ಇಂದಿನಿಂದ WPL: ಮಂದಾನ vs ಕೌರ್..! ಹೇಗಿದೆ ಬೆಂಗಳೂರು ಸೇನೆ..?

ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-4ಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಡಿ.ವೈ.ಪಾಟೀಲ್ ಸ್ಟೇಡಿಯಮ್​ನಲ್ಲಿ ನಡೆಯಲಿರೋ ಉದ್ಘಾಟನಾ ಪಂದ್ಯದಲ್ಲಿ, ಹಾಲಿ ಚಾಂಪಿಯನ್ಸ್​ ಮುಂಬೈ ಇಂಡಿಯನ್​​ ಮತ್ತು ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಮುಖಾಮುಖಿಯಾಗಲಿವೆ.

author-image
Ganesh Kerekuli
WPL (1)
Advertisment
  • ಇಂದಿನಿಂದ ವುಮೆನ್ಸ್ ಪ್ರೀಮಿಯರ್ ಲೀಗ್-4
  • RCBಗೆ ಬಲ ತುಂಬಿದ ವಿದೇಶಿ ಆಟಗಾರ್ತಿಯರು..!
  • ಬೆಂಗಳೂರು ತಂಡಕ್ಕೆ ಕಾಡುತ್ತಾ ಪೆರ್ರಿ ಅಲಭ್ಯತೆ..?

ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-4ಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಡಿ.ವೈ.ಪಾಟೀಲ್ ಸ್ಟೇಡಿಯಮ್​ನಲ್ಲಿ ನಡೆಯಲಿರೋ ಉದ್ಘಾಟನಾ ಪಂದ್ಯದಲ್ಲಿ, ಹಾಲಿ ಚಾಂಪಿಯನ್ಸ್​ ಮುಂಬೈ ಇಂಡಿಯನ್​​ ಮತ್ತು ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಮುಖಾಮುಖಿಯಾಗಲಿವೆ. ಎರಡು ಹೈಪ್ರೊಫೈಲ್​​ ಮತ್ತು ಬಲಿಷ್ಟ ತಂಡಗಳ ಜಿದ್ದಾಜಿದ್ದಿ ಫೈಟ್ ನೋಡಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ಇದನ್ನೂ ಓದಿ: ಆರ್​ಸಿಬಿಗೆ ದೊಡ್ಡ ಆಘಾತ.. ಕ್ಯಾಪ್ಟನ್ ಸೇರಿ 4 ಬಿಗ್​ ಸ್ಟಾರ್​ಗಳಿಗೆ ಇಂಜುರಿ..!

WPL (2)

ಡಿಫೆಂಡಿಂಗ್ ಚಾಂಪಿಯನ್ಸ್​ ಮುಂಬೈ ಇಂಡಿಯನ್ಸ್​​ಗೆ ಸವಾಲೆಸೆಯಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೆಡಿಯಾಗಿದೆ. ಮೆಗಾ ಹರಾಜಿನಲ್ಲಿ ಸೂಪರ್​ಸ್ಟಾರ್ ಆಟಗಾರ್ತಿಯರನ್ನ ಖರೀದಿ ಮಾಡಿದ್ದ ಆರ್​ಸಿಬಿ, ತಂಡವನ್ನ ಹಿಂದೆಗಿಂತಲೂ ಬಲಿಷ್ಟಗೊಳಿಸಿದೆ. ಕಳೆದ ವರ್ಷ ಫೈನಲ್ ತಲುಪಲು ವಿಫಲವಾಗಿದ್ದ ಬೆಂಗಳೂರು ತಂಡ ಈ ಬಾರಿ ಕಪ್ ಗೆಲ್ಲೋ ವಿಶ್ವಾಸದಲ್ಲಿದೆ.  

ಈ ಬಾರಿ ಆರ್​ಸಿಬಿ ಡಿಫರೆಂಟ್ ತಂಡವಾಗಿ ಕಾಣುತ್ತಿದೆ. ಹೊಸ ಜೋಷ್, ಹೊಸ ಅಧ್ಯಾಯ, ಹೊಸ ಇತಿಹಾಸ ನಿರ್ಮಿಸಲು ಮುಂದಾಗಿರುವ ಸ್ಮೃತಿ ಮಂದಾನ ಪಡೆಗೆ, ಆಲ್​ರೌಂಡರ್​​ಗಳು ಶಕ್ತಿ ತುಂಬಲಿದ್ದಾರೆ. ಜೊತೆಗೆ ಹೊಸದಾಗಿ ಸೇರ್ಪಡೆಯಾಗಿರೋ ಆಟಗಾರ್ತಿಯರು, ತಂಡದ ಜೋಷ್ ಮತ್ತಷ್ಟು ಹೆಚ್ಚಿಸಿದ್ದಾರೆ.    

