/newsfirstlive-kannada/media/media_files/2026/01/09/smriti-and-kour-2026-01-09-07-09-30.jpg)
5 ತಂಡಗಳು, 5 ನಾಯಕಿಯರು, ಎಲ್ಲರದ್ದೂ ಒಂದೇ ಗುರಿ. ಡಬ್ಲ್ಯೂ.ಪಿ.ಎಲ್ ಚಾಂಪಿಯನ್ ಪಟ್ಟಕ್ಕೇರೋದು.! ಈ ಬಾರಿ ವುಮೆನ್ಸ್ ಪ್ರೀಮಿಯರ್ ಲೀಗ್, ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿರುತ್ತದೆ. ಕಪ್ ಗೆಲ್ಲೋದು ಅಷ್ಟು ಸುಲಭ ಅಲ್ಲವೇ ಅಲ್ಲ. ಯಾಕಂದ್ರೆ ಹರಾಜಿನಲ್ಲಿ ಬೇಕಾದ ಆಟಗಾರ್ತಿಯರನ್ನ ಖರೀದಿ ಮಾಡಿರುವ ಫ್ರಾಂಚೈಸಿಗಳು, ತಂಡವನ್ನ ಈ ಹಿಂದೆಗಿಂತಲೂ ಬಲಿಷ್ಟಗೊಳಿಸಿದ್ದಾರೆ. ಜೊತೆಗೆ ತಂಡಕ್ಕೆ ಹೊಸ ನಾಯಕಿಯರ ನೇಮಕ, ಟೂರ್ನಿಯ ರೋಚಕತೆ ಮತ್ತಷ್ಟು ಹೆಚ್ಚಿಸಿದೆ.
ಸ್ಮೃತಿ ಮಂದಾನ
ಅನುಭವಿ ಆಟಗಾರ್ತಿ ಸ್ಮೃತಿ ಮಂದಾನ, ಬೆಂಗಳೂರು ತಂಡವನ್ನ ಮುನ್ನಡೆಸಲಿದ್ದಾರೆ. ಕೂಲ್ ಌಂಡ್ ಕಂಪೋಸ್ಡ್ ಲೀಡರ್ ಆಗಿರುವ ಸ್ಮೃತಿ, ಒತ್ತಡದ ಸಂದರ್ಭವನ್ನ ಚೆನ್ನಾಗಿ ನಿಭಾಯಿಸುತ್ತಾರೆ. ತಂಡದ ಸಹ ಆಟಗಾರ್ತಿಯರ ಜೊತೆ ಉತ್ತಮ ಬಾಂಡಿಂಗ್ ಹೊಂದಿರುವ ಆರ್​ಸಿಬಿ ನಾಯಕಿ, ಯುವ ಆಟಗಾರ್ತಿಯರ ಪಾಲಿಗೆ TRUE LEADER. ಆನ್​ಫೀಲ್ಡ್​ನಲ್ಲಿ ಯಾವತ್ತೂ ಎಮೋಷನ್ ತೋರಿಸಿದ ಸ್ಮೃತಿ, ಮೆಚ್ಯೂರ್ಡ್​ ಲೀಡರ್ ಕೂಡ ಹೌದು.
ಇದನ್ನೂ ಓದಿ:ಕಹಿ ಘಟನೆ ಮರೆತು.. ಹೊಸ ವರ್ಷದಲ್ಲಿ ಹೊಸ ಬದುಕಿಗೆ ಸಜ್ಜಾಗ್ತಿದ್ದಾರೆ ಬಿಗ್ ಸ್ಟಾರ್ಸ್​..!
