ಕೊನೆಯ ಎಸೆತದಲ್ಲಿ ಸಿಕ್ಸರ್, ದಾಖಲೆಯ ದ್ವಿಶತಕ.. ಅಮನ್ ಆಟಕ್ಕೆ ಶಮಿ, ಮುಕೇಶ್ ಸುಸ್ತು..!

ಹೈದ್ರಾಬಾದ್ ತಂಡದ ಆರಂಭಿಕ ಬ್ಯಾಟ್ಸ್​ಮನ್ ಅಮನ್ ರಾವ್ ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಬೆಂಗಾಲ್ ವಿರುದ್ಧ ನಡೆದ ವಿಜಯ್ ಹಜಾರೆ ಟೂರ್ನಿಯಲ್ಲಿ ಪಂದ್ಯದಲ್ಲಿ ಅಮನ್, ಅಜೇಯ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.

author-image
Ganesh Kerekuli
Aman roa (1)
Advertisment
  • 3ನೇ ಪಂದ್ಯದಲ್ಲಿ ಐತಿಹಾಸಿಕ ದಾಖಲೆಯ ಬ್ಯಾಟಿಂಗ್..!
  • ಅಮನ್ ಆಟಕ್ಕೆ ಶಮಿ, ಆಕಾಶ್​ದೀಪ್, ಮುಕೇಶ್ ಸುಸ್ತು
  • ಮುಷ್ತಾಕ್ ಅಲಿ T20 ಟೂರ್ನಿಯಲ್ಲಿ ಶಾರ್ದುಲ್ ಶಾಕ್ ಆಗಿದ್ದರು

ಹೈದ್ರಾಬಾದ್ ತಂಡದ ಆರಂಭಿಕ ಬ್ಯಾಟ್ಸ್​ಮನ್ ಅಮನ್ ರಾವ್ ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಬೆಂಗಾಲ್ ವಿರುದ್ಧ ನಡೆದ ವಿಜಯ್ ಹಜಾರೆ ಟೂರ್ನಿಯಲ್ಲಿ ಪಂದ್ಯದಲ್ಲಿ ಅಮನ್, ಅಜೇಯ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಬೆಂಗಾಲ್​ನ ಸೂಪರ್​ಸ್ಟಾರ್ ಬೌಲರ್​ಗಳನ್ನ ಬೆಂಡೆತ್ತಿದ್ದ ಹೈದ್ರಾಬಾದ್ ಬ್ಯಾಟರ್, ರಾಜ್​ಕೋಟ್​ನಲ್ಲಿ ರನ್​​ಮಳೆ ಸುರಿಸಿದ್ರು.

ವಯಸ್ಸು 21! ಆಡಿದ್ದು ಕೇವಲ ಎರಡೇ ಎರಡು ಲಿಸ್ಟ್ 'ಎ' ಪಂದ್ಯಗಳು. ಆದ್ರೆ ಮೂರನೇ ಪಂದ್ಯದಲ್ಲೇ ಈ ಯುವ ಬ್ಯಾಟ್ಸ್​ಮನ್, ಐತಿಹಾಸಿಕ ದಾಖಲೆ ನಿರ್ಮಿಸಿದ್ದಾನೆ. ಹೈದ್ರಾಬಾದ್ ತಂಡದ ಅಗ್ರೆಸಿವ್ ಬ್ಯಾಟರ್ ಅಮನ್ ರಾವ್, ವಿಜಯ್ ಹಜಾರೆ ಟೂರ್ನಿಯಲ್ಲಿ, ಎಲ್ಲರ ಹುಬ್ಬೇರುವಂತೆ ಬ್ಯಾಟಿಂಗ್ ನಡೆಸಿದ್ದಾನೆ. ಘಟಾನುಘಟಿ ಬೌಲರ್​ಗಳನ್ನ ಬೆಂಡೆತ್ತಿದ್ದಾನೆ. ರಾಜ್​ಕೋಟ್​ನಲ್ಲಿ ಅಮನ್ ರಾವ್ ದರ್ಬಾರ್​ಗೆ, ದಿಗ್ಗಜ ಕ್ರಿಕೆಟಿಗರೇ ಶಹಬ್ಬಾಸ್ ಎಂದಿದ್ದಾರೆ.    

