/newsfirstlive-kannada/media/media_files/2025/12/21/bengaluru-city-3-2025-12-21-15-11-27.jpg)
ಬೆಂಗಳೂರು, ಮಂಗಳೂರು, ಮೈಸೂರು ಜನರೇ ಎಚ್ಚರ. ಗಾಳಿಯ ಗುಣಮಟ್ಟದಲ್ಲಿ ಭಾರೀ ಇಳಿಕೆಯಾಗಿದ್ದು, ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ದಟ್ಟವಾಗಿದೆ.
ವಾಯು ಗುಣಮಟ್ಟವು (AQI) ಚಳಿಗಾಲ ಮತ್ತು ವಾಹನ ದಟ್ಟಣೆಯಿಂದಾಗಿ ಕೆಲವು ಪ್ರಮುಖ ನಗರಗಳಲ್ಲಿ ಹದಗೆಟ್ಟಿದೆ. ಬೆಂಗಳೂರಿನ ಹೆಬ್ಬಾಳ, ಬಿಟಿಎಂ, ಪೀಣ್ಯದಲ್ಲಿ ಮಾಲಿನ್ಯ ಹೆಚ್ಚಿದ್ದು, ಅನಾರೋಗ್ಯಕರ ಮಟ್ಟ ತಲುಪಿದೆ.
ಇದನ್ನೂ ಓದಿ:ನಟಿ ರಮ್ಯಾ ಮತ್ತೊಂದು ಪೋಸ್ಟ್​.. ಇವಾಗ ಏನಂದ್ರು..?
ಉಸಿರಾಟದ ಸಮಸ್ಯೆ ಇರೋರು ಎನ್-95 ಮಾಸ್ಕ್ ಧರಿಸುವುದು, ಬೆಳಗಿನ ವಾಕಿಂಗ್ ತಪ್ಪಿಸುವುದು ಉತ್ತಮ. ಗಿಡಗಳನ್ನು ಬೆಳೆಸಿ, ಏರ್ ಪ್ಯೂರಿಫೈಯರ್ ಬಳಸಲು ತಜ್ಞರು ಸಲಹೆ ನೀಡಿದ್ದಾರೆ. ಬೆಂಗಳೂರಿನಂತಹ ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ಪ್ರದೇಶದಲ್ಲಿ ಎನ್-95 (N95) ಮಾಸ್ಕ್ ಧರಿಸುವುದು ಸೂಕ್ತ ಎಂದು ಹೇಳಲಾಗಿದೆ.
ಪ್ರಸ್ತುತ ಚಳಿಗಾಲದ ಹವಾಮಾನ ಮತ್ತು ಸ್ಥಳೀಯ ನಿರ್ಮಾಣ ಕಾಮಗಾರಿಗಳು, ವಾಹನ ಸಂಚಾರದಿಂದಾಗಿ ಮಾಲಿನ್ಯದ ಮಟ್ಟ 150ರ ಗಡಿ ದಾಟಿದೆ. ವಿಶೇಷವಾಗಿ ಹೆಬ್ಬಾಳ ಮತ್ತು ವಿವೇಕಾನಂದ ನಗರದ ಭಾಗಗಳಲ್ಲಿ AQI 150 ದಾಟಿದೆ.
ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?
- ಉತ್ತಮ- 0-50 (AQI)
- ಮಧ್ಯಮ – 50-100 (AQI)
- ಕಳಪೆ – 100-150 (AQI)
- ಅನಾರೋಗ್ಯಕರ – 150-200 (AQI)
- ಗಂಭೀರ – 200 ರಿಂದ 300 (AQI)
- ಅಪಾಯಕಾರಿ – 300 -500 (AQI)
ಇದನ್ನೂ ಓದಿ: ಕೊನೆಯ ಎಸೆತದಲ್ಲಿ ಸಿಕ್ಸರ್, ದಾಖಲೆಯ ದ್ವಿಶತಕ.. ಅಮನ್ ಆಟಕ್ಕೆ ಶಮಿ, ಮುಕೇಶ್ ಸುಸ್ತು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us