/filters:format(webp)/newsfirstlive-kannada/media/media_files/2026/01/08/rcb-wpl-2026-01-08-14-14-11.jpg)
ಹರ್ಮನ್ ಪ್ರೀತ್​​ ಕೌರ್
ಅಂಬಾನಿ ಬ್ರಿಗೇಡ್​ನ ಸಾರಥಿ ಹರ್ಮನ್​​ಪ್ರೀತ್ ಕೌರ್, ವುಮೆನ್ಸ್ ಪ್ರೀಮಿಯರ್ ಲೀಗ್​​ನ ಮೋಸ್ಟ್ ಸಕ್ಸಸ್​​ಫುಲ್ ಕ್ಯಾಪ್ಟನ್. ಸಹ ಆಟಗಾರ್ತಿಯರ ಜೊತೆ ಉತ್ತಮ ಸಂಪರ್ಕ, ಭಾಂದವ್ಯ ಹೊಂದಿರುವ ಹರ್ಮನ್, ಡ್ರೆಸಿಂಗ್​ ರೂಮ್​ನಲ್ಲಿ ಎಲ್ಲಾರ ಅಭಿಪ್ರಾಯಗಳನ್ನ ಮುಕ್ತ ಮನಸ್ಸಿನಲ್ಲಿ ಆಲಿಸುತ್ತಾರೆ. ಟಫ್ ಮೈಂಡ್​ಸೆಟ್ ಹೊಂದಿರುವ ಮುಂಬೈ ನಾಯಕಿ, ಒತ್ತಡದ ಸಂದರ್ಭದಲ್ಲೂ ಪರ್ಫಾಮ್ ಮಾಡೋ ಸಾಮರ್ಥ್ಯ ಹೊಂದಿದ್ದಾರೆ.
/filters:format(webp)/newsfirstlive-kannada/media/media_files/2026/01/09/jemimah-rodrigues-2026-01-09-07-12-07.jpg)
ಡೆಲ್ಲಿ ಕ್ಯಾಪಿಟಲ್ಸ್, ಜೆಮಿಮಾ ರೋಡ್ರಿಗಸ್
25 ವರ್ಷದ ಜೆಮಿಮಾ ರೋಡ್ರಿಗಸ್, ಡಬ್ಲ್ಯೂ.ಪಿ.ಎಲ್​ನಲ್ಲಿ ಮೊದಲ ಬಾರಿ ತಂಡವನ್ನ ಮುನ್ನಡೆಸುತ್ತಿದ್ದಾರೆ. ಅಗ್ರೆಸಿವ್ ಲೀಡರ್ ಎನಿಸಿಕೊಂಡಿರೋ ಜೆಮಿಮಾ, ಸ್ಮಾರ್ಟ್ ಥಿಂಕರ್ ಕೂಡ ಹೌದು. ಆನ್​ಫೀಲ್ಡ್​​ನಲ್ಲಿ ಯಾವಾಗಲೂ ಎನರ್ಜೆಟಿಕ್ ಆಗಿರುವ ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ, ಬಿಗ್ ಮ್ಯಾಚ್ ಪ್ಲೇಯರ್ ಕೂಡ ಹೌದು. ಸಹ ಆಟಗಾರ್ತಿಯ ಜೊತೆ ಹೊಂದಾಣಿಕೆ, ತಂಡದ ಹಿರಿಯ ಆಟಗಾರ್ತಿಯರಿಂದ ಪಾಠ ಕಲಿಯಲು ಜೆಮಿಮಾ ಸದಾ ಮುಂದಿರ್ತಾರೆ.
ಗುಜರಾತ್ ಜೈಂಟ್ಸ್​, ಌಶ್ ಗಾರ್ಡನರ್
ಸೂಪರ್​ಸ್ಟಾರ್ ಆಲ್​ರೌಂಡರ್ ಌಶ್ಲೆ ಗಾರ್ಡನರ್​​​​​​​​​​​​​​​​​, ಗುಜರಾತ್ ಜೈಂಟ್ಸ್​ ತಂಡದ ಫುಲ್ ಟೈಮ್ ಕ್ಯಾಪ್ಟನ್ ಆಗಿ ನೇಮಕಗೊಂಡಿದ್ದಾರೆ. ಟ್ಯಾಕ್ಟಿಕಲಿ ಅತ್ಯುತಮ ನಾಯಕಿ ಎನಿಸಿಕೊಂಡಿರೋ ಗಾರ್ಡನರ್​​ಗೆ ಕ್ರಿಕೆಟಿಂಗ IQ ಸಹ ಅತ್ಯುತಮವಾಗಿದೆ. ಯುವ ಆಟಗಾರ್ತಿಯರಿಗೆ ಇನ್ಸ್​ಪಿರೇಷನ್ ಆಗಿರುವ ಌಶ್, ಮೆಂಟಲಿ ತುಂಬಾ ಸ್ಟ್ರಾಂಗ್. ಎದುರಾಳಿಗಳಿಗೆ ಟಫ್ ಕಾಂಪಿಟೇಟರ್ ಆಗಿರುವ ಗುಜರಾತ್ ನಾಯಕಿ, ತನ್ನ ಆಲ್​ರೌಂಡ್ ಆಟದಿಂದ ಪಂದ್ಯದ ಮೇಲೆ ಇಂಪ್ಯಾಕ್ಟ್ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ.
