/newsfirstlive-kannada/media/media_files/2026/01/08/hardik-pandya-14-2026-01-08-11-33-48.jpg)
ಹೊಸ ವರ್ಷ, ಹೊಸ ಹುರುಪು, ಹೊಸ ಜೀವನ.. ಕಳೆದ ವರ್ಷದಲ್ಲಿ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳು-ಬೀಳನ್ನ ಕಂಡ ಶಿಖರ್​ ಧವನ್​, ಹಾರ್ದಿಕ್​ ಪಾಂಡ್ಯ 2026ಕ್ಕೆ ಕಾಲಿಡ್ತಿದ್ದಂತೆ ಬಿಗ್​ ಡಿಸಿಷನ್​ ತೆಗೆದುಕೊಂಡಿದ್ದಾರೆ. ಒಂಟಿಯಾಗಿದ್ದ ಸ್ಟಾರ್​ ಕ್ರಿಕೆಟರ್ಸ್​ ಈ ವರ್ಷದಲ್ಲಿ ಜಂಟಿಯಾಗೋಕೆ ರೆಡಿಯಾಗಿದ್ದಾರೆ. ಬಹುಕಾಲದ ಗೆಳತಿಯರೊಂದಿಗೆ 2ನೇ ವಿವಾಹವಾಗೂ ಗುಡ್​ ನ್ಯೂಸ್​ ಕೊಟ್ಟಿದ್ದಾರೆ. ಹಾಗಾದ್ರೆ ಮದುವೆ ಯಾವಾಗ ಅನ್ನೋ ವಿವರ ಇಲ್ಲಿದೆ.
ಹೊಸ ವರ್ಷಕ್ಕೆ ಕಾಲಿಡ್ತಿದ್ದಂತೆ ಭಾರತೀಯ ಕ್ರಿಕೆಟ್ ವಲಯದಲ್ಲಿ ಗುಡ್​ನ್ಯೂಸ್​ ಮೇಲೆ ಗುಡ್​ನ್ಯೂಸ್​ ಕೇಳಿ ಬರ್ತಿವೆ. ಆಫ್​​ ದ ಫೀಲ್ಡ್​ನ ಕಹಿ ನೆನಪನ್ನ ಮರೆತು ಹೊಸ ಹುರುಪಿನೊಂದಿಗೆ 2026ನ್ನ ಆರಂಭಿಸಲು ಇಂಡಿಯನ್​ ಕ್ರಿಕೆಟರ್ಸ್​​ ಸಜ್ಜಾಗಿದ್ದಾರೆ. ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ ಶಿಖರ್​ ಧವನ್​ ಹಾಗೂ ಆಲ್​​ರೌಂಡರ್​​ ಹಾರ್ದಿಕ್​ ಪಾಂಡ್ಯ 2026ರಲ್ಲಿ ಹೊಸ ಜೀವನವನ್ನೇ ಆರಂಭಿಸೋಕೆ ರೆಡಿಯಾಗಿದ್ದಾರೆ. ಇಷ್ಟು ದಿನ ಒಂಟಿಯಾಗಿದ್ದ ಸ್ಟಾರ್​​ ಕ್ರಿಕೆಟರ್ಸ್,​ ಈ ವರ್ಷ ಜಂಟಿಯಾಗಲಿದ್ದಾರೆ.
ಇದನ್ನೂ ಓದಿ: ಕೊನೆಯ ಎಸೆತದಲ್ಲಿ ಸಿಕ್ಸರ್, ದಾಖಲೆಯ ದ್ವಿಶತಕ.. ಅಮನ್ ಆಟಕ್ಕೆ ಶಮಿ, ಮುಕೇಶ್ ಸುಸ್ತು..!
/filters:format(webp)/newsfirstlive-kannada/media/media_files/2026/01/06/shikhar-dhawan-and-sophie-shine-1-2026-01-06-07-31-29.jpg)
ಹೊಸ ವರ್ಷಕ್ಕೆ ಧವನ್​​ ಹೊಸ ಜೀವನ
ಕ್ರಿಕೆಟ್​​ನಿಂದ ದೂರ.. ಹೆಂಡತಿಯಿಂದ ಡಿವೋರ್ಸ್​.. ಮಗನನ್ನ ನೋಡಲಾಗದ, ಮಾತನಾಡಿಸಲಾದ ದುಸ್ಥಿತಿ... 2025ರಲ್ಲಿ ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ ಶಿಖರ್​ ಧವನ್​ ಸಾಲು ಸಾಲು ಆಘಾತಗಳನ್ನ ಎದುರಿಸಿದ್ರು. ಇದೀಗ 2026ರ ಆರಂಭದಲ್ಲೇ ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ ಶಿಖರ್​ ಧವನ್​ ಗುಡ್​ನ್ಯೂಸ್​ ಕೊಟ್ಟಿದ್ದಾರೆ. ಹೊಸ ಹುರುಪಿನೊಂದಿಗೆ ಹೊಸ ವರ್ಷದಲ್ಲಿ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮೊದಲ ಪತ್ನಿಯಿಂದ ದೂರಾದ ಬಳಿಕ ಒಂಟಿಯಾಗಿದ್ದ ಧವನ್, ಜಂಟಿಯಾಗ್ತಿದ್ದಾರೆ. ಗೆಳತಿ ಸೋಫಿ ಶೈನ್​ ಜೊತೆಗೆ ಕೆಲವೇ ದಿನಗಳಲ್ಲಿ ಹಸೆಮಣೆ ಏರಲು ಮುಂದಾಗಿದ್ದಾರೆ.