ಇದನ್ನೂ ಓದಿ:RCBಗೆ ಹೊಸ ಸುಂದರಿಯ ಎಂಟ್ರಿ.. ಸೆನ್ಸೇಷನ್ ಸೃಷ್ಟಿಸಿದ ವಿಡಿಯೋ

ಬರೋಡಾ ವಿರುದ್ಧ ಲಿಸ್ಟ್ 'ಎ' ಪಂದ್ಯಕ್ಕೆ ಡೆಬ್ಯೂ ಮಾಡಿದ್ದ ಅಮನ್ ರಾವ್, 39 ರನ್​ಗಳಿಸಿದ್ರು. ನಂತರ ಚಂಡೀಗಢ ವಿರುದ್ಧ 13 ರನ್​ಗಳಿಸಿದ್ದ ಅಮನ್, 3ನೇ ಪಂದ್ಯದಲ್ಲಿ ಇದಕ್ಕಿದಂತೆ ಸಿಡಿದೆದ್ದಿದ್ದಾರೆ. ಬೆಂಗಾಲ್​ ಬೌಲರ್​ಗಳನ್ನ ಮನಬಂದಂತೆ ಚಚ್ಚಿದ್ದ ಹೈದ್ರಾಬಾದ್​ನ 21 ವರ್ಷದ ಯುವ ಬ್ಯಾಟ್ಸ್​ಮನ್, ಲಿಸ್ಟ್ 'ಎ' ಕ್ರಿಕೆಟ್​ನಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದ್ರು.​ 

ಕೊನೆಯ ಎಸೆತದಲ್ಲಿ ಸಿಕ್ಸರ್, ದಾಖಲೆಯ ದ್ವಿಶತಕ..!

107 ಎಸೆತಗಳಲ್ಲಿ ಅಮನ್ ರಾವ್ ಶತಕ ಪೂರೈಸಿದ್ರು. ಶತಕ ನಂತರ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಆರಂಭಿಕ ಅಮನ್, ಕೇವಲ 47 ಎಸೆತಗಳಲ್ಲಿ ಉಳಿದ ನೂರು ರನ್​​ ಕಲೆ ಹಾಕಿದ್ರು. ಕೊನೆಯ ಎಸೆತದಲ್ಲಿ ಅಮನ್​​ಗೆ ದ್ವಿಶತಕ ಪೂರೈಸಲು, 6 ರನ್​ ಅವಶ್ಯಕತೆ ಇತ್ತು. ಟೀಮ್ ಇಂಡಿಯಾ ವೇಗಿ ಆಕಾಶ್​ದೀಪ್ ಬೌಲಿಂಗ್​ನಲ್ಲಿ ಸಿಕ್ಸರ್ ಸಿಡಿಸೋ ಮೂಲಕ, ಡಬಲ್ ಸೆಂಚುರಿ ಪೂರೈಸಿದ್ರು.  

ಇದನ್ನೂ ಓದಿ:ನಟಿ ರಮ್ಯಾ ಮತ್ತೊಂದು ಪೋಸ್ಟ್​.. ಇವಾಗ ಏನಂದ್ರು..?

Aman roa

ಬೆಂಗಾಲ್ ವಿರುದ್ಧ ಅಮನ್ ಬ್ಯಾಟಿಂಗ್ ನಿಜಕ್ಕೂ ಎಕ್ಸ್ಟ್ರಾರ್ಡಿನರಿ. ಬಲಿಷ್ಟ ಬೌಲಿಂಗ್ ಅಟ್ಯಾಕ್ ಹೊಂದಿದ್ದ ಬೆಂಗಾಲ್​​​​​​, ಅಮನ್ ಆಟಕ್ಕೆ ತಲೆಬಾಗಿದೆ. ತಂಡದಲ್ಲಿ ಮೊಹಮ್ಮದ್ ಶಮಿ, ಆಕಾಶ್​ದೀಪ್, ಮುಕೇಶ್ ಕುಮಾರ್ ಮತ್ತು ಶಹಬಾಜ್ ಅಹ್ಮದ್​ರಂತಹ ಅಂತರಾಷ್ಟ್ರೀಯ ಆಟಗಾರರಿದ್ರು. ಅನುಭವಿ ಮತ್ತು ಘಟಾನುಘಟಿ ಬೌಲರ್​ಗಳೇ ವಿರುದ್ಧವೇ ಅಮನ್ ರನ್​​​ ಸ್ಕೋರ್ ಮಾಡಿದ್ದಾರೆ. ಅಮನ್ ಬ್ಯಾಟಿಂಗ್ ನೋಡಿ, ಬೆಂಗಾಲ್​ನ ಸೂಪರ್​ಸ್ಟಾರ್ ಬೌಲರ್​​​ಗಳೇ ಸುಸ್ತಾಗಿದ್ದಾರೆ.  