ಇದನ್ನೂ ಓದಿ:RCBನಲ್ಲಿ ಪವರ್​ ಹಿಟ್ಟರ್ಸ್.. ಸಿಂಹಿಣಿಯರು ಯುದ್ಧಕ್ಕೆ ರೆಡಿ..!
/filters:format(webp)/newsfirstlive-kannada/media/media_files/2026/01/09/jemimah-rodrigues-1-2026-01-09-07-11-28.jpg)
ಮೆಗ್ ಲ್ಯಾನಿಂಗ್
ಉತ್ತರ್ ಪ್ರದೇಶ್ ವಾರಿಯರ್ಸ್​​ ತಂಡಕ್ಕೆ ಅನುಭವಿ ಮೆಗ್​ ಲ್ಯಾನಿಂಗ್ ಹೊಸ ನಾಯಕಿ. ತಾಳ್ಮೆ ಮೆಗ್​ ಲ್ಯಾನಿಂಗ್ ದೊಡ್ಡ ಶಕ್ತಿ. ಸ್ಟ್ರಾಟಜಿಯಲ್ಲಿ ಕ್ಲಾರಿಟಿ, ಅದ್ಭುತ ಪ್ಲೇಯರ್ ಮ್ಯಾನೇಜ್ಮೆಂಟ್ ಸ್ಕಿಲ್ಸ್, ಎಕ್ಸಲೆಂಟ್ ಕಮ್ಯೂನಿಕೇಷನ್, ಎಲೀಟ್ ಲೀಡರ್​ಶಿಪ್​​​​​​​​ ಕ್ವಾಲಿಟೀಸ್ ಇವೆಲ್ಲವೂ ಮೆಗ್​ ಲ್ಯಾನಿಂಗ್​​​​​​​ ಸ್ಟ್ರೆಂಥ್. ಕ್ರಿಕೆಟ್ ಇತಿಹಾಸದಲ್ಲೇ ಮೋಸ್ಟ್ ಸಕ್ಸಸ್​​ಫುಲ್ ನಾಯಕಿ ಎನಿಸಿಕೊಂಡಿರೋ ಲ್ಯಾನಿಂಗ್, ಯು.ಪಿ ತಂಡದ ಹಣೆಬರಹ ಬದಲಾಯಿಸೋಕೆ ಹೊರಟಿದ್ದಾರೆ. ಬಿಗ್​​ಬ್ಯಾಷ್ ಲೀಗ್, ದ ಹಂಡ್ರೆಡ್ ವುಮೆನ್ಸ್ ಕಾಂಪಿಟೇಷನ್, WCPLಗಿಂತ ಕ್ವಾಲಿಟಿ ಲೀಗ್ ಎನಿಸಿಕೊಂಡಿರೋ ವುಮೆನ್ಸ್ T20 ಪ್ರೀಮಿಯರ್ ಲೀಗ್, ಆಟಕ್ಕಿಂತ ಹೆಚ್ಚು ಸದ್ದು ಮಾಡಿರೋದೇ ಸಾರಥಿಗಳ ಸಮರದಿಂದ. ಈ ಸೀಸನ್​ನಲ್ಲೂ ಕ್ಯಾಪ್ಟನ್ಸ್​ ವಾರಿ ಸಾಕಷ್ಟು ಥ್ರಿಲ್ಲಿಂಗ್ ಆಗಿರೋದ್ರಲ್ಲಿ, ಎರಡು ಮಾತಿಲ್ಲ.
ಇದನ್ನೂ ಓದಿ: ‘ಟಾಕ್ಸಿಕ್’​ನಲ್ಲಿ ಯಶ್ ಕಿವಿ ಕಚ್ಚಿದ ನಟಿ ಯಾರು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us