ಫೆಬ್ರವರಿ 3ನೇ ವಾರದಲ್ಲಿ ಅದ್ದೂರಿ ವಿವಾಹ.!
ಶಿಖರ್​​ ಧವನ್​ 2ನೇ ವಿವಾಹಕ್ಕೆ ಮುಹೂರ್ತ ಫಿಕ್ಸ್​ ಆಗಿದೆ. ಫೆಬ್ರವರಿ 3ನೇ ವಾರದಲ್ಲಿ ಶಿಖರ್​ ಧವನ್​ ಗೆಳತಿ ಸೋಫಿ ಶೈನ್​ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ವಿವಾಹ ಅದ್ಧೂರಿಯಾಗಿ ನಡೆಯಲಿದ್ದು, ದೆಹಲಿಯಲ್ಲಿ ಕಾರ್ಯಕ್ರಮ ಆಯೋಜನೆಗೆ ಈಗಾಗಲೇ ಸಿದ್ಧತೆ ಆರಂಭವಾಗಿದೆ. ಹಾಲಿ ಹಾಗೂ ಮಾಜಿ ಕ್ರಿಕೆಟರ್ಸ್​, ದೇಶದ ಸೆಲಬ್ರಿಟಿಗಳು, ಉದ್ಯಮಿಗಳು ಸೇರಿದಂತೆ ಪ್ರಮುಖರಿಗೆ ಈಗಾಗಲೇ ಅಧಿಕೃತವಾಗಿ ಆಹ್ವಾನವನ್ನೂ ನೀಡಲಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.
ಇದನ್ನೂ ಓದಿ:ನಟಿ ರಮ್ಯಾ ಮತ್ತೊಂದು ಪೋಸ್ಟ್​.. ಇವಾಗ ಏನಂದ್ರು..?
/filters:format(webp)/newsfirstlive-kannada/media/media_files/2025/12/20/hardik-pandya-flying-kiss-to-mehika-sharma-2-2025-12-20-13-26-35.jpg)
ಮಗ, ಪತ್ನಿ ದೂರಾದ ಬೇಸರ, ಆನ್​​ಫೀಲ್ಡ್​ನ ವೈಫಲ್ಯಗಳಿಂದ ಕುಸಿದು ಹೋಗಿದ್ದ ಧವನ್​, ಡಿಪ್ರೆಶನ್​ಗೆ ಜಾರಿದ್ರು. ಇಂತಾ ಸಂಕಷ್ಟದಲ್ಲಿದ್ದಾಗಲೇ ಧವನ್​ ಜೊತೆಯಾಗಿದ್ದೇ ಸೋಫಿ ಶೈನ್​.! ಗೆಳತಿಯಾಗಿ ಪರಿಚಯವಾದ ಐರ್ಲೆಂಡ್​ ದೇಶದ ಬೆಡಗಿ ಕಗ್ಗತ್ತಲು ಕವಿದಿದ್ದ ಧವನ್​ ಬಾಳಿಗೆ ಬೆಳಕಾಗಿದ್ರು. ಆರಂಭದಲ್ಲಿ ಗೆಳತನಕ್ಕೆ ಸೀಮಿತವಾಗಿದ್ದ ಸಂಬಂಧ, ಬಳಿಕ ಪ್ರೀತಿಗೆ ತಿರುಗಿ, ಇದೀಗ ಹಸೆಮಣೆ ಏರುವ ಹಂತಕ್ಕೆ ಬಂದಿದೆ.
