/newsfirstlive-kannada/media/media_files/2026/01/08/rcb-wpl-2026-01-08-14-14-11.jpg)
ಮಹಿಳಾ ಪ್ರೀಮಿಯರ್​ ಲೀಗ್​ ಟೂರ್ನಿಯ​ ಸೀಸನ್​ 4 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. 2ನೇ ಟ್ರೋಫಿ ಗೆಲುವಿಗೆ ರೆಡ್​ ಆರ್ಮಿ, ಮುಂಬೈನಲ್ಲಿ ಭರ್ಜರಿ ಸಿದ್ಧತೆ ನಡೆಸ್ತಿದೆ. ಕಳೆದ ಸೀಸನ್​ಗೆ ಹೋಲಿಸಿದ್ರೆ ಈ ಬಾರಿ ಆರ್​​​ಸಿಬಿಯಲ್ಲಿ ಪವರ್​ಫುಲ್​ ಹಿಟ್ಟರ್​​ಗಳೇ​​ ದಂಡೇ ಇದೆ. ಬೌಂಡರಿ, ಸಿಕ್ಸರ್​ಗಳ ಸುರಿಮಳೆ ಸುರಿಸೋಕೆ ರೆಡ್​ ಆರ್ಮಿಯ ಸಿಂಹಿಣಿಯರು ರೆಡಿಯಾಗಿದ್ದಾರೆ.
T20 ಗೇಮ್​ನಲ್ಲಿ ನಡೆಯೋದೇ ಬಿಗ್ ಹಿಟ್ಟರ್ಸ್​ಗಳ ಭರಾಟೆ. ಈ ಬಾರಿ ಈ ಫಾರ್ಮುಲಾನಾ ಆರ್​​ಸಿಬಿ ಮ್ಯಾನೇಜ್​ಮೆಂಟ್​​ ಸ್ಪಷ್ಟವಾಗಿ ಅರ್ಥಮಾಡಿಕೊಂಡಂತಿದೆ. ಸಾಕಷ್ಟು ಲೆಕ್ಕಾಚಾರ ಹಾಕಿ, ಮೆಗಾ ಆಕ್ಷನ್​ನಲ್ಲಿ ಹಿಟ್ಟರ್ಸ್​ಗಳನ್ನ ಬೇಟೆಯಾಡಿದೆ. 2026 ಐಪಿಎಲ್​ನಿಂದ ಎಲ್ಲಿಸ್​ ಪೆರ್ರಿಯಂತ ಬಿಗ್​ ಸ್ಟಾರ್​ ಹೊರ ಬಿದ್ದಿದ್ರೂ ಆರ್​​ಸಿಬಿ ಬಲ ಕುಂದಿಲ್ಲ. ಈ ಐವರು ಸ್ಪೋಟಕ ಬ್ಯಾಟರ್ಸ್​ ಆರ್​​ಸಿಬಿ ಬ್ಯಾಟಿಂಗ್​ ಲೈನ್​ ಅಪ್​ ಬಲ ಹೆಚ್ಚಿಸಿದ್ದಾರೆ.
ಸ್ಮೃತಿ RCB ಶಕ್ತಿ
ಕ್ಯಾಪ್ಟನ್​ ಸ್ಮೃತಿ ಮಂದಾನ, ಆರ್​​ಸಿಬಿಯ ಬ್ಯಾಟಿಂಗ್​ನ ಶಕ್ತಿ. ಮಂದಾನ ಬ್ಯಾಟಿಂಗ್​ ಬಗ್ಗೆ ಹೆಚ್ಚೇನು ಹೇಳೋ ಅಗತ್ಯಾನೇ ಇಲ್ಲ. ದೇಶ, ವಿದೇಶಗಳಲ್ಲಿ ಮಂದಾನ ಬ್ಯಾಟ್​ನಿಂದ ಹಲವು ಮಾಸ್ಟರ್​​ಕ್ಲಾಸ್​​ ಇನ್ನಿಂಗ್ಸ್​ಗಳೇ ಕ್ಲಾಸ್​ & ಮಾಸ್​​ ಆಟದ ಕಥೆಯನ್ನ ಹೇಳ್ತವೆ. ಪವರ್​ ಪ್ಲೇನಲ್ಲೇ ಫವರ್​ಫುಲ್​ ಬ್ಯಾಟಿಂಗ್​ ನಡೆಸಿ ಚಿಂದಿ ಉಡಾಯಿಸೋ ತಾಖತ್ತು ಮಂದಾನಗಿದೆ. ಸ್ಮೃತಿ ಶೈನ್ ಆದ್ರೆ, ಆರ್​​ಸಿಬಿ ಕಟ್ಟಿ ಹಾಕೋರೆ ಇಲ್ಲ.