RCBಗೆ ಬಲ ತುಂಬಿದ ವಿದೇಶಿ ಆಟಗಾರ್ತಿಯರು

ಲಾರೆನ್ ಬೆಲ್, ಗ್ರೇಸ್ ಹ್ಯಾರಿಸ್, ಲಿನ್ಸೆ ಸ್ಮಿತ್, ಜಾರ್ಜಿಯಾ ವೋಲ್, ನಾಡಿನ್ ಡಿ ಕ್ಲಾರ್ಕ್.. ಈ ಐವರು ವಿದೇಶಿ ಆಟಗಾರ್ತಿಯರು, ಬೆಂಗಳೂರು ತಂಡಕ್ಕೆ ಹೊಸದಾಗಿ ಸೇಪರ್ಡೆಯಾಗಿರೋ ಫಾರಿನ್ ಪ್ಲೇಯರ್ಸ್. ಈ ಐವರು ಸೂಪರ್​​ಸ್ಟಾರ್ ಆಟಗಾರ್ತಿಯರು ಮ್ಯಾಚ್​​​ ವಿನ್ನರ್ಸ್ ಆಗಿರೋದ್ರಿಂದ, ಇವರ ಎಂಟ್ರಿಯಿಂದ ಆರ್​ಸಿಬಿ ತಂಡ ಸಖತ್ ಸ್ಟ್ರಾಂಗ್ ಆಗಿ ಕಾಣುತ್ತಿದೆ.  

ಇದನ್ನೂ ಓದಿ:RCBನಲ್ಲಿ ಪವರ್​ ಹಿಟ್ಟರ್ಸ್.. ಸಿಂಹಿಣಿಯರು ಯುದ್ಧಕ್ಕೆ ರೆಡಿ..! 

WPL

ಪೆರ್ರಿ ಅಲಭ್ಯತೆ..?

ಆಸ್ಟ್ರೇಲಿಯಾದ ಖ್ಯಾತ ಆಲ್​ರೌಂಡರ್ ಎಲೀಸ್ ಪೆರ್ರಿ, ವೈಯಕ್ತಿಕ ಕಾರಣದಿಂದ ಈ ಬಾರಿ ವುಮೆನ್ಸ್ ಪ್ರೀಮಿಯರ್ ಲೀಗ್​ಗೆ ಅಲಭ್ಯರಾಗಿದ್ದಾರೆ. ಪೆರ್ರಿ ಅಲಭ್ಯತೆ ನೂರಕ್ಕೆ ನೂರರಷ್ಟು ಆರ್​ಸಿಬಿ ತಂಡವನ್ನ ಕಾಡಲಿದೆ. ಆದ್ರೆ ತಂಡದಲ್ಲಿ ಇರೋ ಆಲ್​ರೌಂಡರ್ಸ್​, ಪೆರ್ರಿ ಸ್ಥಾನವನ್ನ ತುಂಬೋ ಪ್ರಯತ್ನವಂತೂ ನಡೆಸಲಿದ್ದಾರೆ. ಕಳೆದ ಮೂರೂ ಸೀಸನ್​​ಗಳಲ್ಲಿ ಪೆರ್ರಿ ಅದ್ಭುತ ಪ್ರದರ್ಶನ ನೀಡಿದ್ರು. ಆದ್ರೆ ಪೆರ್ರಿ ಇಲ್ಲದ ಆರ್​ಸಿಬಿ ತಂಡ, ಸ್ವಲ್ಪ ಡಲ್ ಆದಂತೆ ಕಾಣುತ್ತದೆ.

ಇದನ್ನೂ ಓದಿ: WPLನಲ್ಲಿ ಕ್ಯಾಪ್ಟನ್ಸ್ ವಾರ್.. ಕುತೂಹಲ ಹೆಚ್ಚಿಸಿದ ಸಾರಥಿಗಳ ಸಮರ..!