ಹಾರ್ದಿಕ್​ ‘ಸೆಕೆಂಡ್​ ಇನ್ನಿಂಗ್ಸ್’​ಗೆ ಸಿದ್ಧತೆ
ಶಿಖರ್​ ಧವನ್​ ಜೊತೆಗೆ ಟೀಮ್​ ಇಂಡಿಯಾ ಆಲ್​​ರೌಂಡರ್​ ಹಾರ್ದಿಕ್​ ಪಾಂಡ್ಯ ಕೂಡ ಸೆಕೆಂಡ್​ ಇನ್ನಿಂಗ್ಸ್​ ಆರಂಭಿಸೋಕೆ ಸಜ್ಜಾಗಿದ್ದಾರೆ. ಕಳೆದ ಕೆಲ ತಿಂಗಳಿಂದ ಹಾರ್ದಿಕ್​ ಜೊತೆ ಪದೇ ಪದೇ ಕಾಣಿಸಿಕೊಳ್ತಿದ್ದಾರಲ್ವಾ.? ಮಹೈಕಾ ಶರ್ಮಾ, ಆಕೆಯ ಜೊತೆಗೆ 2ನೇ ವಿವಾಹಕ್ಕೆ ಸದ್ದಿಲ್ಲದೇ ಸಿದ್ಧತೆ ನಡೀತಾ ಇದೆ ಎಂಬ ಸುದ್ದಿ ಹೊರಬಿದ್ದಿದೆ. ಡೇಟ್​ ಹಾಗೂ ಸ್ಥಳ ಇನ್ನೂ ಫೈನಲ್​ ಆಗಿಲ್ಲ. ಆದ್ರೆ, ಅದ್ಧೂರಿ ವಿವಾಹಕ್ಕೆ ಪ್ಲ್ಯಾನಿಂಗ್​ ಎಲ್ಲಾ ಸಿದ್ಧವಾಗಿದೆ ಅನ್ನೋ ಗುಡ್​ನ್ಯೂಸ್​​ ಹೊರಬಿದ್ದಿದೆ.
ಧವನ್​ ರೀತಿಯಲ್ಲೇ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಮೊದಲ ಹೆಂಡತಿ ಜೊತೆ ಡಿವೋರ್ಸ್​ ಆದ ಬಳಿಕ ಸಾಕಷ್ಟು ಏಳು ಬೀಳುಗಳನ್ನ ಕಂಡಿದ್ದಾರೆ. ಪತ್ನಿ ದೂರಾದ ಬಳಿಕ ಮಾನಸಿಕ ತೊಳಲಾಟ ಅನುಭವಿಸಿದ್ರು. ಆದ್ರೆ, ಮಹೈಕಾ ಶರ್ಮಾ, ಹಾರ್ದಿಕ್ ಬಾಳಲ್ಲಿ ಬಂದ ಬಳಿಕ ಹಾರ್ದಿಕ್​ ಜೀವನ ಮತ್ತೆ ರೈಟ್​ ಟ್ರ್ಯಾಕ್​​ಗೆ ಬಂದಿದ್ದು ಸುಳ್ಳಲ್ಲ. ಕೆಲ ದಿನಗಳ ಹಿಂದ ಸೌತ್​ ಆಫ್ರಿಕಾ ಸರಣಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್​ ನಡೆಸಿದ್ದ ಹಾರ್ದಿಕ್​, ಬಹಿರಂಗವಾಗೇ ಸಕ್ಸಸ್​​​ಗೆ ಗೆಳತಿ, ಸಂಗಾತಿ ಮಹೈಕಾ ಶರ್ಮಾಗೆ ಕ್ರೆಡಿಟ್ ಕೊಟ್ಟಿದ್ರು. ಮಹೈಕಾ ಆಗಮನದ ಬಳಿಕ ಜೀವನವೇ ಬದಲಾಗಿದೆ ಎಂದಿದ್ರು. ಅದೇ ಗೆಳತಿಯೊಂದಿಗೆ ದಾಂಪತ್ಯ ಜೀವನವನ್ನ ಆರಂಭಿಸೋಕೆ ಹಾರ್ದಿಕ್ ಮುಂದಾಗಿದ್ದಾರೆ.
ಅದೇನೋ ಗೊತ್ತಿಲ್ಲ.. ಈ ಸೆಕೆಂಡ್​ ಇನ್ನಿಂಗ್ಸ್​ ಅನ್ನೋದು ಕ್ರಿಕೆಟರ್ಸ್​ ಪಾಲಿಗೆ ಒಂತಾರಾ ಲಕ್ಕಿ. ಇದಕ್ಕೆ ಬೆಸ್ಟ್​ ಎಕ್ಸಾಂಪಲ್​ ದಿನೇಶ್​ ಕಾರ್ತಿಕ್​. ನೊಂದು-ಬೆಂದ ಕಾರ್ತಿಕ್​ ಇಂದು ನೆಮ್ಮದಿಯ ಜೀವನ ನಡೆಸ್ತಿದ್ದಾರೆ. ಅದೇ ರೀತಿ ಶಿಖರ್​ ಧವನ್​, ಹಾರ್ದಿಕ್​ ಪಾಂಡ್ಯಾಗೂ ನೆಮ್ಮದಿಯ ಜೀವನ ಸಿಗಲಿ.
ಇದನ್ನೂ ಓದಿ:ಬೆಂಗಳೂರು ಜನರೇ ಅಲರ್ಟ್​.. ನಿಮಗಾಗಿ ಎಚ್ಚರಿಕೆಯ ಸಂದೇಶ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us