ಇದನ್ನೂ ಓದಿ: ಕೊನೆಯ ಎಸೆತದಲ್ಲಿ ಸಿಕ್ಸರ್, ದಾಖಲೆಯ ದ್ವಿಶತಕ.. ಅಮನ್ ಆಟಕ್ಕೆ ಶಮಿ, ಮುಕೇಶ್ ಸುಸ್ತು..!
/filters:format(webp)/newsfirstlive-kannada/media/media_files/2026/01/05/smriti-mandana-3-2026-01-05-13-40-07.jpg)
ಗ್ರೇಸ್​ ಹ್ಯಾರೀಸ್​ ರೆಡಿ..!
ಆಸ್ಟ್ರೇಲಿಯಾ ತಂಡದ ಬಿಗ್ ಹಿಟ್ಟರ್​​ ಗ್ರೇಸ್​ ಹ್ಯಾರೀಸ್​ ಈ ಬಾರಿ ಆರ್​​ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಓಪನರ್​, ಮಿಡಲ್​ ಆರ್ಡರ್​ ಬ್ಯಾಟರ್​ ಯಾವುದೇ ರೋಲ್​ ಕೊಡಲಿ ಬೌಲರ್​ಗಳ ಮಾರಣಹೋಮ ನಡೆಸೋದಕ್ಕೆ ಗ್ರೇಸ್​ ಹ್ಯಾರಿಸ್​ ಫೇಮಸ್​.! ಟಿ20 ಫಾರ್ಮೆಟ್​ನಲ್ಲಿ 155ಕ್ಕೂ ಅಧಿಕ ಸ್ಟ್ರೈಕ್​ರೇಟ್​ ಹೊಂದಿರೋ ಹ್ಯಾರೀಸ್​, ಬಿಗ್​ಬ್ಯಾಷ್​ನಲ್ಲಿ 3 ಸೆಂಚುರಿ ಸಿಡಿಸಿದ ದಾಖಲೆಯನ್ನೂ ಹೊಂದಿದ್ದಾರೆ.
ಆರ್​​ಸಿಬಿ ತಂಡದಲ್ಲಿ ಸಿಕ್ಸ್​ ಹಿಟ್ಟಿಂಗ್​ ಮಷೀನ್​..!
ಈ ಬಾರಿ ಆರ್​​ಸಿಬಿ ತಂಡದಲ್ಲಿ ಸಿಕ್ಸ್​ ಹಿಟ್ಟಿಂಗ್​ ಮಷೀನೇ ಇದೆ. ಕೆಲ ತಿಂಗಳ ಹಿಂದಷ್ಟೇ ಭಾರತದಲ್ಲೇ ಏಕದಿನ ವಿಶ್ವಕಪ್​ ನಡೀತಲ್ವಾ.? ಆ ಟೂರ್ನಿಯಲ್ಲಿ ಹೆಚ್ಚು ಸಿಕ್ಸರ್​ ಸಿಡಿಸಿದ ಲಿಸ್ಟ್​ನಲ್ಲಿ ಇರೋ 2ನೇ ಹೆಸರೇ ನಡಿನ್ ಡಿ ಕ್ಲರ್ಕ್​.! ಲೋವರ್​​ ಆರ್ಡರ್​ನಲ್ಲಿ ಕಣಕ್ಕಿಳಿದು ವಿಧ್ವಂಸ ಸೃಷ್ಟಿಸಬಲ್ಲ ಸೌತ್​ ಆಫ್ರಿಕಾ ಸ್ಟಾರ್​​, ಈ ಬಾರಿ ಆರ್​​ಸಿಬಿಯ ಸ್ಟ್ರೆಂಥ್​ ಎನಿಸಿದ್ದಾರೆ.
ಇದನ್ನೂ ಓದಿ: ಕಹಿ ಘಟನೆ ಮರೆತು.. ಹೊಸ ವರ್ಷದಲ್ಲಿ ಹೊಸ ಬದುಕಿಗೆ ಸಜ್ಜಾಗ್ತಿದ್ದಾರೆ ಬಿಗ್ ಸ್ಟಾರ್ಸ್​..!
