಾತಾ ಹಂಡಿ ಅವರ ಅಸಲಿ ಮುಖ ಇದು ಎನ್ನಲಾಗಿದ್ದು, ವಿಡಿಯೋ ನೋಡಿದ್ರೆ ಸುಜಾತ ಹಂಡಿ ಹೆಣ್ಣಾ? ಹೆಮ್ಮಾರಿಯಾ? ಎಂಬ ಪ್ರಶ್ನೆ ಮೂಡದೇ ಇರದು. ವಿವಸ್ತ್ರ ಪ್ರಕರಣ ಬೆನ್ನಲ್ಲೇ ಕಳೆದ ಮೂರು ವರ್ಷಗಳ ಹಿಂದಿನ ಹಳೆಯ ವಿಡಿಯೋ ವೈರಲ್ ಆಗಿದೆ.
ಮಾಹಿತಿಗಳ ಪ್ರಕಾರ, ಸುಜಾತ ಹಂಡಿ ಅವರು ಧಾರವಾಡ ತಾಲೂಕಿನ ತೂಕರಾಮ್ ಎಂಬ ವ್ಯಕ್ತಿಯನ್ನು ಕರೆಸಿಕೊಂಡಿದ್ದಳು. ಹನಿಟ್ರ್ಯಾಪ್ ಮಾಡಿ ಒಂದು ರೂಮ್​​ನಲ್ಲಿ ಕೂಡಿ ಹಾಕಿದ್ದ ಸುಜಾತ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ. ಕೊನೆಗೆ ಆತನಿಗೆ ಹಿಗ್ಗಾಮುಗ್ಗಾ ನೈಲಾನ್ ಹಗ್ಗದಿಂದ ಜಾಡಿಸಿದ್ದಾಳೆ. ಆಘಾತಕಾರಿ ವಿಚಾರ ಏನೆಂದರೆ, ಆಕೆ ದೊಡ್ಡದಾದ ಮಚ್ಚನ್ನೂ ಕೂಡ ಹಿಡಿಕೊಂಡಿರೋದು ವಿಡಿಯೋದಲ್ಲಿ ಗಮನಿಸಬಹುದು.
ಇದನ್ನೂ ಓದಿ: ಇಂದಿನಿಂದ WPL: ಮಂದಾನ vs ಕೌರ್..! ಹೇಗಿದೆ ಬೆಂಗಳೂರು ಸೇನೆ..?
ಮೃಗೀಯವಾಗಿ ಥಳಿಸುತ್ತಿದ್ದಾಗ ಅಮ್ಮಾ, ತಾಯಿ, ಅಕ್ಕ ಬಿಟ್ಟುಬಿಡು ಅಂತ ಆ ವ್ಯಕ್ತಿ ಗೋಳಾಡಿದ್ದಾನೆ. ಕಾಲಿಗೆ ಬಿದ್ದರೂ ಸುಜಾತ ಕ್ರೂರತೆ ಮೆರದಿದ್ದಾಳೆ. ಅದೇ ರೀತಿ ಹಲ್ಲೆ ಮಾಡುತ್ತ ಬರೋಬ್ಬರಿ ನಾಲ್ಕು ದಿನಗಳ ಕಾಲ ಕೂಡಿ ಹಾಕಿದ್ದಳು.
1.84 ಲಕ್ಷ ಹಣ ವಸೂಲಿ
ಕೆಲ ಸಹಚರರ ಜೊತೆ ಸೇರಿ ಥಳಿಸುತ್ತಿದ್ದ ಸುಜಾತ, ನಾಲ್ಕು ದಿನ ಕೂಡಿ ಹಾಕಿ ಬರೋಬ್ಬರಿ 1.84 ಲಕ್ಷ ರೂಪಾಯಿ ಹಣವನ್ನು ವಸೂಲಿ ಮಾಡಿದ್ದಳು ಎನ್ನಲಾಗಿದೆ. ಈ ಬಗ್ಗೆ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹಲ್ಲೆಗೊಳಗಾಗಿದ್ದ ವ್ಯಕ್ತಿ ಸುಜಾತ ಮತ್ತು ಆಕೆ ಸಹಚರರ ವಿರುದ್ಧ ದೂರು ನೀಡಿದ್ದರು. ನವೆಂಬರ್ 12, 2023 ರಂದು ದೂರು ದಾಖಲಾಗಿತ್ತು. ನಂತರ ಸುಜಾತ ಮತ್ತು ಆಕೆ ಸಹಚರರನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಳು.
ವಿಡಿಯೋ ವೈರಲ್ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಜಿಲ್ಲಾ ನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ.. ಬಿಜೆಪಿಯವರು ಸುಜಾತ ಹಂಡಿ ಎಂಬ ರಾಕ್ಷಸಿಯನ್ನ ಇಟ್ಟುಕೊಂಡು ರಾಜಕೀಯ ಮಾಡ್ತಿದ್ದಾರೆ. ಇವತ್ತು ಆಕೆಗಾಗಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ. ಈ ಪ್ರತಿಭಟನೆಯನ್ನ ನೀವು ಕೈಬಿಡಬೇಕು. ಸುಜಾತ ಹಂಡಿಯಂತಹ ಕೊಳಕು, ಮಹಿಳೆ ಈ ಮಹಾನಗರದಲ್ಲಿದ್ದಾಳೆ. ವಿಡಿಯೋಗಳನ್ನು ನೋಡಿ ಅದು ಗೊತ್ತಾಗುತ್ತಿದೆ. ಹೆಣ್ಣು ಮಕ್ಕಳ ಗುಣಲಕ್ಷಣಗಳಿಗೆ ವಿರೋಧವಾಗಿ ಆಕೆಯ ನಡುವಳಿಕೆ ಇದೆ. ಬಿಜೆಪಿಯ ಹತ್ತಿರ ಈಗ ಯಾವುದೇ ಅಸ್ತ್ರವಿಲ್ಲ. ಬಿಜೆಪಿಯವರು ಕಾಂಗ್ರೆಸ್ ಮತದಾರರನ್ನ ಟಾರ್ಗೆಟ್ ಮಾಡುವ ಕೆಲಸ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ:ತುಮಕೂರಲ್ಲಿ ಭೀಕರ ರಸ್ತೆ ಅಪಘಾತ.. ನಾಲ್ವರು ಅಯ್ಯಪ್ಪಸ್ವಾಮಿ ಭಕ್ತರು ನಿಧನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us