/newsfirstlive-kannada/media/media_files/2025/08/18/tumakuru-sushmita-1-2025-08-18-13-33-59.jpg)
ತುಮಕೂರು: ಸೈಟ್ ನೀಡಲಿಲ್ಲ, ಮಕ್ಕಳೂ ಆಗಿಲ್ಲ ಅಂತೇಳಿ ಹೆಂಡತಿಯ ಜೀವ ತೆಗೆದ ಆರೋಪ ತುಮಕೂರಲ್ಲಿ ಕೇಳಿಬಂದಿದೆ. ನಗರದ ಎಸ್ಎಸ್ ಪುರಂನ 3ನೇ ಕ್ರಾಸ್ ನಿವಾಸಿ ಸುಷ್ಮಿತಾ (23) ಜೀವ ಕಳೆದುಕೊಂಡಿದ್ದಾಳೆ.
ಏನಿದು ಪ್ರಕರಣ..?
ಕಳೆದ ಒಂದೂವರೆ ವರ್ಷದ ಹಿಂದೆ ಮಾಗಡಿ ಮೂಲದ ಸುಷ್ಮಿತಾಳನ್ನು ಕೊರಟಗೆರೆ ತಾಲೂಕಿನ ಪುಟ್ಟಸಂದ್ರ ಗ್ರಾಮದ ಮೋಹನ್ ಎಂಬಾತ ಮದುವೆ ಆಗಿದ್ದ. ಆರಂಭದಲ್ಲಿ ಚೆನ್ನಾಗಿದ್ದ ಮೋಹನ್, ಸುಷ್ಮಿತಾ ಬಳಿ ಆಕೆಯ ತಂದೆಯಿಂದ ಸೈಟ್ ಕೊಡಿಸುವಂತೆ ದಂಬಾಲು ಬಿದ್ದಿದ್ದ ಎನ್ನಲಾಗಿದೆ. ಇದೇ ವಿಚಾರ ವಿಕೋಪಕ್ಕೆ ಹೋಗಿ ಸುಷ್ಮಿತಾ ಜೀವ ಕಳೆದುಕೊಂಡಿದ್ದಾಳೆ. ನೇಣು ಬಿಗಿದ ಸ್ಥಿತಿಯಲ್ಲಿ ಸುಷ್ಮಿತಾ ಪತ್ತೆ ಆಗಿದ್ದಾರೆ.
ಇದನ್ನೂ ಓದಿ:ಮಂತ್ರಮುಗ್ಧಗೊಳಿಸೋ ಅಪರೂಪದ ‘ರಕ್ತ ಚಂದ್ರ’ ಗ್ರಹಣ..!
ಸುಷ್ಮಿತಾ ಪೋಷಕರು ಮಾಡುವ ಆರೋಪದ ಪ್ರಕಾರ.. ಪತಿ ಮೋಹನ್ ನಿತ್ಯ ಸೈಟು ಮತ್ತು ಹಣಕ್ಕಾಗಿ ಪೀಡಿಸುತ್ತಿದ್ದ. ಮೋಹನ್ ಮಾತ್ರವಲ್ಲ ಆತನ ತಂದೆ ಮತ್ತು ತಾಯಿ ಕೂಡ ಮಗಳಿಗೆ ಹಿಂಸೆ ನೀಡುತ್ತಿದ್ದರು. ಇದೀಗ ಆಕೆಯ ಜೀವ ತೆಗೆದು ನೇಣು ಹಾಕಿದ್ದಾರೆ. ಈ ಮುಂಚೆ ಮೋಹನ್ ಹಲವು ಬಾರಿ ಹಲ್ಲೆ ಮಾಡಿದ್ದ. ಅನೇಕ ಬಾರಿ ರಾಜಿ ಸಂಧಾನ ಕೂಡ ಮಾಡಿದ್ದೇವು ಎಂದು ಕಣ್ಣೀರು ಇಟ್ಟಿದ್ದಾರೆ.
ಅಮ್ಮನಿಗೆ ಕೊನೆಯ ಮೆಸೇಜ್..!
ನಿನ್ನೆ ಸಂಜೆ 4.48ರ ಹೊತ್ತಿಗೆ ಸುಷ್ಮಿತಾ ತನ್ನ ತಾಯಿಗೆ ಕೊನೆಯ ಬಾರಿಗೆ ಮಸೇಜ್ ಮಾಡಿದ್ದಾಳೆ. ಅತ್ತೆ ಮಾವ ಬಂದಿದ್ದಾರೆ, ಅವರು ಹೋದ್ಮೇಲೆ ಮಾತಾಡ್ತೀನಿ ಎಂದು ಸುಷ್ಮಿತಾ ಮೆಸೇಜ್ ಮಾಡಿದ್ದಾಳೆ. ಈಗ ನೋಡಿದ್ರೆ ಸುಷ್ಮಿತಾ ಬಗ್ಗೆ ಕೆಟ್ಟ ಸುದ್ದಿಯೊಂದು ಹೊರಬಿದ್ದಿದೆ.
ಇದನ್ನೂ ಓದಿ:ಕರಾವಳಿ ಜಿಲ್ಲೆಗಳಿಗೆ ಆಗಸ್ಟ್ 24 ರವರೆಗೆ ಆರೇಂಜ್, ಯೆಲ್ಲೋ ಆಲರ್ಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