𝗥𝗲𝗱 𝗥𝘂𝗻𝘀 𝗗𝗲𝗲𝗽 𝗳𝘁. 𝗦𝗵𝗿𝗲𝘆𝗮𝗻𝗸𝗮 𝗣𝗮𝘁𝗶𝗹❤️🔥
— Royal Challengers Bengaluru (@RCBTweets) January 7, 2026
A smile on the surface, fire underneath,
She's focused, she’s fearless, and she’s ready to #PlayBold. ❤️🔥
12th Man Army, ready for ನಮ್ಮ Shreyanka’s blockbuster outings?#ನಮ್ಮRCB#WPL2026pic.twitter.com/c0zNpWBYsa
ಜಾರ್ಜಿಯಾ ವೋಲ್​... ಆಸ್ಟ್ರೇಲಿಯಾದ ಯಂಗ್​​ ಅಂಡ್ ಎನರ್ಜಿಟಿಕ್​ ಪ್ಲೇಯರ್​. ಬಿಗ್​​ಬ್ಯಾಷ್​ ಲೀಗ್​, 100 ಲೀಗ್​ನಲ್ಲಿ ಬೆಂಕಿ ಬ್ಯಾಟಿಂಗ್​ನಿಂದಲೇ ಗಮನ ಸೆಳೆದ ಆಟಗಾರ್ತಿ. ಕಳೆದ ಸೀಸನ್​ WPLನಲ್ಲೂ 167ರ ಸ್ಟ್ರೇಕ್​ರೇಟ್​​ನಲ್ಲಿ ಘರ್ಜಿಸಿದ್ರು. ಅದ್ರಲ್ಲೂ, ಆರ್​​ಸಿಬಿ ಎದುರಿನ ಪಂದ್ಯದಲ್ಲೇ ಸ್ಪೋಟಕ 99 ರನ್​ ರನ್​ಗಳ ಇನ್ನಿಂಗ್ಸ್​ ಕಟ್ಟಿದ್ದನ್ನ ಮರೆಯೋಕಾಗುತ್ತಾ.? ಸಿಂಗಲ್​ ಹ್ಯಾಂಡೆಡ್ಲಿ ಗೇಮ್​ ಜೇಂಜ್​ ಮಾಡೋ ಸಾಮರ್ಥ್ಯ ಹೊಂದಿರೋ ಜಾರ್ಜಿಯಾ ವೋಲ್ ಎಂಟ್ರಿಯಿಂದ ರೆಡ್​​ ಆರ್ಮಿಯ ಬಲ ಹೆಚ್ಚಿದೆ.
ಲಾಸ್ಟ್​ ಬಟ್​ ನಾಟ್​ ಲೀಸ್ಟ್​.. ಚೋಟಾ ಪ್ಯಾಕೆಟ್​ ಭಡಾ ಧಮಾಕಾ.. ಜಸ್ಟ್​ 22 ವರ್ಷ ವಯಸ್ಸಿಗೆ ದಿಗ್ಗಜ ಬೌಲರ್​ಗಳ ಎದೆಯಲ್ಲೇ ನಡುಕ ಹುಟ್ಟಿಸಿರೋ ರಿಚಾ ಘೋಷ್​, ಆರ್​​ಸಿಬಿ ಲೋವರ್​ ಆರ್ಡರ್​​ ರಿಯಲ್​ ಸ್ಟ್ರೆಂಥ್​.! ಡೆತ್​ ಓವರ್​​ಗಳಲ್ಲಿ ಬೌಂಡರಿ, ಸಿಕ್ಸರ್​ಗಳ ಸುರಿಮಳೆಯನ್ನೇ ಸುರಿಸೋ ರಿಚಾ ಘೋಷ್​, ಈ ಸೀಸನ್​​ನಲ್ಲೂ ಪವರ್​​ ಹಿಟ್ಟಿಂಗ್​ ಬ್ಯಾಟಿಂಗ್​ ನಡೆಸೋಕೆ ಸಜ್ಜಾಗಿದ್ದಾರೆ.
ಈ ಸೀಸನ್​ನಲ್ಲಿ ಪವರ್​ ಹಿಟ್ಟರ್​ಗಳ ದಂಡೇ ಆರ್​​ಸಿಬಿ ತಂಡದಲ್ಲಿದೆ. ನಿರೀಕ್ಷೆಯಂತೆ ಇವರೆಲ್ಲಾ ಸಿಡಿದೆದ್ರೆ, ರಾಯಲ್​​​ ಚಾಲೆಂಜರ್ಸ್​ನ ಬೆಂಗಳೂರು 2ನೇ ಟ್ರೋಫಿ ಗೆಲ್ಲೋದ್ರಲ್ಲಿ ಅನುಮಾನವೇ ಬೇಡ.
ಇದನ್ನೂ ಓದಿ: ‘ಟಾಕ್ಸಿಕ್’​ನಲ್ಲಿ ಯಶ್ ಕಿವಿ ಕಚ್ಚಿದ ನಟಿ ಯಾರು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us