T20  ಟೂರ್ನಿಯಲ್ಲಿ ಶಾರ್ದುಲ್ ಶಾಕ್

ಕಳೆದ ವರ್ಷ ಡಿಸೆಂಬರ್​ ತಿಂಗಳಲ್ಲಿ ನಡೆದ ಸೈಯ್ಯದ್ ಮುಷ್ತಾಕ್ ಅಲಿ ಟಿ-ಟ್ವೆಂಟಿ ಟೂರ್ನಿಯಲ್ಲೂ ಅಮನ್ ರಾವ್, ಭಾರೀ ಸದ್ದು ಮಾಡಿದ್ರು. ಮುಂಬೈ ವಿರುದ್ಧದ ಪಂದ್ಯದಲ್ಲಿ ಅಮನ್, ಒಂದೇ ಓವರ್​ನಲ್ಲಿ 2 ಸಿಕ್ಸರ್ ಮತ್ತು 3 ಬೌಂಡರಿ ಸೇರಿದಂತೆ ಒಟ್ಟು 24 ರನ್​ ಸಿಡಿಸಿದ್ರು. ಅದು ಟೀಮ್ ಇಂಡಿಯಾ ಆಟಗಾರ ಶಾರ್ದುಲ್ ಠಾಕೂರ್ ಬೌಲಿಂಗ್​ನಲ್ಲಿ. ಅಂದು ಪುಣೆಯಲ್ಲಿ ಅಮನ್ ಆಟ ನೋಡಿದ ಮುಂಬೈಕರ್ಸ್​, ಶಾಕ್ ಆಗಿದ್ರು. 

ಅಗ್ರೆಸಿವ್ ಮತ್ತು ಬಿಗ್ ಹಿಟ್ಟಿಂಗ್​ಗೆ ಹೆಸರುವಾಸಿಯಾದ ಹೈದ್ರಾಬಾದ್​ ಬ್ಯಾಟರ್​​, ವೈಟ್​ಬಾಲ್ ಕ್ರಿಕೆಟ್​​​ಗೆ ಹೇಳಿ ಮಾಡಿಸಿದ ಆಟಗಾರ. ಕರಿಯರ್ ಆರಂಭದಲ್ಲೇ ಸಾಕಷ್ಟು ಸದ್ದು ಮಾಡಿರುವ ಅಮನ್, ಕಳೆದ ವರ್ಷ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ 30 ಲಕ್ಷ ರೂಪಾಯಿಗೆ, ರಾಜಸ್ಥಾನ್ ರಾಯಲ್ಸ್ ಪಾಲಾದ್ರು. ಅಮನ್ ಹುಟ್ಟಿದ್ದು ಅಮೇರಿಕಾದಲ್ಲಾದ್ರೂ, ಕ್ರಿಕೆಟ್​​​​ ಕರಿಯರ್ ಶುರುಮಾಡಿದ್ದು, ಹೈದ್ರಾಬಾದ್​ನಿಂದಲೇ.
ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಸಾಕಷ್ಟು ಯುವ ಕ್ರಿಕೆಟಿಗರು ಬೆಳಕಿಗೆ ಬರ್ತಿದ್ದಾರೆ. ಆದ್ರೆ ಅಮನ್​ರಂತಹ ಕ್ವಾಲಿಟಿ, ಸ್ಕಿಲ್ಡ್, ಟ್ಯಾಲೆಂಟೆಡ್ ಯಂಗ್ ಕ್ರಿಕೆಟರ್, ಮತ್ತೆ ಸಿಗೋದಕ್ಕೆ ಸಾಧ್ಯವಿಲ್ಲ. 

ಇದನ್ನೂ ಓದಿ: ಟಾಕ್ಸಿಕ್​ ಟೀಸರ್​ ರಿಲೀಸ್! ಌಕ್ಷನ್ ಪ್ಯಾಕ್ಡ್ ದೃಶ್ಯದಲ್ಲಿ ಯಶ್​ ಫುಲ್ ರಾಕಿಂಗ್..! VIDEO

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Aman Rao
Advertisment