/newsfirstlive-kannada/media/media_files/2025/08/07/dk_shivakumar_bike-2025-08-07-08-57-12.jpg)
ಬೆಂಗಳೂರು: ಹೆಬ್ಬಾಳ ಫ್ಲೈಓವರ್ ಮೇಲೆ ಪರಿಶೀಲನೆಗಾಗಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಡಿಯೋ ಬೈಕ್ ಅನ್ನು ಚಾಲನೆ ಮಾಡಿದ್ದರು. ಆದ್ರೆ ಈ ಬೈಕ್ ಮೇಲೆ 18,500 ರೂಪಾಯಿ ದಂಡ ಇತ್ತು. ಸದ್ಯ ಈ ಹಣವನ್ನು ಒಂದೇ ಬಾರಿಗೆ ಮಾಲೀಕ ಪಾವತಿ ಮಾಡಿದ್ದಾನೆ. ಇನ್ನು ಈ ಸುದ್ದಿನ ವರದಿ ಮಾಡಿದ್ದೇ ನ್ಯೂಸ್ಫಸ್ಟ್. ಹೀಗಾಗಿ ದಂಡ ಕಟ್ಟಿಸಿಕೊಳ್ಳಲಾಗಿದೆ ಎಂದು ಟ್ರಾಫಿಕ್ ಪೊಲೀಸರು ಎಕ್ಸ್ ಪೋಸ್ಟ್ ಅನ್ನು ನ್ಯೂಸ್ಫಸ್ಟ್ಗೆ ಟ್ಯಾಗ್ ಮಾಡಿದ್ದಾರೆ.
ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೆಬ್ಬಾಳದಲ್ಲಿ ನಿರ್ಮಾಣಗೊಂಡ ಮೇಲ್ಸೆತುವೆಯ ಕಾಮಗಾರಿ ವೀಕ್ಷಣೆಗಾಗಿ ಅಧಿಕಾರಿಗಳೊಂದಿಗೆ ಬಂದಿದ್ದರು. ಈ ವೇಳೆ ಸಚಿವ ಬೈರತಿ ಸುರೇಶ್, ಶಾಸಕ ಎನ್.ಎ ಹ್ಯಾರಿಸ್ ಕೂಡ ಇದ್ದರು. ಡಿ.ಕೆ ಶಿವಕುಮಾರ್ ಅವರು ಡಿಯೋ ಬೈಕ್ ಅನ್ನು ಓಡಿಸಿದ್ದರು. ಇನ್ನೊಂದು ಬೈಕ್ ಚಾಲನೆ ಮಾಡುತ್ತಿದ್ದ ಶಾಸಕ ಎನ್.ಎ ಹ್ಯಾರಿಸ್ ಹೆಲ್ಮೆಟ್ ಇಲ್ಲದೇ ಚಾಲನೆ ಮಾಡಿರುವುದು ಕಂಡು ಬಂದಿತ್ತು.
ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬದ ಖರೀದಿಗಾಗಿ ಮಾರ್ಕೆಟ್ಗೆ ಬರುವವರೇ ಎಚ್ಚರ..ಎಚ್ಚರ; ಎಲ್ಲಿ ನೋಡಿದರೂ ಟ್ರಾಫಿಕ್
ಆದರೆ ಡಿಸಿಎಂ ಡಿ.ಕೆ ಶಿವಕುಮಾರ್ ಚಾಲನೆ ಮಾಡಿದ್ದ ಡಿಯೋ ಬೈಕ್ ಮೇಲೆ ಸಿಗ್ನಲ್ ಜಂಪ್, ಹೆಲ್ಮೆಟ್ ಇಲ್ಲದೇ ಚಾಲನೆ ಸೇರಿ 34 ಪ್ರಕರಣಗಳು ಮೇಲೆ ಇದ್ದವು. ಹೀಗಾಗಿ ಒಟ್ಟು 18,500 ರೂಪಾಯಿ ದಂಡ ಇತ್ತು. ಇದೀಗ ಬೈಕ್ನ ಅಸಲಿ ಮಾಲೀಕರನ್ನ ಪತ್ತೆ ಹಚ್ಚಿದ ಹೆಬ್ಬಾಳದ ಟ್ರಾಫಿಕ್ ಪೊಲೀಸರು ದಂಡದ ಹಣ ಕಟ್ಟಿಸಿಕೊಂಡಿದ್ದಾರೆ. ಒಂದೇ ಬಾರಿಗೆ ಎಲ್ಲ ಮೊತ್ತವನ್ನು ಮಾಲೀಕ ಪಾವತಿ ಮಾಡಿದ್ದಾನೆ.
ಹೆಬ್ಬಾಳದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಫೈಓವರ್ ವೀಕ್ಷಣೆಗಾಗಿ ಡಿ.ಕೆ ಶಿವಕುಮಾರ್ ಅವರು KA 04 JZ 2087 ನಂಬರಿನ ಡಿಯೋ ಬೈಕ್ ಅನ್ನು ಚಾಲನೆ ಮಾಡಿದ್ದರು. ಆದರೆ ಇದರ ಮೇಲೆ ದೊಡ್ಡ ಮೊತ್ತದ ದಂಡ ಇರುವುದು ಗೊತ್ತಾಗಿ ಎಲ್ಲೆಡೆ ಸುದ್ದಿ ಹರಡಿತ್ತು. ಇದರಿಂದ ಪರಿಶೀಲನೆ ಕೈಗೊಂಡಿದ್ದ ಟ್ರಾಫಿಕ್ ಪೊಲೀಸರು ಬೈಕ್ ಮಾಲೀಕನನ್ನ ಪತ್ತೆ ಹಚ್ಚಿ ಎಲ್ಲ ಹಣವನ್ನ ಕಟ್ಟಿಸಿಕೊಂಡಿದ್ದಾರೆ. ಈ ಸಂಬಂಧದ ಆರ್ಟಿ ನಗರದ ಟ್ರಾಫಿಕ್ ಪೊಲೀಸರು ಎಕ್ಸ್ ಪೋಸ್ಟ್ ಅನ್ನು ನ್ಯೂಸ್ ಫಸ್ಟ್ಗೆ ಟ್ಯಾಗ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