Smriti and kour

ಆರ್​ಸಿಬಿ ತಂಡ ಬ್ಯಾಟಿಂಗ್, ಬೌಲಿಂಗ್​, ಫೀಲ್ಡಿಂಗ್​​​.. ಈ ಮೂರೂ ವಿಭಾಗಗಳಲ್ಲೂ ಬ್ಯಾಲೆನ್ಸ್ಡ್ ಆಗಿ ಕಾಣುತ್ತಿದೆ. ಟಿ-20 ಕ್ರಿಕೆಟ್​​ಗೆ ಹೇಳಿ ಮಾಡಿಸಿದಂತೆ ಕಾಣುವ ಬೆಂಗಳೂರು ತಂಡಕ್ಕೆ, ಯುವ ಪಡೆಯ ಶಕ್ತಿ ಇದೆ. ಜೊತೆಗೆ ಸೂಪರ್​ಸ್ಟಾರ್ ಆಟಗಾರ್ತಿ ಹಾಗೆ ತಂಡದ ನಾಯಕಿಯಾಗಿರುವ ಸ್ಮೃತಿ ಮಂದಾನ, ಬೆಂಗಳೂರು ತಂಡವನ್ನ ಗೆಲುವಿನ ಹಾದಿಯಲ್ಲಿ ಮುನ್ನಡೆಸುವ ಉತ್ಸಾಹದಲ್ಲಿದ್ದಾರೆ.

ಹಾಲಿ ಚಾಂಪಿಯನ್ಸ್​ ಮುಂಬೈ ಇಂಡಿಯನ್ಸ್​, ಮೆಗಾ ಹರಾಜಿನ ನಂತರ ಬ್ಯಾಲೆನ್ಸ್ ತಪ್ಪಿದಂತೆ ಕಾಣುತ್ತಿದೆ. ಹರ್ಮನ್ ಪಡೆಯಲ್ಲಿ ಅನುಭವಿ ಲೋಕಲ್ ಟ್ಯಾಲೆಂಟ್ಸ್​ ಇಲ್ಲ. ಆದ್ರೆ ಮುಂಬೈ, ವಿದೇಶಿ ಆಟಗಾರರ ಮೇಲೆ ಹೆಚ್ಚು ಡಿಪೆಂಡ್ ಆದಂತಿದೆ. ಇದೆಲ್ಲದರ ಜೊತೆಗೆ ಅನುಭವಿ ನಾಯಕ ಹರ್ಮನ್​ಪ್ರೀತ್​ಗೆ, ಟೈಟಲ್ ಡಿಫೆಂಡ್ ಮಾಡಿಕೊಳ್ಳೋ ದೊಡ್ಡ ಜವಾಬ್ದಾರಿ ಇರೋದ್ರಿಂದ, ಸಹಜವಾಗೇ ಒತ್ತಡ ಇದ್ದೇ ಇರುತ್ತದೆ.  

ವರ್ಷದ ಬಳಿಕ ವುಮೆನ್ಸ್ ಪ್ರೀಮಿಯರ್ ಲೀಗ್ ಶುರುವಾಗಲಿದೆ. ಹಾಗಾಗಿ ಕ್ರಿಕೆಟ್ ಅಭಿಮಾನಿಗಳಲ್ಲಿ, ಡಬ್ಲ್ಯೂ.ಪಿ.ಎಲ್ ಕ್ರೇಜ್ ಸಿಕ್ಕಾಪಟ್ಟೆ ಹೆಚ್ಚಾಗಿದೆ. ರೆಡ್ ಆರ್ಮಿ ವರ್ಸಸ್ ಬ್ಲೂ ಆರ್ಮಿ ಫೈಟ್ ನೋಡಲು, ತುದಿಗಾಲಲ್ಲಿ ನಿಂತಿದ್ದಾರೆ. 

ಇದನ್ನೂ ಓದಿ: ತುಮಕೂರಲ್ಲಿ ಭೀಕರ ರಸ್ತೆ ಅಪಘಾತ.. ನಾಲ್ವರು ಅಯ್ಯಪ್ಪಸ್ವಾಮಿ ಭಕ್ತರು ನಿಧನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

WPL 2026 RCB vs Mumbai Indians
Advertisment